ಬಿಜೆಪಿ ರಾಷ್ಟ್ರವಾದವನ್ನು ಪ್ರತಿಪಾದಿಸುವ ಪಕ್ಷ: ಅಮರನಾಥ

KannadaprabhaNewsNetwork |  
Published : Mar 05, 2024, 01:36 AM IST
ಫೋಟೋ- 4ಜಿಬಿ6 ಮತ್ತು 4ಜಿಬಿ7 | Kannada Prabha

ಸಾರಾಂಶ

ದೀನದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿಬಂದ ಪಕ್ಷವು ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ಭಾರತದ ಮೂಲೆ ಮೂಲೆಗಳಲ್ಲಿ ತನ್ನ ವಿಚಾರಧಾರೆಯ ಮೂಲಕ ಬಲಗೊಂಡಿದೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಷ್ಟ್ರೀಯವಾದವನ್ನು ಉಸಿರಾಡುವ ರಾಷ್ಟ್ರೀಯವಾದಿ ಪಕ್ಷವಾಗಿ ಜನ ಮನ್ನಣೆ ಗಳಿಸಿದೆ ಎಂದು ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ ಅಭಿಪ್ರಾಯಪಟ್ಟರು.

ಸೋಮವಾರ ಆಳಂದ ಪಟ್ಟಣದ ಎವಿ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಳಂದ ಮಂಡಲ ಬಿಜೆಪಿಯ ನೂತನ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೀನದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿಬಂದ ಪಕ್ಷವು ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂಬುದು ನಮ್ಮ ಹೆಮ್ಮೆ ಎಂದರು.

ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬಿಜೆಪಿಗೆ ಬಲ ತುಂಬಿದವರು ಕಾರ್ಯಕರ್ತರು. ನನ್ನ ಅವಧಿಯಲ್ಲಿ ನನ್ನೊಂದಿಗೆ ಹೆಗಲುಕೊಟ್ಟು ನಾವೆಲ್ಲರೂ ಜೊತೆಯಾಗಿ ನಿಂತು ಪಕ್ಷವನ್ನು ಬಲಪಡಿಸೋಣ ಎಂದರು.

ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಆಳಂದ ಮಂಡಲವು ಪಕ್ಷ ಸಂಘಟನೆಯಲ್ಲಿ ಅಗ್ರಶ್ರೇಣಿಗೇರಲು ಸಂಘಟನಾ ತಂಡದ ಶ್ರಮ ಮಹತ್ವದ್ದಾಗಿದೆ. ಮಂಡಲ ಅದ್ಯಕ್ಷರಾಗಿದ್ದ ಆನಂದ ಪಾಟೀಲ ಅವರ ಸಂಘಟನಾ ನೈಪುಣ್ಯತೆ ಹಾಗೂ ಕಾರ್ಯದರ್ಶಿಗಳ ಸಂಘಟನಾ ಸಾಮಥ್ರ್ಯವು ಮುಂದಿನ ಮಂಡಲ ಸಮಿತಿಗೆ ಆದರ್ಶಪ್ರಾಯವಾಗಲಿ ಎಂದರು.

ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು, ಭಾರತೀಯ ಜನತಾ ಪಾರ್ಟಿಯು ಯುವ ನಾಯಕತ್ವದಲ್ಲಿ ಬೆಳೆಯುವ ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವಾಗಿದೆ. ಜನ ಸಂಘದಿಂದ ಇಂದಿನ ವರೆಗೆ ಪಕ್ಷದ ಚಟುವಟಿಕೆಗಳು ಬಹಳಷ್ಟು ವಿಸ್ತಾರಗೊಂಡಿದೆ. ಮುಂದೆಯೂ ಕೂಡ ಪಕ್ಷ ಸಂಘಟನೆಗೆ ಶ್ರಮಿಸೋಣ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಶಕ್ತಿಯನ್ನು ತೋರಿಸೋಣಾ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಹಣಮಂತರಾವ ಮಾಲಾಜಿ, ವಿಠ್ಠಲರಾವ ಪಾಟೀಲ, ಶ್ರೀಶೈಲ ಪಾಟೀಲ, ಚಂದ್ರಕಾಂತ ಭೂಸನೂರ, ಸಂತೋಷ ಹಾದಿಮನಿ, ಗೌರಿ ಚಿಚಕೋಟಿ, ಸುನೀತಾ ಪೂಜಾರಿ, ಶಿವಾನಂದ ಪಾಟೀಲ, ಶರಣು ಕುಮಸಿ, ಪ್ರ. ಕಾರ್ಯದರ್ಶಿಗಳಾದ ಪ್ರಕಾಶ ಮಾನೆ, ಸೀತಾರಾಮ ಜಮಾದಾರ ಸೇರಿದಂತೆ ಪುರಸಭೆ ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಆಲೂರೆ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಶರಣಗೌಡ ಪಾಟೀಲ ದೇವಂತಗಿ ನಿರೂಪಿಸಿ, ವಂದಿಸಿದರು. ಮಲ್ಲಿಕಾರ್ಜಿನ ತಡಕಲ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’