ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷ: ಅಂದಪ್ಪ ಹಾರೂಗೇರಿ

KannadaprabhaNewsNetwork |  
Published : Apr 07, 2026, 02:30 AM IST
ಪೋಟೊ ಕ್ಯಾಪ್ಸನ್: ಡಂಬಳ ಹೋಬಳಿಯಾಧ್ಯಂತ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಏಪ್ರಿಲ್ 6ಸೋಮವಾರ ದಿನ  ಪ್ರತಿ ಗ್ರಾಮದಲ್ಲಿ ಧ್ವಜಾರೋಹಣ ಮಾಡಿದರು ಅಲ್ಲದೇ ಮೇವುಂಡಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು  ಬೂತ್ ಸಂಖ್ಯೆ 250ರಲ್ಲಿ ಧ್ವಜಾರೋಹಣ ಮಾಡಿ ಚಾಲನೆ ನೀಡಿದ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ. ಪಕ್ಷದ ಕಾರ್ಯಕರ್ತರು ಇದ್ದರು. | Kannada Prabha

ಸಾರಾಂಶ

ಸಂಘಟನೆ, ಸಮರ್ಪಣೆ, ಸಂಘರ್ಷ, ಸೇವೆ ಹಾಗೂ ತ್ಯಾಗದ ತತ್ವಗಳನ್ನು ಅಳವಡಿಸಿಕೊಂಡು ದೇಶಸೇವೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರ ಹಾಗೂ ಕಾರ್ಯಕರ್ತರ ಸೇವೆಯನ್ನು ಸ್ಮರಿಸಬೇಕು.

ಡಂಬಳ: ದೇಶದ ಪ್ರತಿ ರಾಜ್ಯಗಳಲ್ಲಿ ಇರುವ ಲಕ್ಷಾಂತರ ಕಾರ್ಯಕರ್ತರ ಅವಿರತ ಪರಿಶ್ರಮ, ತ್ಯಾಗ ಮತ್ತು ಸಂಘಟನೆಯ ಶಕ್ತಿಯಿಂದ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಡಂಬಳ ಮಂಡಲ ಅಧ್ಯಕ್ಷ ಅಂದಪ್ಪ ಹಾರೂಗೇರಿ ತಿಳಿಸಿದರು.

ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಮೇವುಂಡಿ ಗ್ರಾಮದ ಬೂತ್ ಸಂಖ್ಯೆ 250ರಲ್ಲಿ ಬೂತ್ ಅಧ್ಯಕ್ಷ ಕೋಟೇಶ ಸಿಂದೋಗಿಯವರ ಮನೆಯ ಮೇಲೆ ಪಕ್ಷದ ಧ್ವಜಾರೋಹಣ ಮಾಡಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಘಟನೆ, ಸಮರ್ಪಣೆ, ಸಂಘರ್ಷ, ಸೇವೆ ಹಾಗೂ ತ್ಯಾಗದ ತತ್ವಗಳನ್ನು ಅಳವಡಿಸಿಕೊಂಡು ದೇಶಸೇವೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರ ಹಾಗೂ ಕಾರ್ಯಕರ್ತರ ಸೇವೆಯನ್ನು ಸ್ಮರಿಸಬೇಕು ಮತ್ತು ರೋಣ ಮತಕ್ಷೇತ್ರದಲ್ಲಿ ಪಕ್ಷದ ಶ್ರೇಯಸ್ಸಿಗಾಗಿ ಮತ್ತು ಜನತೆಯ ಹಿತಕ್ಕಾಗಿ ಸದಾ ಶ್ರಮಿಸುತ್ತಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿಯನ್ನು ಮತಕ್ಷೇತ್ರದಲ್ಲಿ ಗಟ್ಟಿಯಾಗಿ ಮತ್ತು ಅಪಾರ ಪಕ್ಷದ ಕಾರ್ಯಕರ್ತರ ಮೂಲಕ ಅಚಲವಾಗಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ ಎಂದರು.

ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಾ ಬಂಡಿ ಮಾತನಾಡಿ, ಪಕ್ಷದ ಸಂಸ್ಥಾಪಕರ ಆದರ್ಶಗಳು ಹಾಗೂ ಕಾರ್ಯಕರ್ತರ ನಿಷ್ಠೆಯೇ ಬಿಜೆಪಿಯನ್ನು ಇಂದಿನ ಮಟ್ಟದಲ್ಲಿ ದೇಶಾದ್ಯಂತ ಉತ್ತುಂಗಕ್ಕೆ ತಂದಿದೆ. ಗ್ರಾಮ ಮಟ್ಟದಲ್ಲೂ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪುರಮಠ, ಹಿರಿಯರಾದ ಮೈಲಾರೆಪ್ಪ ನೋಟಗಾರ, ಗೋಪಾಲ ವಾಲಿಕಾರ, ದೇವಪ್ಪ ತಾಮ್ರಗುಂಡಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಜೇಶ ಅರಕಾಲ, ಪ್ರಕಾಶ ಕೋತಂಬ್ರಿ, ಪ್ರಭು ಕರಮುಡಿ, ಮುತ್ತು ಚಿನ್ನಪ್ಪಗೌಡ್ರ, ಜಿಲ್ಲಾ ಉಪಾಧ್ಯಕ್ಷ ಪ್ರಭು ಕೊರ್ಲಹಳ್ಳಿ, ಮುತ್ತಣ್ಣ ಬಿಸನಳ್ಳಿ, ನಿಂಗಪ್ಪ ಮಡಿವಾಳರ ಹಾಗೂ ಮಹಾಂತೇಶ ಕೊಡಗಾನೂರ, ಸೋಮಶೇಖರಯ್ಯ ಹಿರೇಮಠ, ಮುದಕಪ್ಪ ಮುಳಗುಂದ, ಶಿವಾನಂದ ಬಂಡಿ, ಮಾಂತೇಶ ಬಂಡಿ, ಲಕ್ಷ್ಮಣ ಬೂದಿಹಾಳ, ಮಲ್ಲೇಶ ಪೂಜಾರ, ವಿನಾಯಕ ರಾಠೋಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲೆದಾಟ ತಪ್ಪಿಸಲು ಜನಸ್ಪಂದನ ಜಾರಿ: ಭೀಮಣ್ಣ ನಾಯ್ಕ
ಹಲವರ ತ್ಯಾಗ,ಬಲಿದಾನದಿಂದ ಬಿಜೆಪಿ ಬಲಿಷ್ಠ: ಕೆ.ಎಸ್. ರಾಘವೇಂದ್ರ