ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡಿ ಇಲ್ಲವೆ ನಿಗಮಗಳನ್ನು ಮುಚ್ಚಿ ಬಿಡಿ ಎಂಬ ಘೋಷಣೆಯೊಂದಿಗೆ ಹಿಂದುಳಿದ ವರ್ಗಗಳ ಮೊರ್ಚಾ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನೆಯಲ್ಲಿ ತೆರಳಿದ ಮುಖಂಡರು ನಿಗಮಗಳಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಕಲಬುರಗಿ ಜಿಲ್ಲೆಯಲ್ಲಿ ಜೂನ್-ಜೂಲೈ ತಿಂಗಳಲ್ಲಿ ಅಧಿಕ ಮಳೆಯಾಗಿ ಹಾಳಾಗಿರುವ ತೊಗರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತೇವಾಂಶ ಕೊರತೆ, ಕಳಪೆ ಬೀಜ, ಮತ್ತು ಮೈಕ್ಕೂ ಪೊಮಿನಾ, ಫೈಟೋಪರ ರೋಗ ಬಾಧೆಯಿಂದಾಗಿ ಎಲ್ಲಾ ತಾಲೂಕುಗಳಲ್ಲಿ ಸುಮಾರು 80% ತೊಗರಿ ರೋಗದಿಂದ ಹಾಳಾಗಿದೆ, ಸರ್ಕಾರ ರೈತರ ನೋವಿಗ ಸ್ಪಂದಿಸಬೇಕು ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟಲ್ ರದ್ದೇವಾಡಗಿ, ಓಬಿಸಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ಎಮ್ಮೆನೂರು, ದೇವಿಂದ್ರ ದೇಸಾಯಿ ಕಲ್ಲೂರ, ಶರಣಪ್ಪ ತಳವಾರ್, ಶರಣಗೌಡ ಐಕೂರ, ಬಸವರಾಜ ಗುಂಡಲಗೇರಿ, ಶರಣು ಕುಂಬಾರ ಸೇರಿದಂತೆ ಪ್ರಮುಖರು ಪಾಲ್ಗೊಂಡು ಸರ್ಕಾರದ ಧೋರಣೆ ಟೀಕಿಸಿದರು.