ಹುಬ್ಬಳ್ಳಿ:
ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೂಡ ಈ ಹಿಂದೆ ಬಳ್ಳಾರಿ, ಮೇಕೆದಾಟು ಹಾಗೂ ಕೃಷ್ಣಾ ನದಿ ನೀರಿನ ವಿಚಾರವಾಗಿ ಪಾದಯಾತ್ರೆ ನಡೆಸಿದೆ. ನಮ್ಮ ಯಾತ್ರೆಗಳು ರಾಜ್ಯ ಹಾಗೂ ದೇಶದ ಹಿತಕ್ಕಾಗಿ ನಡೆದಿದ್ದವು. ಆದರೆ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬರ ಘೋಷಣೆಗೆ ನಿಯಮ:ಬರಪೀಡಿತ ಪ್ರದೇಶಗಳನ್ನು ಏಕಾಏಕಿ ಘೋಷಿಸಲು ಸಾಧ್ಯವಿಲ್ಲ. ಅದಕ್ಕೆ ನಿರ್ದಿಷ್ಟ ನಿಯಮ ಹಾಗೂ ಪ್ರಕ್ರಿಯೆ ಇದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅದರ ಆಧಾರದ ಮೇಲೆ ಬರ ಘೋಷಿಸಲಾಗುವುದು. ಕನಕಪುರದಲ್ಲಿಯೂ ಬರದ ಪರಿಸ್ಥಿತಿ ಇದೆ. ಆದರೂ ಅದನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ನಾನು ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಅಧ್ಯಯನ ತಂಡ ಹಾಗೂ ಅಧಿಕಾರಿಗಳ ಪರಿಶೀಲನೆ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಬರ ಪರಿಸ್ಥಿತಿ ಅಧ್ಯಯನ ನಡೆಸಲು ಎರಡ್ಮೂರು ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಗೂ ತೆರಳುತ್ತೇನೆ ಎಂದ ಸಿಎಂ, ರೈತರ ಬಗ್ಗೆ ನನ್ನದೇ ಆದ ಆಲೋಚನೆಗಳಿವೆ. ಆದರೆ, ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಸಮಗ್ರ ಚರ್ಚೆ ಸಾಧ್ಯವಾಗಲಿಲ್ಲ. ಬಿಜೆಪಿಯವರು ಕೂಡ ಅಧಿವೇಶನದಲ್ಲಿ ಬರದ ಕುರಿತು ಚರ್ಚೆ ಮಾಡಲಿಲ್ಲ ಎಂದು ಟೀಕಿಸಿದರು.
ನಾನು ಸಿಎಂ ಆಗಿರುವುದು ಸಹಿಸುತ್ತಿಲ್ಲ: