ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಜಿಲ್ಲೆಯ ಸೀಕಲ್ ಗ್ರಾಮದಲ್ಲಿರುವ ರಾಮಚಂದ್ರಗೌಡರ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಚಂಡಿಕಾಹೋಮ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ಪ್ರಧಾನಿ ಮೋದಿ ಅವರ ವರ್ಚಸ್ಸು ಕೆಲಸ ಮಾಡುತ್ತಿರುವುದನ್ನು ನೋಡಿ ಭಾರತೀಯರು ಬಿಜೆಪಿಯನ್ನು ಹರಸಿ ಹಾರೈಸಿದ್ದಾರೆ. ಇದೇ ಕಾರಣವಾಗಿ ಮೂರನೇ ಅವಧಿಗೂ ಕೂಡ ಅವರು ಪ್ರಧಾನಿಯಾಗಿ ಮುಂದುವರೆಯುವ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ನಮ್ಮ ಅಧಿಕಾರದಲ್ಲಿದೆ. 2028ಕ್ಕೆ ರಾಜ್ಯದಲ್ಲಿಯೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಶಿಡ್ಲಘಟ್ಟದಲ್ಲಿ ಕೂಡ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ ಆಗುವ ವಿಶ್ವಾಸವಿದೆ ಎಂದರು. ಎರಡನೇ ಅವಧಿಯಲ್ಲಿ ಗ್ಯಾರಂಟಿಗಳ ಭಾರದಲ್ಲಿ ಜನಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲಾಗಿಲ್ಲ ಎಂಬುದು ಸತ್ಯ. ಈ ಸತ್ಯ ಅರಿವಾದ ಕೂಡಲೇ ಸಿದ್ಧರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ನಿರುಮ್ಮಳವಾಗಿ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಳ್ಳೆಯ ರೀತಿಯಲ್ಲಿ ಆಡಳಿತ ನಡೆಸಬೇಕು ಎಂಬ ಹಂಬಲ ಹೊಂದಿದ್ದರೂ ಕಾಂಗ್ರೆಸ್‌ನ ಈಗಿನ ಸ್ಥಿತಿ ಮನೆಯೊಂದು ನಾಲ್ಕು ಬಾಗಿಲು ಎಂಬಂತಾಗಿದೆ. ಸರ್ಕಾರ ಟೇಕಾಫ್ ಆಗುವ ಮೊದಲೇ ಖಾತೆ ಕ್ಯಾತೆ ಮಿತಿಮೀರಿದೆ. ನನ್ನ ಪ್ರಕಾರ 2 ವರ್ಷ ಕೂಡ ಅಧಿಕಾರದಲ್ಲಿ ಇರುವುದು ಅನುಮಾನ ಎಂದು ವ್ಯಂಗ್ಯವಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ 2028ಕ್ಕೆ ಧೂಳಿಪಟ ಆಗುವುದು ಖಚಿತ. ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಖಚಿತ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳುವುದೂ ಕೂಡ ಅಷ್ಟೇ ಸತ್ಯ ಎಂದು ಭರವಸೆಯ ಮಾತುಗಳಾಡಿದರು.ಜಿಲ್ಲೆಯಲ್ಲಿ ಜನತೆಯ ಕಷ್ಟಗಳು ದೂರವಾಗಬೇಕು. ಸಕಾಲಕ್ಕೆ ಮುಂಗಾರು ಜಿಲ್ಲೆಯನ್ನು ಪ್ರವೇಶಿಸಿ ರೈತರು ಜನಜಾನುವಾರುಗಳ ಬದುಕಿಗೆ ಆಶ್ರಯವಾಗಲಿ ಎಂಬ ಸದುದ್ದೇಶದಿಂದ ಚಂಡಿಕಾಹೋಮ ಹಾಗೂ ಸತ್ಯನಾರಾಯಣ ವೃತವನ್ನು ಏರ್ಪಡಿಸಲಾಗಿದೆ.ಈ ಪೂಜೆಯಲ್ಲಿ ಜಿ.ಟಿ.ದೇವೇಗೌಡ, ಆನಂದಗುರೂಜಿ, ಡಾ.ಶಿವರಾಜಕುಮಾರ್, ನಿರ್ದೇಶಕ ಆರ್.ಚಂದ್ರು ಸೇರಿ ನಾಡಿನ ನಾನಾ ಗಣ್ಯರು ಬಂದು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.