ಮಲಪನಗುಡಿ: ಬಿಜೆಪಿಯಿಂದ ವಿಕಸಿತ ಭಾರತ -ಸಂಕಲ್ಪ ಸಭೆ

KannadaprabhaNewsNetwork |  
Published : Jul 02, 2025, 12:25 AM IST
30ಎಚ್‌ಪಿಟಿ2- ಹೊಸಪೇಟೆ ತಾಲೂಕಿನ ಮಲಪನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ ನೇತೃತ್ವದಲ್ಲಿ ವಿಕಸಿತ ಭಾರತ -ಸಂಕಲ್ಪ ಸಭೆ ನಡೆಯಿತು. | Kannada Prabha

ಸಾರಾಂಶ

ನರೇಂದ್ರ ಮೋದಿ ಅವರು ಭಾರತ ದೇಶವನ್ನು ಸದೃಢವಾಗಿ ಮುನ್ನಡೆಸುತ್ತಿದ್ದಾರೆ. ಬಡ, ಮಧ್ಯಮ ವರ್ಗದ ಅಭಿವೃದ್ಧಿಗೆ ಪ್ರಧಾನಿ ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನರೇಂದ್ರ ಮೋದಿ ಅವರು ಭಾರತ ದೇಶವನ್ನು ಸದೃಢವಾಗಿ ಮುನ್ನಡೆಸುತ್ತಿದ್ದಾರೆ. ಬಡ, ಮಧ್ಯಮ ವರ್ಗದ ಅಭಿವೃದ್ಧಿಗೆ ಪ್ರಧಾನಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ ಹೇಳಿದರು.

ತಾಲೂಕಿನ ಮಲಪನಗುಡಿಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಕಸಿತ ಭಾರತ -ಸಂಕಲ್ಪ ಸಭೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ದೇಶದ ರಕ್ಷಣೆಗೂ ಕಟಿಬದ್ಧರಾಗಿದ್ದು, ಈಗಾಗಲೇ ಆಪರೇಷನ್‌ ಸಿಂದೂರ ಮೂಲಕ ಪಾಕಿಸ್ತಾನಕ್ಕೂ ಪ್ರತ್ಯುತ್ತರ ನೀಡಿದ್ದಾರೆ. ಪಾಕ್‌ನಲ್ಲಿನ ಉಗ್ರಗಾಮಿಗಳ ನೆಲೆಗಳನ್ನು ಹಾಗು ಸೇನಾ ನೆಲೆಗಳನ್ನು ಧ್ವಂಸ ಮಾಡಿದ್ದಾರೆ ಎಂದರು.

ಮುಖಂಡರಾದ ಮಧುರಚನ್ನ ಶಾಸ್ತ್ರಿ, ಶಿವಶಂಕರ್, ಹೊನ್ನೂರಪ್ಪ, ಎಂ.ಬಿ. ಉಮಾದೇವಿ, ಮಲಪನಗುಡಿ ಗ್ರಾಮದ ಮುಖಂಡರಾದ ಕುರಟ್ಟಿ ಕೃಷ್ಣಪ್ಪ, ವಿ.ತಿಪ್ಪೇಸ್ವಾಮಿ, ರಾಮುಡು, ತಳವಾರ ಶಿವರಾಮಪ್ಪ, ಗೊಲ್ಲರ ಯಂಕಪ್ಪ, ದೇವರಮನೆ ಬಸವರಾಜ, ಕೊಮರೆಪ್ಪ, ನಾಗವೇಣಿ, ದೊರೆರಾಜ್ ಮತ್ತಿತರರಿದ್ದರು.ಕೊಲೆಗೆ ಯತ್ನ: ಅಪರಾಧಿಗೆ 4 ವರ್ಷ ಶಿಕ್ಷೆ

ಜಮೀನಿಗೆ ಸಂಬಂಧಿಸಿದ ಪ್ರಕರಣಯೊಂದರಲ್ಲಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದ ಕೊಟ್ಟೂರಿನ ಮೋತಿಕಲ್‌ ತಾಂಡಾದ ವಕೀಲ ಸ್ವರೂಪಾನಂದ ನಾಯ್ಕ ಎಲ್‌. ಎಂಬವರಿಗೆ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ ಅದೇ ತಾಂಡಾದ ಆರೋಪಿ ಹನುಮನಾಯ್ಕಗೆ ಇಲ್ಲಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷಗಳ ಸಾಧಾ ಶಿಕ್ಷೆ ಮತ್ತು ₹50 ಸಾವಿರ ದಂಡವನ್ನು ಮಂಗಳವಾರ ವಿಧಿಸಿದೆ.2022ರ ಮಾರ್ಚ್‌ 11ರಂದು ಕೂಡ್ಲಿಗಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದೊಳಗೆ ಬರುತ್ತಿದ್ದ ವಕೀಲ ಸ್ವರೂಪಾನಂದ ನಾಯ್ಕಗೆ ಆರೋಪಿ ಹನುಮ ನಾಯ್ಕ ತನ್ನ ಬಳಿ ಇದ್ದ ಚಾಕುವಿನಿಂದ ಎರಡು ಬಾರಿ ತಿವಿದು ಗಾಯಗೊಳಿಸಿ, ಕೊಲೆ ಮಾಡಲು ಯತ್ನಿಸಿದ್ದು, ತನಿಖೆಯಿಂದ ದೃಢಪಟ್ಟಿದ್ದು, ಅಂದಿನ ತನಿಖಾಧಿಕಾರಿ ಡಿವೈಎಸ್ಪಿ ಹರೀಶ್‌ ತನಿಖೆ ಪೂರೈಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ದಾಖಲಿಸಿದ್ದರು.ನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ, ಆರೋಪಿ ಅಪರಾಧ ಎಸಗಿರುವುದು ದೃಢಪಟ್ಟಿರುತ್ತದೆ ಎಂದು ಅಭಿಪ್ರಾಯಪಟ್ಟು 4 ವರ್ಷಗಳ ಸಾಧಾ ಕಾರಾಗೃಹ ಶಿಕ್ಷೆ ಮತ್ತು ₹50 ಸಾವಿರ ಶಿಕ್ಷೆ ನೀಡಿದರು. ದಂಡದ ಮೊತ್ತದಲ್ಲಿ ₹25 ಸಾವಿರ ಗಾಯಾಳುಗೆ ನೀಡತಕ್ಕದ್ದು ಎಂದು ತೀರ್ಪು ನೀಡಿದ್ದಾರೆ. ಕೂಡ್ಲಿಗಿ ಠಾಣೆಯ ಪೊಲೀಸ್‌ ಸಿಬ್ಬಂದಿ ಮಂಜುನಾಥ ಕಣವಿಹಳ್ಳಿ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸಮಯಕ್ಕೆ ಹಾಜರುಪಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ಸಾಕ್ಷಿ ವಿಚಾರಣೆ ನಡೆಸಿ, ವಾದ ಮಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ