ಕನ್ನಡಪ್ರಭ ವಾರ್ತೆ ಬೀಳಗಿ
ಬೀಳಗಿ ಕ್ರಾಸ್ ಹತ್ತಿರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಬೀಳಗಿ ವಿಧಾನ ಸಭಾ ಕ್ಷೇತ್ರದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂಎಲ್‌ಎ, ಎಪಿಂಗಳಿಗೆ ಗೆಲ್ಲಿಸಿದರೆ ಸಾಲದು, ನಮಗೆ ಬೇಕಾಗಿರುವುದು ಗ್ರಾಮ ಮಟ್ಟದ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲುವು ಬಹಳ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಿದಾಗ ನಮ್ಮ ಗ್ರಾಮ, ರಾಜ್ಯ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಬೇರೆ ದೇಶದಲ್ಲಿ ಹೋದಾಗ ನಮ್ಮ ದೇಶದ ಗೌರವ ಹೆಚ್ಚಿಸುವ ಕೆಲಸ ನಡೆಯಬೇಕಾಗಿದೆ. ನಮ್ಮ ದೇಶವು ಅಭಿವೃದ್ಧಿ ಸಂಕೇತವಾಗಿದೆ. ನಮ್ಮ ರೈತರು ಯಾವ ಬೆಳೆ ಬೆಳೆದರೆ ಅದನ್ನು ತಿಳಿದು ಬೆಳೆಗಳನ್ನು ಬೆಳೆದರೆ ರೈತರು ಸಮೃದ್ಧ ಅರ್ಥಿಕ ಮಟ್ಟ ಸುಧಾರಿಸಿಕೊಳ್ಳಬಹುದು. ಬಿಜೆಪಿ ಕಾರ್ಯಕರ್ತರು ಮತ್ತು ಬೂತಮಟ್ಟದ ಪ್ರಮುಖರು ತಮಗೆ ನೀಡಿದ ಜವಾಬ್ದಾರಿಯಿಂದ ಕೆಲಸ ಮಾಡಿ ಬೂತ್ ಮಟ್ಟದಲ್ಲಿ ಗೆದ್ದರೆ ಮಾತ್ರ ಮುಂದಿನ ಎಲ್ಲವೂ ಗೆಲ್ಲಲು ಸಾಧ್ಯ. ನನ್ನ ಅಧಿಕಾರ ಅವಧಿಯಲ್ಲಿ ಯಾವ ಕೆಲಸ ಮಾಡಿದ್ದೇವೆ. ಈಗಿನ ಶಾಸಕ ಜೆ.ಟಿ.ಪಾಟೀಲರು ಬೀಳಗಿ ಮತಕ್ಷೆತ್ರದಲ್ಲಿ ಯಾವ ಕೆಲಸ ಮಾಡಿದ್ದಾರೆ. ಅನುವುದನ್ನು ಜನರ ಮುಂದೆ ತಿಳಿಸಿ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳು ಕುರಿತು ಪ್ರತಿಯೊಂದು ಮತದಾರರ ಮನಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.ನನ್ನ ಅಧಿಕಾರ ಅವಧಿಯಲ್ಲಿ ಮತಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ 40 ಕೋಟಿ ಅನುದಾನ ತಂದಿದ್ದೆ. ಆದರಲ್ಲಿ 400 ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲವು ದಿನಗಳಲ್ಲಿ ಚುನಾವಣೆ ನಡೆದು, ಅಧಿಕಾರ ಅವರ ಬಳಿ ಹೋಯಿತು. ಅನುದಾನ ಅವರ ಕೈಯಲ್ಲಿತ್ತು. ಆ ಅನುದಾನವನ್ನು ಬೇರೆ ಕಡೆಗಳಲ್ಲಿ ವಿನಿಯೋಗಿಸಲಾಗಿದೆ. ಮತದಾರರ ಮತಪಟ್ಟಿಯಲ್ಲಿ ನೈಜ ಮತದಾರರನ್ನು ಕೈ ಬಿಡಲಾಗಿದೆ. ಅಲ್ಲದೇ ಬೇರೆ ಬೇರೆ ಕಡೆ ಇರುವ ಮತದಾರರನ್ನು ನೈಜ ಪಟ್ಟಿಯಲ್ಲಿ ಹೆಸರು ಇರಿಸಲಾಗಿದೆ. ಮೃತರ ಹೆಸರು ಕಡಿಮೆ ಆಗುವಂತೆ ನೋಡಿಕೊಳ್ಳಬೇಕು. ನಮ್ಮ ಜಿಲ್ಲೆಯಲ್ಲಿ ಬೋಗಸ್ ಮತದಾರರು ಹೆಚ್ಚಿಗೆ ಇದ್ದಾರೆ. ಅವುಗಳನ್ನು ಸೂಕ್ಷ್ಮವಾಗಿ ಗಮನನಿಸಿಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರಿ ಮಾತನಾಡಿ, ರಾಷ್ಟ್ರೀಯ ನಿರ್ಮಾಣದ ವಿಚಾರಧಾರೆಗಳನ್ನು ಪ್ರತಿಯೊಬ್ಬ ಮನದಲ್ಲಿ ತುಂಬುವ ಮನೋಭಾವ ಹೊಂದಿದ್ದು, ಬಿಜೆಪಿ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಬಿಜೆಪಿಯ ಚಿಂತನೆ ಅಭಿವೃದ್ಧಿ ಪರವಾದ ಚಿಂತನೆ. ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆ ಯಾರು ಊಹಿಸದಷ್ಟು ಕೆಲಸ ಮಾಡಿದ್ದಾರೆ. ದೋಷರಹಿತ ಮತದಾರರ ಪಟ್ಟಿಯಾಗಬೇಕು. ಕಾಂಗ್ರೆಸ್ ಪಕ್ಷವು ತನ್ನ ಸ್ವಾರ್ಥದ ಭಾವನೆಯಿಂದ ಬಂದಿದೆ. ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಗೆ ತಿಲಾಂಜಲಿ ಇಟ್ಟಿದೆ. ಯುವ ಜನತೆ ಜಾಗೃತರಾಗಿ ಕಾಂಗ್ರೆಸ್ ಪಕ್ಷದ ಬುಡವೇ ಇಲ್ಲದಂತೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದರು.