ಕನ್ನಡಪ್ರಭ ವಾರ್ತೆ ಉಡುಪಿ
ಸೋಮವಾರ ಉಡುಪಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದಲ್ಲಿ ಸಾಮಾಜಿಕ ನ್ಯಾಯದಡಿ 5 ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪ್ರಥಮ ರಾಜ್ಯ ಕರ್ನಾಟಕ. ಗೃಹಲಕ್ಷ್ಮೀ ಗ್ಯಾರಂಟಿಯಿಂದ 1.25 ಲಕ್ಷ ಮಹಿಳೆಯರು, ಗೃಹಜ್ಯೋತಿ ಗ್ಯಾರಂಟಿಯಿಂದ 1.80 ಕೋಟಿ ಮನೆಗಳು, ಶಕ್ತಿ ಗ್ಯಾರಂಟಿಯಿಂದ ದಿನಕ್ಕೆ 35 ಲಕ್ಷ ಮಹಿಳೆಯರು, ಅನ್ನ ಭಾಗ್ಯ ಗ್ಯಾರಂಟಿಯಿಂದ 4.49 ಕೋಟಿ ಕುಟುಂಬಗಳು ಮತ್ತು ಯುವನಿಧಿ ಗ್ಯಾರಂಟಿಯಿಂದ 1.50 ಲಕ್ಷ ಯುವಕರು ನೇರ ಲಾಭ ಪಡೆದಿದ್ದಾರೆ. ಈಗ ಎಐಸಿಸಿ ಮತ್ತೆ 5 ಗ್ಯಾರಂಟಿಗಳನ್ನು ಘೋಷಿಸಿದೆ ಎಂದರು.ಆದರೆ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಚೊಂಬು ಗ್ಯಾರಂಟಿ ನೀಡಿದೆ ಎಂದು ಟೀಕಿಸಿದ ಸುರ್ಜೆವಾಲ, ಅತೀ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಶೇ. 13 ರಷ್ಟು ಅನುದಾನ ನೀಡಿ ಚೊಂಬು ನೀಡಿದ್ದಾರೆ, ಭದ್ರಾ ಅಣೆಕಟ್ಟಿಗೆ ಕೇಂದ್ರ ಸರ್ಕಾರ 5300 ಕೋಟಿ ರು. ಘೋಷಿಸಿ ನಂತರ ಬಿಡುಗಡೆ ಮಾಡದೆ ಚೊಂಬು ನೀಡಿದ್ದಾರೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ನೀಡುತ್ತೇನೆ ಎಂದು ಹೇಳಿ ಚೊಂಬು ನೀಡಿದ್ದಾರೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ ಎಂದರು.
ಸಂವಿಧಾನ ಉಳಿಸುವ ಚುನಾವಣೆ:
ಕಾಂಗ್ರೆಸ್ ಪ್ಯಾನ್ ಇಂಡಿಯಾ ಪಕ್ಷವಾಗಿ ಉಳಿದಿಲ್ಲ, ಈ ಬಾರಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಅಲ್ಲಗಳೆದ ಸುರ್ಜೆವಾಲ, ಈಗಾಗಲೇ 330 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದೆ, ಇನ್ನೂ ಕೆಲಸ ಕ್ಷೇತ್ರಗಳಿಗೆ ಘೋಷಣೆಯಾಗಿದೆ, ಮುಂದೆ ಮತ್ತೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದರು.