ರಾಣಿಬೆನ್ನೂರು: ಯುದ್ಧ ಟ್ಯಾಂಕರ್ ಅಳವಡಿಕೆಗಲ್ಲ, ಅದರ ಮೇಲೆ ಶಾಸಕರ ಭಾವಚಿತ್ರ ಹಾಕಲು ಮಾತ್ರ ನಮ್ಮ ವಿರೋಧವಿದೆ ಎಂದು ಬಿಜೆಪಿ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ತಹಸೀಲ್ದಾರ್ ಕಚೇರಿ ಬಳಿ ಆ. 15ರಂದು ಪ್ರತಿಷ್ಠಾಪಿಸಲಿರುವ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಬಳಸಿದ ಟ್ಯಾಂಕರ್‌ಗೆ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಸದನದಲ್ಲಿ ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ನಮ್ಮ ಪಕ್ಷ ಸದಾ ದೇಶದ ಸೈನಿಕರು ಮತ್ತು ಸೈನ್ಯದ ಪರವಾಗಿದೆ. ನಾವು ಯಾರು ಕೂಡ ಅಲ್ಲಿ ಪ್ರತಿಭಟನೆ ಮಾಡಿಲ್ಲ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪಕ್ಷದ ವತಿಯಿಂದ ದೂರು ನೀಡಿದ್ದೇವೆ ಎಂದರು. ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಯುದ್ಧ ಟ್ಯಾಂಕರ್ ಅಳವಡಿಕೆಗೆ ನಗರಸಭೆಯಲ್ಲಿ ಜರುಗಿದ ಸಭೆಯಲ್ಲಿ ಸರ್ವ ಸದಸ್ಯರ ಸರ್ವನಾಮತದಿಂದ ಠರಾವು ಅಂಗೀಕರಿಸಲಾಗಿತ್ತು. ಯುದ್ಧ ಟ್ಯಾಂಕರ್‌ಗೆ ಶಾಸಕರ ಅನುದಾನದಿಂದ ಹಣ ಬಿಡುಗಡೆಯಾಗಿದ್ದರಿಂದ ಅವರು ತಮ್ಮ ಹೆಸರು ಹಾಕಿಕೊಳ್ಳಲಿ. ಅದನ್ನು ಬಿಟ್ಟು ಪಿಕೆಕೆ ಸಂಸ್ಥೆ ಹೆಸರು ಹಾಕಿರುವುದು ಖಂಡನೀಯವಾಗಿದೆ.
ರಾಣಿಬೆನ್ನೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರಸಭಾ ಕ್ರೀಡಾಂಗಣದಲ್ಲಿ ಆ. 15ರಂದು ಬೆಳಗ್ಗೆ 9ಕ್ಕೆ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸುವರು.ತಹಸೀಲ್ದಾರ್ ಆರ್.ಎಚ್. ಭಾಗವಾನ ಧ್ವಜಾರೋಹಣ ನೆರವೇರಿಸುವರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕರೇಗೌಡ ಬಾಗೂರ, ಟಿಎಪಿಸಿಎಂಎಸ್ ಅಧ್ಯಕ್ಷ ಯಲ್ಲರೆಡ್ಡಿ ರಡ್ಡೇರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.