ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಬಿಜೆಪಿ: ಎನ್.ರಾಜಶೇಖರ್

KannadaprabhaNewsNetwork |  
Published : Apr 07, 2025, 12:31 AM IST
ಕ್ಯಾಪ್ಷನ6ಕೆಡಿವಿಜಿ33 ದಾವಣಗೆರೆಯಲ್ಲಿ ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಾಲಯದಲ್ಲಿ ಎನ್.ರಾಜಶೇಖರ್ ಪಕ್ಷದ ಧ್ವಜಾರೋಹಣ ನೆರವೇರಿಸಿದರು. | Kannada Prabha

ಸಾರಾಂಶ

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಹಾರ್ದಿಕ ಶುಭಾಶಯಗಳು ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಹೇಳಿದರು.

ಸಂಸ್ಥಾಪನಾ ದಿನ । ಪಕ್ಷದ ಜಿಲ್ಲಾಧ್ಯಕ್ಷ ಅಭಿಪ್ರಾಯ । ಕಾರ್ಯಾಲಯದಲ್ಲಿ ಪಕ್ಷದ ಧ್ವಜಾರೋಹಣ, ಪುಷ್ಪಾರ್ಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಹಾರ್ದಿಕ ಶುಭಾಶಯಗಳು ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಹೇಳಿದರು.

ನಗರದಲ್ಲಿ ಭಾರತೀಯ ಜನತಾ ಪಕ್ಷದ 46ನೇ ಸಂಸ್ಥಾಪನಾ ದಿನದ ಅಂಗವಾಗಿ ಭಾನುವಾರ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಧ್ವಜಾರೋಹಣ, ಪುಷ್ಪಾರ್ಚನೆ ಮಾಡಿ ಮಾತನಾಡಿದರು.

1951ರಲ್ಲಿ ಶಾಮಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಯ ಮತ್ತು ಬಾಲರಾಜ್ ಮದೋಕ್ ಹಾಗೂ ಹಲವು ಹಿರಿಯರ ನೇತ್ರತ್ವದಲ್ಲಿ ದೆಹಲಿಯಲ್ಲಿ ಜನ ಸಂಘ ಸ್ಥಾಪನೆಯಾಯಿತು. 1980ರ ಸಾರ್ವತ್ರಿಕ ಚುನಾವಣೆಯ ಸೋಲಿನ ನಂತರ ಜನ ಸಂಘವನ್ನು ವಿಸರ್ಜನೆ ಮಾಡಿ, 1980 ಏ.6ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಶುಕ್ಲಾ ಅವರ ಉಪಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ ಜೋಶಿ, ಹಲವು ಪ್ರಮುಖರು ಮತ್ತು ಹಿರಿಯರ ಸಮ್ಮುಖ ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾಯಿತು ಎಂದರು.

ಪ್ರಾರಂಭದ ದಿನಗಳಲ್ಲಿ ಅನ್ಯ ಪಕ್ಷದವರು ನೀವು ಕೇವಲ ಇಬ್ಬರು ಸಂಸದರು ಎಂದು ಹಾಸ್ಯ ಮಾಡುತ್ತಿದ್ದ ವೇಳೆ ಮಾನ್ಯ ಅಟಲ್ ಜಿ ಅಂದು ಹೇಳಿದರು ಒಂದು ದಿನ ನಾವು ಪೂರ್ಣ ಅಧಿಕಾರಕ್ಕೆ ಬರುತ್ತೇವೆ, ದೇಶದಲ್ಲಿ ನಾವು ಆಡಳಿತ ಮಾಡುತ್ತೇವೆ ಎಂದು ಭವಿಷ್ಯ ನುಡಿದಿದ್ದರು, ಅವರು ಹೇಳಿದಂತೆ ಇಂದು ಕಳೆದ 10 ವರ್ಷಗಳಿಂದ ಬಿಜೆಪಿ ದೇಶದಲ್ಲಿ ಆಡಳಿತ ನಡೆಸುತ್ತಿದೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಮುನ್ನಡೆಸುತ್ತಿದೆ ಎಂದು ತಿಳಿಸಿದರು.

ನಮಗೆಲ್ಲ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಸ್ಥಾನಮಾನ ನೀಡುವ ಜತೆಗೆ ಸಾಮಾಜಿಕ ಭದ್ರತೆ ನೀಡಿದೆ, ಇಂತಹ ದೇಶಭಕ್ತ ಸಂಘಟನೆಯಲ್ಲಿ ಕಾರ್ಯಕರ್ತರಾಗಿ ಇರುವುದಕ್ಕೆ ಕೆಲಸ ಮಾಡುವುದಕ್ಕೆ ನಾವೆಲ್ಲರೂ ಅದೃಷ್ಟವಂತರು. ರಾಷ್ಟ್ರ ಪುನರ್ ನಿರ್ಮಾಣ, ದೇಶಪ್ರೇಮ, ಅಭಿವೃದ್ಧಿ ರಾಜಕಾರಣದ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಲು ಶ್ರಮಿಸುತ್ತಿರುವ ಬಿಜೆಪಿ ಪಕ್ಷವು ಮತ್ತಷ್ಟು ಉತ್ತುಂಗಕ್ಕೇರಲು ಹಗಲಿರುಳು ಶ್ರಮಿಸೋಣ ಎಂದರು.

ಮಾಜಿ ಶಾಸಕ ಬಸವರಾಜ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಕ್, ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯ್ಕ್, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ.ನಸೀರ್ ಅಹಮದ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಮಂಜಾ ನಾಯ್ಕ್, ಎಚ್.ಎಸ್.ಲಿಂಗರಾಜ್, ನವೀನ್ ಕುಮಾರ್ ಎಚ್.ಬಿ.ಕೊಟ್ರೇಶ್ ಗೌಡ, ಆನಂದ್, ಬಸವರಾಜ್ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ