ಹಾನಗಲ್ಲ: ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಗ್ರಾಪಂ ಸದಸ್ಯರು, ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಸೇರಿದಂತೆ ಹತ್ತಾರು ಮುಖಂಡರು, ಅನೇಕ ಕಾರ್ಯಕರ್ತರು ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಪಂ ಸದಸ್ಯ ಸಂಜೀವ್ ಕುಂಟನಹೊಸಳ್ಳಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಾಫರಸಾಬ ಬಾಳೂರ, ಮುಖಂಡರಾದ ನಾಗರಾಜ ಭಿಷ್ಟಣ್ಣನವರ, ಚಂದ್ರಶೇಖರ ಕುಂಟನಹೊಸಳ್ಳಿ, ಅಲ್ತಾಫ್ ಎಲಿಗಾರ, ಗಣೇಶ ಅಗಸನಹಳ್ಳಿ, ವಿರುಪಾಕ್ಷ ಕಲವೀರಣ್ಣನವರ, ಗುಡ್ಡಪ್ಪ ಸವೂರ, ಮಾಲತೇಶ ಕುಂಟನಹೊಸಳ್ಳಿ, ಮಕ್ಬೂಲ್ ಮಟ್ಟಿಮನಿ, ಮೊಹಿದ್ದೀನ್ ಬಾಳೂರ, ಮಾಲತೇಶ ಬಳ್ಳಾರಿ, ಮಂಜುನಾಥ ಕುದರಿ, ಸಂತೋಷ ಹವಳಣ್ಣನವರ, ಮೈಲಾರಿ ಹುಲ್ಲಾಳ, ವಿನಾಯಕ ಹವಳಣ್ಣನವರ ಸೇರಿದಂತೆ ಇನ್ನೂ ಹಲವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಶ್ರೀನಿವಾಸ ಮಾನೆ ಪ್ರತಿಕ್ರಿಯೆ ನೀಡಿ, ಡೋಂಗಿ ನಾಟಕವಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಬಾರಿ ನಾಟಕ ನಡೆಯುವುದಿಲ್ಲ. ಜನರಿಗೆ ಬಿಜೆಪಿಯ ನಿಜ ಮುಖವಾಡದ ದರ್ಶನವಾಗಿದ್ದು, ಅಧಿಕಾರದಿಂದ ಬಿಜೆಪಿ ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಬಿಜೆಪಿಯ ಧೋರಣೆಗಳಿಂದ ಬೇಸತ್ತು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಪಕ್ಷದ ಶಕ್ತಿ ವೃದ್ಧಿಯಾಗುತ್ತಿದೆ. ಈ ಬಾರಿ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿಜಯ ಸಾಧಿಸಲಿದ್ದು, ಪಕ್ಷವೂ ಅಧಿಕಾರಕ್ಕೆ ಬಂದು ಪಂಚ ಗ್ಯಾರಂಟಿಗಳ ಮೂಲಕ ಬಡವರ ಬದುಕು ಬೆಳಗಲಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ಮುಖಂಡರಾದ ದ್ಯಾಮಜ್ಜ ಕರಲಿಂಗಣ್ಣನವರ, ನಾಗರಾಜ್ ಆರೇರ, ಗುಡ್ಡಪ್ಪ ಕುಂಟನಹೊಸಳ್ಳಿ, ಮುಜಾಫರ್ ಹಾವೇರಿ, ಮುಜಿಬ್ ಬಿಜಾಪೂರ, ಪರಶುರಾಮ ಕುಂಟನಹೊಸಳ್ಳಿ, ಬಾಬಣ್ಣ ಆರೇರ, ಮಂಜುನಾಥ ಆರೇರ, ದಾದಾಪೀರ ಬಾಳೂರ, ಮಕ್ಬೂಲ್ ಮುಂಡರಗಿ, ಮಂಜುನಾಥ ಕುದರಿ, ಜಾಫರ್ ಶಾಡಗುಪ್ಪಿ, ಭಾಷಾ ಹರವಿ, ಗಫಾರ ಹರವಿ, ರಾಜೇಶ ಚವ್ಹಾಣ, ಮಂಜುನಾಥ ಚವ್ಹಾಣ ಮೊದಲಾದವರು ಈ ಸಂದರ್ಭದಲ್ಲಿದ್ದರು.