ಚುನಾವಣೆಯಲ್ಲಿ ಶಾಸಕ, ಸಂಸದ ಭಾಗಿ । ಜಯಕ್ಕೆ ನಿರ್ಣಾಯಕವಾದ ಜೆಡಿಎಸ್ ಮತ
ಕನ್ನಡಪ್ರಭ ವಾರ್ತೆ, ಬೀರೂರು.ತೀವ್ರ ಕುತೂಹಲ ಕೆರಳಿಸಿದ್ದ ಬೀರೂರು ಪುರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಾಗ್ಯಲಕ್ಷ್ಮಿ ಮೋಹನ್ ಕುಮಾರ್ ನಿರೀಕ್ಷೆಯಂತೆ ಜೆಡಿಎಸ್ ಸದಸ್ಯನ ಬೆಂಬಲ ಪಡೆದು ಜಯಶೀಲರಾದರು.ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಬೆಳಗ್ಗೆ ಚುನಾವಣೆ ಆರಂಭಿಸಿದಾಗ ನಿಗದಿಯಾಗಿದ್ದ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಜ್ಯೋತಿ ಸಂತೋಷ್ ಕುಮಾರ್ ಹಾಗೂ ಬಿಜೆಪಿ ಸದಸ್ಯೆ ಭಾಗ್ಯಲಕ್ಷ್ಮಿ ಮೋಹನ್ ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು.ಪುರಸಭೆ ಸಭಾಂಗಣಕ್ಕೆ ಏಕಕಾಲದಲ್ಲಿ ಬಿಜೆಪಿ 10 ಸದಸ್ಯರೊಂದಿಗೆ ಜೆಡಿಎಸ್ ನ ಒಬ್ಬ ಸದಸ್ಯ ಹಾಗೂ ಕಾಂಗ್ರೆಸ್ ಒಬ್ಬ ಸದಸ್ಯೆ ಸೇರಿ ಒಟ್ಟು 12 ಸದಸ್ಯರು ಚುನಾವಣೆಗೆ ಹಾಜರಾದರು. ನಂತರ ಕಾಂಗ್ರೆಸ್ ನ 5 ಸದಸ್ಯರು ಬಿಜೆಪಿ ಮತ್ತು ಪಕ್ಷೇತರ ಹಾಗೂ ಜೆಡಿಎಸ್ ನ ತಲಾ ಒರ್ವ ಸದಸ್ಯರು ಸೇರಿದಂತೆ 8 ಸದಸ್ಯರು ಸಭಾಂಗಣಕ್ಕೆ ಆಗಮಿಸಿದಾಗ ಇವರಿಗೆ ಬೆಂಬಲ ನೀಡಲು ಶಾಸಕ ಕೆ.ಎಸ್.ಆನಂದ್ ಮತ್ತು ಹಾಸನ ಲೋಕಸಭಾ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಒಟ್ಟು 10 ಕಾಂಗ್ರೆಸ್ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡರೂ ಅಧ್ಯಕ್ಷ ಪಟ್ಟ ಕೈಹಿಡಿಯಲಿಲ್ಲ.ಪಕ್ಷದ ಸೂಚನೆಯಂತೆ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಿದ ಪತ್ರವನ್ನು ಚುನಾವಣಾಧಿಕಾರಿಗೆ ಶಾಸಕರು ಸಲ್ಲಿಸಿದರು. ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೆಂಬಲದ ಮತ ನಡೆಸಲಾಯಿತು.ಬೆಂಬಲದ ಮತವಾಗಿ ಕಾಂಗ್ರೆಸ್ ಜ್ಯೋತಿ ಸಂತೋಷ್ ಕುಮಾರ್ ಗೆ 10 ಮತ ಪಡೆದರೆ, ಬಿಜೆಪಿ ಸದಸ್ಯೆ ಭಾಗ್ಯಲಕ್ಷ್ಮಿ ಮೋಹನ್ 11 ಮತ ಪಡೆದು ಒಂದು ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಚುನಾವಣಾಧಿಕಾರಿಗೆ ದೂರಿದರು. ಅವರ ಪರಿಸ್ಥಿತಿ ಹೇಗಿದೆ ತಿಳಿದಿಲ್ಲ. ಆದ್ದರಿಂದ ಅವರನ್ನು ಚುನಾವಣೆಗೆ ಕರೆಸುವವರೆಗೂ ಆಯ್ಕೆ ಪ್ರಕ್ರಿಯೆ ಆರಂಬಿಸದಂತೆ ಒತ್ತಾಯಿಸಿದರು ಎಂದು ತಿಳಿದು ಬಂದಿದೆ. ಚುನಾವಣಾಧಿಕಾರಿ ಪೌರಡಳಿತ ನಿಯಮ ಒಳಗೊಂಡ ಕಾನೂನು ಪುಸ್ತಕಗಳನ್ನು ತರಿಸಿ, ಪರಿಶೀಲಿಸಿ ನಿಯಮಾನು ಸಾರವಾಗಿ ಚುನಾವಣೆ ನಡೆಸಲಾಗುತ್ತಿದ್ದು, ಚುನಾವಣೆಯಲ್ಲಿ ಸದಸ್ಯರು ಭಾಗವಹಿಸುವುದು ಬಿಡುವುದು ಅವರ ಅಭಿಪ್ರಾಯ ಎಂದಾಗ ಕೆಲಕಾಲ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ನಮಗೆ ಬಹುಮತವಿದೆ. ತಡ ಏಕೆ ಮಾಡುತ್ತಿದ್ದೀರ ಎಂದು ತಹಸೀಲ್ದಾರ್ ಗೆ ಪ್ರಶ್ನಿಸಿದರು. ನಂತರ ಇಬ್ಬರ ಅಭ್ಯರ್ಥಿ ಗಳ ಮತ ಕ್ರೋಡಿಕರಿಸಿ ಆಯ್ಕೆ ಪ್ರಕ್ರಿಯೆ ನಡೆಸಿದರು.ಈ ಸಂದರ್ಭದಲ್ಲಿ ವಿಪ್ ಜಾರಿಗೊಂಡಿದ್ದ 4 ಕಾಂಗ್ರೆಸ್ ಸದಸ್ಯರಲ್ಲಿ ರೋಹಿಣಿ ವಿನಾಯಕ್, ಸಮೀಉಲ್ಲಾ, ಜ್ಯೋತಿ ವೆಂಕಟೇಶ್ ಗೈರು ಹಾಜರಾದರೆ ನಂದಿನಿ ರುದ್ರೇಶ್ ಯಾರಿಗೂ ಬೆಂಬಲ ನೀಡದೆ ತಟಸ್ಥರಾಗಿ ಉಳಿದರು. ವಿಪ್ ಉಲ್ಲಂಘನೆ ಗೊಳಿಸಿದ ನಂದಿನಿ ರುದ್ರೇಶ್ ಬಗ್ಗೆ ಚುನಾವಣಾಧಿಕಾರಿ ನಾಲ್ವರು ಸದಸ್ಯತ್ವ ವಜಾಗೊಳಿಸಲು ಜಿಲ್ಲಾಧಿಕಾರಿಗೆ ಸಭಾ ನಡಾವಳಿ ಕಳಿಸುವಂತೆ ಶಾಸಕ ಕೆ.ಎಸ್.ಆನಂದ್ ಜೊತೆಗೂಡಿ ಸದಸ್ಯರು ಕೋರಿದರು.-- ಬಾಕ್ಸ್:--ಶಾಸಕರಿಂದ ಪೊಲೀಸರಿಗೆ ತರಾಟೆ:ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಹೊರ ಬಂದ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಆನಂದರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ಪಟಾಕಿ ಜೊತೆ ಡ್ರಮ್ ಸೆಟ್ ಬಾರಿಸಿ ಸಂಭ್ರಮಾಚರಣೆ ನಡೆಸಿದ್ದನ್ನು ಗಮನಿಸಿದ ಶಾಸಕ ಆನಂದ್, ಈ ಚುನಾವಣೆ ಬಂದೋಬಸ್ತು ಹೊಣೆಹೊತ್ತ ಪೊಲೀಸ್ ಅಧಿಕಾರಿಗಳಿಗೆ ಜನಪ್ರತಿನಿದಿಗಳಿಗೆ ಭದ್ರತೆ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿ ರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.ಗೆಲುವಿಗೆ ನಿರ್ಣಾಯಕವಾದ ಜೆಡಿಎಸ್ ಒಂದು ಮತ:ಪುರಸಭೆಯಲ್ಲಿ ಇರುವ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 9, ಬಿಜೆಪಿಯ 11, 2 ಜೆಡಿಎಸ್ ಹಾಗೂ ಒಂದು ಪಕ್ಷೇತರಿದ್ದಾರೆ. ಅಧ್ಯಕ್ಷರ ಗೆಲುವಿಗೆ 12 ಮತಗಳು ನಿರ್ಣಾಯಕವಾಗಿದ್ದವು. ಕಾಂಗ್ರೆಸ್ ನವರು ಜೆಡಿಎಸ್ ನ ವನಿತಾ ಮಧು, ಬಿಜೆಪಿ ಮಾನಿಕ್ ಭಾಷ ಹಾಗೂ ಪಕ್ಷೇತರ ಸದಸ್ಯ ಜಿಮ್ ರಾಜು ಸೆಳೆದಿದ್ದು, ಜತೆಗೆ ಶಾಸಕ ಆನಂದ್ ಮತ್ತು ಸಂಸದ ಶ್ರೇಯಸ್ ಪಟೇಲ್ ಸೇರಿ ಒಟ್ಟು 10 ಮತಗಳಾದವು. ಬಿಜೆಪಿಯ ಒಟ್ಟು 11 ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಕಡೆಗೆ ಹೋದರೂ ಉಳಿದ 10 ಸದಸ್ಯರ ಜತೆಗೆ ಜೆಡಿಎಸ್ ನ ಬಿ.ಆರ್.ಮೋಹನ್ ಕುಮಾರ್ ಮತ ನಿರ್ಣಾಯಕವಾಗಿ ಗೆಲುವಿಗೆ ಕಾರಣವಾಯಿತು.ಪಕ್ಷ ಸಧೃಡಗೊಳಿಸುವೆ: ಶಾಸಕ ಆನಂದ್ಬೀರೂರು ಪುರಸಭೆ ಅಧ್ಯಕ್ಷರ ಚುನಾವಣೆಗೆ ಇತಿಹಾಸದಲ್ಲೆ ಯಾವ ಸಂಸದ ಮತ್ತು ಶಾಸಕರು ಮತ ಹಾಕಿಲ್ಲ, ಈ ಬಾರಿ ಮತ ಚಲಾಯಿಸಿದರೂ ಅಪಜಯವೇಕೆ ಎಂಬ “ಕನ್ನಡಪ್ರಭ” ಪ್ರಶ್ನೆಗೆ ಶಾಸಕ ಆನಂದ್ ಉತ್ತರಿಸಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬೀರೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿಹೆಚ್ಚು ಬೆಂಬಲ ನೀಡಿ ಗೆಲುವು ನೀಡಿದ್ದಾರೆ.
ಆದರೆ, ನಮ್ಮ ಸದಸ್ಯರು ಈ ಚುನಾವಣೆಗೆ ಗೈರಾಗುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಪಕ್ಷ ವಿಪ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಗೆಲುವು ಎಂದು ವಿಶ್ವಾಸವಿತ್ತು. ಬಿಜೆಪಿ ಜೊತೆ ಸೇರಿದ ಕುತಂತ್ರದ ಫಲವಾಗಿ ವಿಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಬೀರೂರು ಮತ್ತು ಸುತ್ತಮುತ್ತಲ ಗ್ರಾಮದ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಧೃಡಗೊಳಿಸುತ್ತೇನೆ. ಯಾರು ಪಕ್ಷದ್ರೋಹ ಮಾಡುವರೋ ಅಂತವರಿಗೆ ಪಕ್ಷ ತಕ್ಕ ಪಾಠ ಕಲಿಸುತ್ತದೆ ಎಂದರು.--ಇರುವ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಕಾರ್ಯನಿರ್ವಹಿಸಲಾಗುವುದು. ಬೆಳ್ಳಿಪ್ರಕಾಶ್ ನಾಯಕತ್ವದಲ್ಲಿ ಬೆಂಬಲಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವೆ.
- ಭಾಗ್ಯಲಕ್ಷ್ಮೀ ಮೋಹನ್ ಕುಮಾರ್, ನೂತನ ಅಧ್ಯಕ್ಷೆ , ಪುರಸಭೆ-ವಿಪ್ ಉಲ್ಲಂಘನೆ ಗೊಳಿಸಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರ ಸದಸ್ಯತ್ವ ವಜಾಗೊಳಿಸುವ ಬಗ್ಗೆ ಕೋರಲಾಗಿದ್ದು ಈ ಸಂಭಂದ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
- ಪೂರ್ಣಿಮಾ, ತಹಸೀಲ್ದಾರ್16 ಬೀರೂರು 1ಬೀರೂರು ಪುರಸಭೆ ಅಧ್ಯಕ್ಷೆಗಾಧಿಗೆ ನಡೆದ ಚುನಾವಣೆಯಲ್ಲಿ ಬುಧವಾರ ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ಮತ್ತು ಹಾಸನ ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಿದ್ದರು.16 ಬೀರೂರು 2ಬೀರೂರು ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಭಾಗ್ಯಲಕ್ಷ್ಮಿ ಮೋಹನ್ ರನ್ನು ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್, ಮುಖಂಡರಾದ ಮಾರ್ಗದ ಮಧು, ಶಾಮಿಯಾನ ಚಂದ್ರು, ಸವಿತಾರಮೇಶ್ ಮತ್ತು ಸದಸ್ಯರು ಹಾಗೂ ಕಾರ್ಯಕರ್ತರುಗಳು ಅಭಿನಂದಿಸಿದರು.16 ಬೀರೂರು 3ಬೀರೂರು ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಭಾಗ್ಯಲಕ್ಷ್ಮಿ ಮೋಹನ್ ರ ಗೆಲುವು ಖಚಿತವಾದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.