ಬಾಗಲಕೋಟೆಯ ಭದ್ರತೆಗೆ ಬಿಜೆಪಿ ಬೆಂಬಲಿಸಿ: ಜಗದೀಶ ಶೆಟ್ಟರ

KannadaprabhaNewsNetwork |  
Published : Mar 30, 2026, 03:30 AM IST
(ಫೋಟೊ29ಬಿಕೆಟಿ11 ಪ್ರಚಾರ ಸಭೆಯಲ್ಲಿ ಜಗದೀಶ ಶೆಟ್ಟರ ಮಾತುನಾಡಿದರು) | Kannada Prabha

ಸಾರಾಂಶ

ನಾಮಪತ್ರದ ಸಲ್ಲಿಸಿದ ದಿನವೇ ಮತದಾರರು ವೀರಣ್ಣ ಚರಂತಿಮಠರನ್ನು ಜನಪ್ರತಿನಿಧಿಯನ್ನಾಗಿ ಸ್ವೀಕರಿಸಿದ್ದು, ದಾಖಲೆ ಮತಗಳ ಅಂತರದಲ್ಲಿ ಗೆದ್ದು ಬರಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಮಪತ್ರದ ಸಲ್ಲಿಸಿದ ದಿನವೇ ಮತದಾರರು ವೀರಣ್ಣ ಚರಂತಿಮಠರನ್ನು ಜನಪ್ರತಿನಿಧಿಯನ್ನಾಗಿ ಸ್ವೀಕರಿಸಿದ್ದು, ದಾಖಲೆ ಮತಗಳ ಅಂತರದಲ್ಲಿ ಗೆದ್ದು ಬರಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ ಹಿನ್ನೆಲೆ ರಾಂಪೂರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ವೇಳೆ ಮತಯಾಚಿಸಿ ಮಾತನಾಡಿದ ಅವರು, ಪ್ರತಿ ಬಾರಿಯೂ ಶಾಸಕರಾದಾಗ ಆಡಳಿತ ಪಕ್ಷ ಯಾವುದಿದ್ದರೂ ಅಭಿವೃದ್ಧಿ ಯೋಜನೆಗಳ ಹೊಳೆ ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೇ ಕಾರಣಕ್ಕೆ ಜನರು, ಅಭಿವೃದ್ಧಿ ಹರಿಕಾರ ಎಂದು ಬಿರುದು ಕೊಟ್ಟಿದ್ದು ಅವರನ್ನು ಗೆಲ್ಲಿಸುವುದರ ಮೂಲಕ ಮತ್ತಷ್ಟು ಕೆಲಸ ಮಾಡಲು ಅವಕಾಶ ನೀಡಬೇಕು. ಕಾಂಗ್ರೆಸ್ ಸರಕಾರದಿಂದ ಇಡೀ ರಾಜ್ಯವೇ ಅಭಿವೃದ್ಧಿಯ ದಿಕ್ಕು ಕಾಣದೆ ತತ್ತರಿಸಿ ಹೋಗಿದೆ ಎಂದು ಹೇಳಿದರು.

ಮೂರು ವರ್ಷಗಳ ಹಿಂದೆ ಬಿಜೆಪಿ ತಂದ ಯೋಜನೆಗಳು ಕೂಡ ಮುಂದುವರೆಯದೇ ಮೂಲೆ ಸೇರುವಂತೆ ಸರಕಾರ ಮಾಡಿದ್ದು, ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜನಾಮೆ ನೀಡುವ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಹಿಡಿತ ಕಳೆದುಕೊಂಡಿದ್ದು ಸರಕಾರದ ಮಂತ್ರಿಮಂಡಲ ಲೂಟಿ ಮಾಡುವ ಕೆಲಸ ಮಾಡುತ್ತಿದೆ. ಭ್ರಷ್ಟ ಸರಕಾರವಾಗಿ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದು, ಇ-ಸ್ವತ್ತು ನೋಂದಣಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಚರಂತಿಮಠರನ್ನು ಗೆಲ್ಲಿಸೋಣ. ಜಗತ್ತು ಯುದ್ಧದಿಂದ ತತ್ತರಿಸಿದ್ದರೂ ಭಾರತ ಮೋದಿ ಆಡಳಿತದಿಂದ ಸುರಕ್ಷಿತವಾಗಿದೆ. ಬಿಜೆಪಿ ಗೆಲ್ಲಸಿ ಅವರ ಕೈಬಲಪಡಿಸುವುದು ಎಲ್ಲರ ಕರ್ತವ್ಯ. ಕಾಂಗ್ರಸ್ ಗೆ ಬುದ್ದಿ ಕಲಿಸುವ ಸಮಯ ಈಗ ಬಂದಿದೆ ಅದನ್ನು ಬಿಜೆಪಿಗೆ ಮತ ಚಲಾಯಿಸಿ ಸದುಪಯೋಗ ಪಡಿಸಿಕೊಳ್ಳೋಣ ಎಂದರು.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಾತನಾಡಿ, ಮತದಾನ ಸಂವಿಧಾನ ನೀಡಿದ ಹಕ್ಕು. ಅದನ್ನು ಪ್ರತಿಯೊಬ್ಬರೂ ಹಬ್ಬದಂತೆ ಸಂಭ್ರಮಿಸು ಮತದಾನ ಮಾಡಬೇಕು. ಮೂರು ವರ್ಷಗಳ ಅಭಿವೃದ್ಧಿ ಗೋಜಿಗೆ ಹೋಗದ ಕಾಂಗ್ರೆಸ್ ಕೈಬಿಟ್ಟು ಕಮಲ ಗುರುತಿಗೆ ಮತ ನೀಡಿ ಬಿಜೆಪಿ ಬಲಪಡಿಸುವ ಕರ್ತವ್ಯ ಮತದಾರರದ್ದು ಎಂದರು.

ಮತಯಾಚನೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಎಮ್.ಕೆ.ಪಟ್ಟಣಶೆಟ್ಟಿ, ಶಿಲ್ಪಾ ಕುಂದರವಾಡ, ಸುರೇಶ ಕೊಣ್ಣೂರ, ಸೊಮಸಿಂಗ ಲಮಾಣಿ, ಮುದ್ದಣ್ಣ ಕೋಲಾರ, ಬಸವರಾಜ ಪಾಟೀಲ, ಚಂದ್ರಶೇಖರ ಕೊಣ್ಣೂರ, ಎಮ್.ಎ.ಕುಂಬಾರ, ನಿಂಗಪ್ಪ ಕೆಂಜೋಡಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಸುವರ್ಣಾ ಬಿರಾದಾರ, ಗೀತಾ ಚೌದರಿ ಸೇರಿದಂತೆ ಗ್ರಾಮದ ಬಿಜೆಪಿ ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು