ಬ್ಲಾಕ್‌ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಕೃಷ್ಣ ನಿಧನಕ್ಕೆ ಸಂತಾಪ

KannadaprabhaNewsNetwork |  
Published : Dec 12, 2024, 12:33 AM IST
11ಎಚ್ಎಸ್ಎನ್11 : ಅಗಲಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಬೇಲೂರು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಜಾತಶತ್ರು, ನೇರನುಡಿಯ ನಾಯಕ ಎಲ್ಲಾ ಪಕ್ಷದ ಹಿರಿಯ ಮುತ್ಸದ್ಧಿಗಳ ಜೊತೆ ಒಡನಾಟ ಹಾಗೂ ಉತ್ತಮ ಸ್ನೇಹ ಭಾಂದವ್ಯ ಹೊಂದಿದ್ದ ಸ್ವಚ್ಛ ರಾಜಕಾರಣಿ ಅಗಲಿರುವುದು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹಲವಾರು ಮೈಲುಗಲ್ಲನ್ನು ಕಂಡರೂ ಅವರ ಉತ್ರಮ ಆಡಳಿತದ ಮೂಲಕ ರಾಜ್ಯದ ಜನತೆಗೆ ಮನಸಿನಲ್ಲಿ ಉಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶ್ರಧ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಸದಸ್ಯ ‌ಬಿ ಶಿವರಾಂ ಮಾತನಾಡಿ, ಅಜಾತಶತ್ರು, ನೇರನುಡಿಯ ನಾಯಕ ಎಲ್ಲಾ ಪಕ್ಷದ ಹಿರಿಯ ಮುತ್ಸದ್ಧಿಗಳ ಜೊತೆ ಒಡನಾಟ ಹಾಗೂ ಉತ್ತಮ ಸ್ನೇಹ ಭಾಂದವ್ಯ ಹೊಂದಿದ್ದ ಸ್ವಚ್ಛ ರಾಜಕಾರಣಿ ಅಗಲಿರುವುದು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ರಾಜಕೀಯ ಏಳುಬೀಳಿನಲ್ಲಿ ಹಲವಾರು ಮೈಲುಗಲ್ಲನ್ನು ಕಂಡರೂ ಅವರ ಉತ್ರಮ ಆಡಳಿತದ ಮೂಲಕ ರಾಜ್ಯದ ಜನತೆಗೆ ಮನಸಿನಲ್ಲಿ ಉಳಿದಿದ್ದಾರೆ. ಅವರ ಆದರ್ಶಗಳು, ಬಡವರ್ಗದವರ ಮೇಲೆ ಇದ್ದಂತ ಕಾಳಜಿ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ನಿಶಾಂತ್ ಮಾತನಾಡಿ, ಯುವಕರ ದಾರಿ ದೀಪವಾಗಿದ್ದ ಮಾಜಿ ಮುಖ್ಯಮಂತ್ರಿಗಳು ಅವರ ರಾಜಕೀಯ ತಂತ್ರಗಾರಿಕೆಯಲ್ಲಿ ಪಕ್ಷ ಬಲಿಷ್ಠವಾಗಿತ್ತು. ಅದರಂತೆ ಅವರ ಮಾರ್ಗದರ್ಶನ ದಲ್ಲಿ ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ಅವರ ಆದರ್ಶ ಪಾಲಿಸುತ್ತಿದ್ದರು. ಕೇಂದ್ರಮಂತ್ರಿಗಳಾಗಿ, ರಾಜ್ಯಪಾಲರಾಗಿ ತಮ್ಮ ಕೊನೆಯ ಕಾಲಘಟ್ಟದವರೆಗೂ ರಾಜಕೀಯದಲ್ಲಿ ಶ್ರೀ ಕೃಷ್ಣನಂತೆ ನಿಂತು ಕೆಲಸ ಮಾಡಿರುವ ಇವರು ಅಗಲಿರುವುದು ನಿಜಕ್ಕೂ ದುಃಖಕರ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ ಆರ್‌ ಅಶೋಕ್, ಮುಖಂಡರಾದ ಎಂ ಆರ್‌ ವೆಂಕಟೇಶ್, ಸದಸ್ಯರಾದ ಬಿ ಗಿರೀಶ್, ಅಕ್ರಂ, ಅಶೋಕ್, ಕೆಡಿಪಿ ಸದಸ್ಯರಾದ ನಂದೀಶ್, ಚೇತನ್, ಪ್ರದೀಪ್, ರವೀಶ್, ಬಾಬು ಮಲ್ಲಿಕಾ, ಗೋಪಿನಾಥ್, ಚಂದ್ರಶೇಖರ್‌, ವಿಜಿಕುಮಾರ್, ಗಿರೀಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ