ಝಳಕಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

KannadaprabhaNewsNetwork |  
Published : Sep 18, 2024, 01:52 AM IST
17ಸಿಡಿಎನ್‌1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ವಿಶ್ವದಲ್ಲಿಯೇ ಬಿಜೆಪಿ ಅತೀ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದು ಮಾಜಿ ಸಚಿವ ಅಪ್ಪಾಸಾಬ ಪಟ್ಟಣಶೆಟ್ಟಿ ಹೇಳಿದರು. ಸಮಿಪದ ಝಳಕಿ ಗ್ರಾಮದಲ್ಲಿ ನಡೆದ ಬಿಜೆಪಿ ಇಂಡಿ ಮಂಡಲ ಹಾಗೂ ಭತಗುಣಕಿ ಶಕ್ತಿ ಕೇಂದ್ರದಿಂದ ನಡೆಸಿರುವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಡಚಣ

ವಿಶ್ವದಲ್ಲಿಯೇ ಬಿಜೆಪಿ ಅತೀ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದು ಮಾಜಿ ಸಚಿವ ಅಪ್ಪಾಸಾಬ ಪಟ್ಟಣಶೆಟ್ಟಿ ಹೇಳಿದರು.

ಸಮಿಪದ ಝಳಕಿ ಗ್ರಾಮದಲ್ಲಿ ನಡೆದ ಬಿಜೆಪಿ ಇಂಡಿ ಮಂಡಲ ಹಾಗೂ ಭತಗುಣಕಿ ಶಕ್ತಿ ಕೇಂದ್ರದಿಂದ ನಡೆಸಿರುವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಮಾತನಾಡಿ, ದಲಿತ, ಬಡವರ, ಅಲ್ಪಸಂಖ್ಯಾತರ ಹಾಗೂ ಸಂವಿಧಾನ ಪರ ಎಂದು ಬೊಬ್ಬೆ ಹೊಡೆದುಕೊಳ್ಳುವ ಕಾಂಗ್ರೆಸ್, ಮೀಸಲಾತಿ ರದ್ದುಪಡಿಸುತ್ತೇವೆ ಎಂಬ ರಾಹುಲ ಗಾಂಧಿ ವಿದೇಶದಲ್ಲಿ ನೀಡಿರುವ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತದೆ. ನರೇಂದ್ರ ಮೋದಿ ಪ್ರಧಾನಿಯಾದರೆ ಮೀಸಲಾತಿ ರದ್ದುಪಡಿಸುತ್ತಾರೆಂದು ಆರೋಪಿಸುವ ಕಾಂಗ್ರೆಸ್, ಸಂವಿಧಾನ ಮತ್ತು ಕಾನೂನು ಮೇಲೆ ಎಷ್ಟು ಗೌರವ ಇಟ್ಟಿದ್ದಾರೆಂದು ಸಾರ್ವಜನಿಕ ಮುಂದೆ ಸಾಬೀತು ಪಡಿಸುವಂತೆ ಒತ್ತಾಯಿಸಿದರು.

ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ, ಪ್ರತಿ ಬೂತ್‌ನಲ್ಲಿ ಕನಿಷ್ಠ ಹತ್ತು ಜನರ ತಂಡ ರಚಿಸಿ 300 ಸದಸ್ಯತ್ವ ಮಾಡಬೇಕು ಹಳೆಯ ಕಾರ್ಯಕರನ್ನು ಅಭಿಯಾನದಲ್ಲಿ ಭಾಗಿಯಾಗಿ ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ರಾಜು ಸಗಾಯಿ, ಶ್ರೀಮಂತ ಮೊಗಲಾಯಿ, ರವಿ ತೇಲಿ, ರತ್ನಾಕರ ಕ್ಷೇತ್ರಿ, ಪ್ರವೀಣ ಕಾಪಸೆ, ರವಿ ಹೂಗಾರ, ವಿಠ್ಠಲ ಕಾಗರ, ರಾಜು ಕಟ್ಟಾಯಿ, ಪ್ರಕಾಶ ಬಿರಾದಾರ, ಲಕ್ಷ್ಮಣ ಕಾಗರ, ಬಾಲಕೃಷ್ಣ ಭೋಸಲೆ ಮುಂತಾದವರು ಇದ್ದರು‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಕನ್ನಡಪ್ರಭ
ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡಲು ಸಿದ್ಧ: ಶಾಸಕ ರವಿಕುಮಾರ್‌