ಬಿಜೆಪಿ‌-ಜೆಡಿಎಸ್ ಕಾರ್ಯಕರ್ತರು ಬೈಕ್ ರಾಲಿ: ವಿಜಯೋತ್ಸವ

KannadaprabhaNewsNetwork |  
Published : Jun 10, 2024, 12:30 AM IST
9ಕಕಡಿಯು2. | Kannada Prabha

ಸಾರಾಂಶ

ಕಡೂರು, ಮೂರನೇ ಅವಧಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಕಡೂರಿನಲ್ಲಿ ಬಿಜೆಪಿ‌-ಜೆಡಿಎಸ್ ಕಾರ್ಯಕರ್ತರು ಬೈಕ್ ರಾಲಿ ನಡೆಸಿ ಸಂಭ್ರಮದ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಮೂರನೇ ಅವಧಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಕಡೂರಿನಲ್ಲಿ ಬಿಜೆಪಿ‌-ಜೆಡಿಎಸ್ ಕಾರ್ಯಕರ್ತರು ಬೈಕ್ ರಾಲಿ ನಡೆಸಿ ಸಂಭ್ರಮದ ವಿಜಯೋತ್ಸವ ಆಚರಿಸಿದರು.

ಭಾನುವಾರ ಸಂಜೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕೆಎಲ್ ವಿ ವೃತ್ತದ ಮೂಲಕ ಬಿಜೆಪಿ ಕಚೇರಿ ತನಕ ಸಾವಿರಾರು ಬೈಕ್ ಗಳಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೈಶ್ರೀರಾಂ ಘೋಷಣೆ ಕೂಗುತ್ತಾ ಪಟಾಕಿ ಸಿಡಿಸುತ್ತಾ ಸಾಗಿದರು. ತೆರೆದ ವಾಹನದಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವೈ.ಎಸ್.ವಿ.ದತ್ತ, ಮುಖಂಡ ದಾನಿ ಉಮೇಶ್ ಜನರತ್ತ ಕೈ ಬೀಸಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ‌ ಮಾತನಾಡಿದ ಬೆಳ್ಳಿಪ್ರಕಾಶ್, ಕೇಂದ್ರದಲ್ಲಿ ಮೂರನೇ ಬಾರಿ ಬಿಜೆಪಿ ಸರ್ಕಾರ ರಚನೆಯಾಗಿದೆ. ರಾಜ್ಯದ ಐದು ಸಂಸದರಿಗೆ ಮಂತ್ರಿ ಸ್ಥಾನ ದೊರೆತಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರಧಾನಮಂತ್ರಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ವಿಕಸಿತ ಭಾರತ ವಿಶ್ವ ಗುರುವಾಗಿ ಮುನ್ನಡೆಯುತ್ತದೆ ಎಂದರು.ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಮೈತ್ರಿಯಲ್ಲಿ‌ ಸಮನ್ವಯತೆ ಇದ್ದರೆ ಎಂತಹ ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ಈ ಗೆಲುವೇ ಸಾಕ್ಷಿ. ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ಹೊಸ ಯುಗ ಆರಂಭವಾಗಿದೆ. ಕಡೂರು ಇದಕ್ಕೆ ಹೊರತಲ್ಲ. ಟೀಕಾಕಾರರು‌ ಮೋದಿಯವರ ಜನಪ್ರಿಯತೆ ಮತ್ತು ವರ್ಚಸ್ಸು‌ ಕಡಿಮೆಯಾಗಿದೆ ಎನ್ನುತ್ತಾರೆ. ನೆಹರೂ ಅವರು ಮೂರನೇ ಬಾರಿ ಪ್ರಧಾನಿಯಾಗುವ ಹೊತ್ತಿಗೆ ಅವರ ಜನಪ್ರಿಯತೆ ಕಡಿಮೆಯಾಗಿ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರ್ಕಾರ ರಚನೆಯಾಗಿತ್ತು. ಮೋದಿಯವರ ಜನಪ್ರಿಯತೆ ಅಷ್ಟು ಕಡಿಮೆಯಾಗಿಲ್ಲ ಎಂಬುದನ್ನು ಗಮನಿಸಲಿ ಎಂದರು. ಇದೇ ಸಂಧರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್,ಕಲ್ಮರುಡಪ್ಪ, ದಾನಿ ಉಮೇಶ್, ಬಿದರೆ ಜಗದೀಶ್, ಜಿಗಣೇಹಳ್ಳಿ ನೀಲಕಂಠಪ್ಪ,ಟಿ.ಆರ್, ಲಕ್ಕಪ್ಪ, ಅರೇಕಲ್ ಪ್ರಕಾಶ್, ಶೂದ್ರ ಶ್ರೀನಿವಾಸ್, ಭರತ್ ಕೆಂಪರಾಜು, ಸುನೀತಾ ಜಗದೀಶ್, ಕಾವೇರಿ‌ ಲಕ್ಕಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಬಿದರೆ ಜಗದೀಶ್, ಚೇತನ್ ಕೆಂಪರಾಜು, ಕಡೂರು ಎ.ಮಣಿ, ಶಾಮಿಯಾನ ಚಂದ್ರು, ಅಡಕೆ‌ ಚಂದ್ರು, ಎಚ್.ಸಿ.ಕಲ್ಮರುಡಪ್ಪ ಇದ್ದರು.

9ಕೆಕೆಡಿಯು2. ಕಡೂರಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ