ಬಿಜೆಪಿ ದೇಶದಲ್ಲಿಯೇ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ: ಬಸವರಾಜ್ ಕ್ಯಾವಟರ್

KannadaprabhaNewsNetwork |  
Published : Sep 06, 2024, 01:00 AM IST
ಕಾರಟಗಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಬುಧವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಬಿಜೆಪಿ ದೇಶದಲ್ಲಿಯೇ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ. ೧೮ ಕೋಟಿ ಸದಸ್ಯರು ಬಿಜೆಪಿಯಲ್ಲಿದ್ದಾರೆ.

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕಾರಟಗಿಯಲ್ಲಿ ಚಾಲನೆ

ಕನ್ನಡಪ್ರಭ ವಾರ್ತೆ ಕಾರಟಗಿ

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಮಾಡುವ ಗುರಿ ಹೊಂದಿದ್ದು, ಪಕ್ಷದ ಸದಸ್ಯತ್ವ ಪಡೆಯಲು ಕ್ಷೇತ್ರದಲ್ಲಿ ಯುವ ಸಮೂಹ ಸ್ವಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಇಲ್ಲಿನ ನವಲಿ ವೃತ್ತದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸೆ. ೨೫ರವರೆಗೆ ಮೊದಲ ಹಂತದ ಸದಸ್ಯತ್ವ ನೋಂದಣಿ ನಡೆಯಲಿದೆ. ಪಕ್ಷದ ಎಲ್ಲ ಹಿರಿ-ಕಿರಿಯ ಮುಖಂಡರ ನೇತೃತ್ವದಲ್ಲಿ ಸಾಮೂಹಿಕ ಸದಸ್ಯತ್ವ ಆಂದೋಲನ ನಡೆಸಲಾಗುವುದು ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ್ ಕ್ಯಾವಟರ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ, ಕಾಂಗ್ರೆಸ್ ನಾಯಕ ಆಧಾರಿತ ಪಕ್ಷ. ಕಾಂಗ್ರೆಸ್‌ಗೆ ಕಾರ್ಯಕರ್ತರು ಮುಖ್ಯವಲ್ಲ. ಕುಟುಂಬ ಇದೆಯೋ ಇಲ್ಲವೋ ಎಂಬುದು ಮುಖ್ಯ. ಬಿಜೆಪಿಯಲ್ಲಿ ಉಚಿತವಾಗಿ ಸದಸ್ಯತ್ವ ಮಾಡುತ್ತಿದ್ದೇವೆ. ಬಿಜೆಪಿ ದೇಶದಲ್ಲಿಯೇ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ. ೧೮ ಕೋಟಿ ಸದಸ್ಯರು ಬಿಜೆಪಿಯಲ್ಲಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಮುಸಾಲಿ, ಶಿವಶರಣೇಗೌಡ ಯರಡೋಣಾ, ಪುರಸಭೆ ಮಾಜಿ ಸದಸ್ಯ ಸಿದ್ರಾಮಯ್ಯಸ್ವಾಮಿ ಹಿರೇಮಠ ಮಾತನಾಡಿದರು.

ಅಭಿಯಾನಕ್ಕೆ ಚಾಲನೆ:ಮಾಜಿ ಶಾಸಕ ಬಸವರಾಜ ದಢೇಸೂಗೂರು ಸಂದೀಪ್ ಎನ್ನುವ ಯುವಕನಿಗೆ ಸದಸ್ಯತ್ವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ನವಲಿ ವೃತ್ತದಲ್ಲಿನ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿ ಮಳಿಗೆಗಳಿಗೆ ತೆರಳಿ ಅಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿದರು.

ಈ ವೇಳೆ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಅಶ್ವಿನಿ ದೇಸಾಯಿ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಚೆಳ್ಳೂರು,

ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ್, ಸೋಮಶೇಖರ ಬೇರಿಗೆ, ಆನಂದ ಮ್ಯಾಗಳಮನಿ ಮತ್ತು ಫಕೀರಪ್ಪ ನಾಯಕ್, ಸಾಮಾಜಿಕ ಜಾಲತಾಣದ ಸಂಚಾಲಕ ವೀರೇಂದ್ರ ದಿವಟರ್, ಮುಖಂಡರಾದ ಬಾವಿ ಶರಣಪ್ಪ, ಜಿ.ತಿಮ್ಮನಗೌಡ, ಗುರುಸಿದ್ದಪ್ಪ ಯರಕಲ್, ಉಮೇಶ ಸಜ್ಜನ್, ಬಿ.ಕಾಶಿ ವಿಶ್ವನಾಥ, ಪ್ರಭುರಾಜ್ ಬೂದಿ, ರವಿಸಿಂಗ್ ವಕೀಲರು, ಬಸವರಾಜ್ ಎತ್ತಿನಮನಿ, ಧನಂಜಯ್, ಅಯೋಧ್ಯ ಸ್ವರಾಜ್, ಆದಿಲ್ ಪಾಶಾ ಮುಸ್ಟೂರು, ಶರಣಬಸವರೆಡ್ಡಿ, ದೇವರಾಜ್ ನಾಯಕ್, ಶ್ರೀಶೈಲಗೌಡ ಚಳ್ಳೂರು, ಪಂಪಾಪತಿ ಜಂತಗಲ್, ಯಮನೂರಪ್ಪ ಸಜ್ಜನ್, ವಿಕ್ರಂ ಮೇಟಿ ಮತ್ತಿತರರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್