ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು
ಮೋದಿ ಎಂದರೆ ಕಾಂಗ್ರೆಸ್‌ನವರಿಗೆ ಭೇದಿ ಶುರುವಾಗುತ್ತದೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದುವರೆಗೂ ನಾನು ವೀಡಿಯೋ ನೋಡಿಲ್ಲ. ಪತ್ರಿಕೆಯಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ. ಈಗಾಗಲೇ ನಮ್ಮ ವರಿಷ್ಠರು ಸಹ ಹೇಳಿದ್ದಾರೆ. ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಅನುಭವಿಸಲೇಬೇಕು ಎಂದು. ಇದರಲ್ಲಿ ಮಾತೃಶಕ್ತಿಯೊಂದಿಗೆ ಇರುತ್ತೇವೆ ಎಂದಿದ್ದಾರೆ. ಹೀಗಾಗಿ, ಬಿಜೆಪಿ ತಪ್ಪು ಮಾಡಿದವರ ವಿರುದ್ಧವೇ ಇರುತ್ತದೆ. ಈಗಗಾಲೇ ಪ್ರಕರಣವನ್ನು ಎಸ್‌ಐಟಿಗೆ ರಾಜ್ಯ ಸರ್ಕಾರ ವಹಿಸಿದೆ. ತನಿಖೆ ನಡೆದು, ಬೇಗನೆ ಸತ್ಯ ಬೆಳಕಿಗೆ ಬರಲಿ ಎಂದರು.
ಶುದ್ಧ ಸುಳ್ಳು:
2004ರಿಂದ 2014ವರೆಗೂ ಕಾಂಗ್ರೆಸ್ ಆಡಳಿತದಲ್ಲಿ ತೆರಿಗೆ ಪಾಲು ಕೇವಲ ₹1.43 ಲಕ್ಷ ಕೋಟಿ ರುಪಾಯಿ ಬಂದಿತ್ತು. ಆದರೆ, ಮೋದಿ ಅವರ ಆಡಳಿತದಲ್ಲಿ ಬರೋಬ್ಬರಿ ₹5.96 ಲಕ್ಷ ಕೋಟಿ ರುಪಾಯಿ ಬಂದಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಎಸ್.ಕೆ. ಬೆಳ್ಳುಬ್ಬಿ ಹಾಗೂ ಚಂದ್ರಶೇಖರ ಹಲಿಗೇರಿ ಇದ್ದರು.
ಮಾಜಿ ಸಂಸದ ಸಂಗಣ್ಣ ಕರಡಿ ಆತ್ಮಾವಲೋಕನ ಮಾಡಿಕೊಳ್ಳಲಿ, ನಾನೇನು ಅಂತ ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
ತನಗೂ ಟಿಕೆಟ್ ಬೇಕು, ಮಗನಿಗೂ ಟಿಕೆಟ್ ಬೇಕು. ಸೊಸೆಗೂ ಟಿಕೆಟ್ ಬೇಕು ಎನ್ನುವ ಮನಸ್ಥಿತಿಯ ಸಂಗಣ್ಣ ಕರಡಿಯನ್ನು ಬಿಜೆಪಿ ಎಂದೋ ದೂರವಿಡಬೇಕಾಗಿತ್ತು ಎಂದರು.ಸಂಗಣ್ಣ ಪಕ್ಷ ದ್ರೋಹಿ; ಬೆಳ್ಳುಬ್ಬಿ:ಮಾಜಿ ಸಂಸದ ಸಂಗಣ್ಣ ಕರಡಿ ಪಕ್ಷ ದ್ರೋಹಿ. ಅವರಿಗೆ ಪಕ್ಷ ಎಲ್ಲ ಕೊಟ್ಟರೂ ಇಂಥ ಕೆಟ್ಟ ನಿರ್ಧಾರ ಮಾಡಿದ್ದನ್ನು ಮತದಾರರು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದ್ದಾರೆ.
ನಾನು ಬಿಜೆಪಿ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಅವರು ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಎಂದರು. ಅದಾದ ಮೇಲೆ ಲೋಕಸಭಾ ಚುನಾವಣೆ ಬಂದಾಗ ಟಿಕೆಟ್ ಬೇಕು ಎಂದು ಹಠ ಮಾಡಿ ಪಡೆದರು. ಪಕ್ಷ ಎರಡು ಬಾರಿ ಟಿಕೆಟ್ ನೀಡಿ, ಎಂಪಿ ಮಾಡಿದೆ. ಅದಾದ ಮೇಲೆ ಮಗ, ಸೊಸೆಗೆ ಟಿಕೆಟ್ ಬೇಕು ಎಂದಾಗಲೂ ನೀಡಿದೆ. ಆದರೆ, ಈಗ ಪಕ್ಷ ತೊರೆದಿದ್ದಾರೆ. ನನಗೂ ಟಿಕೆಟ್ ತಪ್ಪಿದೆ. ಟಿಕೆಟ್ ತಪ್ಪಿದೆ ಎಂದಾಕ್ಷಣ ನಾವೇನು ಬಿಜೆಪಿ ತೊರೆದಿಲ್ಲ ಎಂದರು.ಬಿಜೆಪಿಯ ಸಿ.ಟಿ. ರವಿ ಕುರಿತು ಸಂಗಣ್ಣ ಕರಡಿ ಹಗುರವಾಗಿ ಮಾತನಾಡಬಾರದು. ಅವರು ಸನ್ಯಾಸಿಗಳಿದ್ದಂತೆ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಅವರನ್ನ ಹತ್ತಿರದಿಂದ ನೋಡಿದ್ದಾರೆ. ಹಾಗಿದ್ದಾಗ್ಯೂ ಕೆಟ್ಟ ಪದ ಬಳಕೆ ಮಾಡಿ ಟೀಕೆ ಮಾಡಿದ್ದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದರು.