ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ವಿಚಾರದಲ್ಲಿ ಮಾಡೋದೆಲ್ಲ ಮಾಡಿ ಈಗ ಬಿಜೆಪಿಯವರೇ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯದ್ದು ನಾಟ್ಯಮಂಡಳಿ ನಡೆದಿದೆ. ಇದು ಯಡಿಯೂರಪ್ಪ ವರ್ಸಸ್ ಅದರ್ಸ್ ಹಾಗೂ ಬಿಜೆಪಿ ಒಳಜಗಳದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ದೇವರಹಿಪ್ಪರಗಿಯ ಮುರುಗೇಂದ್ರ ಖ್ಯಾಡಿ ಎಂಬುವರ ಪಹಣಿ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಹಾಕಿದ್ದಾರೆ. ಇಲ್ಲಿನ ಮಾಶಾಬಿ ಮುಲ್ಲಾ ಎಂಬುವರ ಪಹಣಿಯಲ್ಲೂ ವಕ್ಫ್‌ಬೋರ್ಡ್ ಎಂದು ಇಂದೀಕರಣ ಮಾಡಿದ್ದಾರೆ. ಮಣೂರ ಗ್ರಾಮದ ರೈತ ಸುಭಾಷ ಆನಗುಂದಿ ಅವರ ಪಹಣಿಯಲ್ಲಿ ವಕ್ಫ್‌ಬೋರ್ಡ್ ಎಂದು ಮ್ಯುಟೇಷನ್ ಮಾಡಿದ್ದಾರೆ. ಇಂಡಿ ತಾಲೂಕಿನಲ್ಲಿ ನಿಂಗಪ್ಪ ಶಿರಶ್ಯಾಡ ಎಂಬ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಮ್ಯೂಟೇಷನ್ ಮಾಡಿದ್ದಾರೆ. ಇದರ ಜೊತೆಗೆ ಇನ್ನೂ ಸಾಕಷ್ಟು ರೈತರ ಪಹಣಿಗಳಲ್ಲಿ ಹೀಗೆ ವಕ್ಫ್‌ಬೋರ್ಡ್ ಎಂದು ಎಂಟ್ರಿ ಮಾಡಿದ್ದಾರೆ ಎಂದು ತಿಳಿಸಿದರು.ದಾಖಲೆ ಸಮೇತ ಬಿಡುಗಡೆ:
ಬಿಜೆಪಿ ಅಧಿಕಾರಲ್ಲಿದ್ದಾಗೆಲ್ಲ ವಕ್ಫ್ ಬಗ್ಗೆ ಭಾರೀ ಕಾಳಜಿ ತೋರಿಸಿ ರೈತರಿಂದ ಭೂಮಿ ಕಸಿಯುವ ಕೆಲಸ ಮಾಡಿದ್ದಾರೆ. ರೈತರಿಂದ ಭೂಮಿ ಕಸಿದು ವಕ್ಫ್ ಆಸ್ತಿಗಳ ಕ್ರಮಬದ್ಧತೆ ಮಾಡುವುದು, ಅವುಗಳ ಸಂರಕ್ಷಣೆ, ನಿರ್ವಹಣೆ, ಡಿಜಿಟಲೀಕರಣ, ವಕ್ಫ್ ಆಸ್ತಿಗಳಿಗೆ ಪರಿಹಾರ ಕೊಡಿಸುವುದು, ವಕ್ಫ್‌ಗೆ ಸೇರಿದ ಭೂಮಿಯಲ್ಲಿ ಆಗಿರುವ ಅತಿಕ್ರಮಣ ತೆರವುಗೊಳಿಸುವುದು, ಜಿಲ್ಲಾ ಮಟ್ಟದಲ್ಲಿ ವಕ್ಫ್ ಆಸ್ತಿ ಕಾರ್ಯಪಡೆ ರಚಿಸಿ ರಾಜ್ಯದ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು, ಗ್ರಾಮೀಣ ಮಟ್ಟದ ಗಾವಠಾಣ ಆಸ್ತಿಗಳನ್ನು ವಕ್ಫ್ ಎಂದು ನಮೂದು ಮಾಡುವ ಕುರಿತು. ಇನಾಂ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ವಕ್ಫ್ ಆಸ್ತಿಗಳು ಇತರರಿಗೆ ಮಂಜೂರಾಗಿದ್ದ ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸಿ ವಕ್ಫ್ ಎಂದು ವಾಪಸ್ ಪಡೆಯುವ ಆದೇಶ ಸೇರಿದಂತೆ ಹಲವಾರು ಸುತ್ತೋಲೆಗಳು ಹಾಗೂ ಆದೇಶಗಳನ್ನು 2010ರಿಂದಲೇ ಕಾಲಕಾಲಕ್ಕೆ ಹೊರಡಿಸುತ್ತ ಬಂದಿದ್ದಾರೆ. 2010ರ ಏಪ್ರಿಲ್ 1, ಮೇ 29, 2011 ಏಪ್ರಿಲ್ 2, ಏಪ್ರಿಲ್ 23, 2020 ಆಗಸ್ಟ್ 29, 2021 ಜನೇವರಿ 8, ಫೆಬ್ರುವರಿ 27 ರಂದು ಹೊರಡಿಸಲಾದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ 2014ರ ಪ್ರಣಾಳಿಕೆಯಲ್ಲಿ ವಕ್ಫ್ ಬೋರ್ಡ್‌ಗೆ ಶಕ್ತಿ ತುಂಬುವುದು, ಅವರ ಧಾರ್ಮಿಕ ಮುಖಂಡರ ಜೊತೆ ಚರ್ಚಿಸುವುದು, ಒತ್ತುವರಿಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುವುದು ಎಂದು ಬಿಜೆಪಿಯವರು ಪ್ರಣಾಳಿಕೆಯಲ್ಲೇ ಹಾಕಿದ್ದರು. ಈಗ ಬಂದು ಹೋರಾಟ ಮಾಡುವ ತೇಜಸ್ವಿಸೂರ್ಯ, ಶೋಭಾ ಕರಂದ್ಲಾಜೆ, ಅರುಣ ಶಹಾಪುರ ಆವಾಗ ಮಲಗಿದ್ರಾ?. 2008ರಲ್ಲಿ ನಿಮ್ಮದೆ ಸರ್ಕಾರವಿದ್ದಾಗ ವಕ್ಫ್‌ಗೆ ಸಪೋರ್ಟ್ ಮಾಡುವ ಎಲ್ಲಾ ಮಾಡಿದಿರಿ, ನೆಹರು ಮಾಡಿದ ವಕ್ಫ್ ಕಾನೂನು ತೆಗೆಯಬೇಕು ಎನ್ನುತ್ತೀರಿ, ನಿಮ್ಮದೇ ಸರ್ಕಾರವಿದ್ದಾಗ ಯಾಕೆ ತೆಗೆಯಲಿಲ್ಲ? ಆಗ ನಿಮ್ಮ ಹಿಂದುತ್ವ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.ವಕ್ಫ್ ಮಾಡಿದ ತಪ್ಪು ಸರಿಪಡಿಸಲಾಗಿದೆವಕ್ಫ್ನವರು ಅನೇಕ ತಪ್ಪು ಮಾಡಿದ್ದಾರೆ. ಹೊನವಾಡ ವಿಚಾರ, ಇಂಡಿ ತಾಲೂಕಿನಲ್ಲಿ, ಸಿಂದಗಿ ಮಠದ ಆಸ್ತಿಯಲ್ಲಿ ಹೀಗೆ ಅನೇಕ ಕಡೆಗಳಲ್ಲಿ ವಕ್ಫ್ ಮಾಡಿದ ತಪ್ಪನ್ನು ಸರಿಪಡಿಸಲಾಗಿದೆ. ನಾನು ವಕ್ಫ್ ಪರವಾಗಿ ಮಾತನಾಡುತ್ತಿಲ್ಲ, ಸತ್ಯ ಮಾತನಾಡುತ್ತಿದ್ದೇನೆ ಎಂದರು.
ಇಂಡಿ ತಹಸೀಲ್ದಾರ್ ನೋಟಿಸ್ ಕೊಡದೆ 44 ರೈತರ ಪಹಣಿಗಳಲ್ಲಿ ವಕ್ಫ್‌ಬೋರ್ಡ್ ಎಂದು ಸೇರಿಸಿ ತಪ್ಪು ಮಾಡಿದ್ದ, ಅದನ್ನು ತಕ್ಷಣ ವಾಪಸ್ ಪಡೆದು ಪಹಣಿಯಲ್ಲಿ ಸೇರಿಸಲಾಗಿದ್ದ ಹೆಸರನ್ನು ತೆಗೆದಿದೆ. ಅಲ್ಲದೆ, ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಸ್ಮಿತೆಗೆ ಧಕ್ಕೆಯಾದರೆ ಸುಮ್ಮನಿರಲ್ಲ.
ಬರಹ: ವಕ್ಫ್ ಮೇಲೆ ಬಿಜೆಪಿಯ ಕಾಳಜಿ ಕುರಿತು ಹೊರಡಿಸಿರುವ ದಾಖಲೆ ನೀಡಿದ ಎಂ.ಬಿ.ಪಾಟೀಲ್
ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿವಕ್ಫ್ ಆಸ್ತಿ ಸಂರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಸಹೋದರಿ ಶೋಭಾ ಕರಂದ್ಲಾಜೆ ಸಂಸದರಾಗಿದ್ದಾಗ ಲೋಕಸಭೆಯಲ್ಲಿ 2019ರಲ್ಲಿ ಪ್ರಶ್ನೆ ಕೇಳಿದ್ದರು. ಆಗ ಸರ್ಕಾರ 2014ರಿಂದ 2019ರ ವರೆಗೆ ಶೇ.85 ವಕ್ಫ್ ಆಸ್ತಿ ಡಿಜಿಟಲೈಜ್ಜೇ ಮಾಡಿದ್ದೇವೆ ಎಂದು ಉತ್ತರಿಸಿದೆ. ಆಗಲೇ ಇವರು ಇನ್ನುಳಿದ 15 ಪರ್ಸೆಂಟ್ ಆಸ್ತಿಗಳನ್ನು ಕೂಡ ಡಿಜಿಟಲ್ ಮಾಡಿ ಎಂದಿದ್ದಾರೆ. ಅದಕ್ಕಾಗಿ ದೇಶದ ಎಲ್ಲ ರಾಜ್ಯಗಳಿಗೆ ₹ 11ಕೋಟಿ ಆರ್ಥಿಕ ಸಹಾಯವನ್ನೂ ಕೊಟ್ಟಿದೆ. ಡಾಟಾ ಎಂಟ್ರಿ ಮಾಡಲು ವಾಮ್ಸಿ ಪೋರ್ಟಲ್ ಮಾಡಲಾಗಿದೆ. ರಾಜ್ಯದಲ್ಲಿ 2019ರಲ್ಲಿ 5 ಲಕ್ಷ ಸ್ಥಿರಾಸ್ತಿಗಳನ್ನು ಎಂಟ್ರಿ ಮಾಡಲಾಗಿದೆ. ವಕ್ಫ್ ಸಮಸ್ಯೆಗಳನ್ನು ಬಗೆಹರಿಸಲು ನಿವೃತ್ತ ನ್ಯಾಯಾಧೀಶರನ್ನು ಇವರೇ ನೇಮಕ ಮಾಡಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮೋದಿ ಸಹ ಕಾಳಜಿ ಹೊಂದಿದ್ದಾರೆ. ಆಗ ಶೋಭಾ ಎಲ್ಲ ಮಾಹಿತಿ ಕೇಳಿದ್ದಾರೆ, ಅವರಿಗೆ ಆಗಲೇ ಎಲ್ಲವೂ ಗೊತ್ತಿತ್ತು. ಆದರೆ ಈಗ ಏಕಾಏಕಿ ಬಂದು ವಕ್ಫ್ ರದ್ದುಗೊಳಿಸಿ ಎಂದು ಫುಟಪಾತ್ ಮೇಲೆ ಮಲಗಿ ಹೋರಾಟ ಮಾಡುತ್ತಾರೆ. ಬಿಜೆಪಿ ನಿಲುವು ಎಲ್ಲವೂ ವಕ್ಫ್ ಪರವಾಗಿಯೇ ಇದೆ ಎಂದು ಹೇಳಿದರು.ಬಾಕ್ಸ್‌ಮಠಾಧೀಶರಿಗೆ ಈ ವಿಷಯ ಗೊತ್ತಿಲ್ಲಬಿಜೆಪಿ ಕಾಲದಲ್ಲಿ ಏನೇನು ಅದೇಶಗಳನ್ನು ಹೊರಡಿಸಿದ್ದಾರೆ? ಎಂಬುದರ ಬಗ್ಗೆ ಬಿಜೆಪಿಯವರ ಹೋರಾಟದಲ್ಲಿ ಭಾಗಿಯಾಗಿದ್ದ ಮಠಾಧೀಶರಿಗೆ ಗೊತ್ತಿಲ್ಲ. ಇದೆಲ್ಲ ಮಾಡಿದ್ದು ಬಿಜೆಪಿಯವರು ಎಂಬುದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿಗಳಿಗೆ, ಜ್ಞಾನಯೋಗಾಶ್ರಮದ ಶ್ರೀಗಳಿಗೆ, ಪಂಚಮಸಾಲಿ ಶ್ರೀಗಳಿಗೆ ಗೊತ್ತಿಲ್ಲ. ಬಿಜೆಪಿ ಕುತಂತ್ರ ಹಾಗೂ ವಕ್ಫ್ ಬಗ್ಗೆ ಅವರು ತೋರಿಸಿದ ಅಪಾರ ಕಾಳಜಿಯ ಬಗ್ಗೆ ಗೊತ್ತಾದಾಗ ಅವರೇ ಬಿಜೆಪಿಯ ವಿರುದ್ಧ ತಿರುಗಿ ಬಿಳುತ್ತಾರೆ. ಈಗ ಅವರಿಗೆ ವಕ್ಫ್ ವಿಚಾರದಲ್ಲಿ ಬಿಜೆಪಿ ಮಾಡಿದ ಮುಸ್ಲಿಂ ಕಾಳಜಿಯ ಬಗ್ಗೆ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ ಎಂದರು. ನಾನು ಇಷ್ಟಕ್ಕೆ ಬಿಡಲ್ಲ. ಬಿಜೆಪಿ ಮಾಡಿದ ಅವಾಂತರಗಳ ಕುರಿತು ಹಾಗೂ ನಾವು ಸರಿಪಡಿಸಿದ ಸಮಸ್ಯೆಗಳ ಕುರಿತು ಎಲ್ಲಾ ಸ್ವಾಮೀಜಿಗಳಿಗೆ ದಾಖಲೆಗಳನ್ನು ಕಳುಹಿಸುವುದಾಗಿ ತಿಳಿಸಿದರು.ಕೋಟ್