ಆರೋಗ್ಯ ಶಿಬಿರದಲ್ಲಿ 40 ಮಂದಿಯಿಂದ ರಕ್ತದಾನ: ಎಚ್.ಎಂ.ಆನಂದ್ ಕುಮಾರ್

KannadaprabhaNewsNetwork |  
Published : Jan 09, 2025, 12:48 AM IST
8ಕೆಎಂಎನ್ ಡಿ30 | Kannada Prabha

ಸಾರಾಂಶ

ರಕ್ತದಾನ ಶಿಬಿರದಲ್ಲಿ 40 ಜನರು ರಕ್ತದಾನ ಮಾಡಿದ್ದಾರೆ. 300 ಜನರಿಗೆ ಕಣ್ಣಿನ ತಪಾಸಣೆ ಮಾಡಿ ಉಚಿತ ಕನ್ನಡಕಗಳನ್ನು ನೀಡಲಾಗಿದೆ. ಆರೋಗ್ಯ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ, ಸಂಘದ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಲಗೂರು ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಜೊತೆಗೆ 40 ಜನರು ರಕ್ತದಾನ ಮಾಡಿ ಜನರ ಜೀವ ಉಳಿವಿಗೆ ಕಾರಣರಾಗಿದ್ದಾರೆ ಎಂದು ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ತಿಳಿಸಿದರು.

ಶಿಬಿರ ಆರಂಭಗೊಂಡು ಬೆಳಗ್ಗೆ 10 ಗಂಟೆಯಿಂದ ಸುಮಾರು 40ಕ್ಕೂ ಹೆಚ್ಚು ವೈದಾಧಿಕಾರಿಗಳ ತಂಡ ವಿವಿಧ ಕಾಯಿಲೆಗಳ ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಸಲಹೆ, ಔಷಧಿಗಳನ್ನು ವಿತರಿಸಲಾಗಿದೆ ಎಂದರು.

ರಕ್ತದಾನ ಶಿಬಿರದಲ್ಲಿ 40 ಜನರು ರಕ್ತದಾನ ಮಾಡಿದ್ದಾರೆ. 300 ಜನರಿಗೆ ಕಣ್ಣಿನ ತಪಾಸಣೆ ಮಾಡಿ ಉಚಿತ ಕನ್ನಡಕಗಳನ್ನು ನೀಡಲಾಗಿದೆ. ಆರೋಗ್ಯ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ, ಸಂಘದ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

ಇದೇ ವೇಳೆ ಸಂಸದರ ನಿಧಿಯಿಂದ ಹಣ ಸಹಾಯ ಮಾಡಿ ಈ ಸಂಸ್ಥೆ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಸಂಘದ ನಿರ್ದೇಕರುಗಳು ಸೇರಿ ಹಲವರು ಕೇಂದ್ರ ಸಚಿವ ಎಚ್‍.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಸ್ಪಂದಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದರು.

ಇದೇ ವೇಳೆ ವೈದ್ಯರ ತಂಡ, ಸಂಸ್ಥೆ ನಿರ್ದೇಶಕರು ಹಾಗೂ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ತಪಾಸಣೆಗೆ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ( ಅಯ್ಯಣ್ಣ ), ಖಜಾಂಜಿ ಎಸ್.ಪಿ.ಸುಂದರ್ ರಾಜ್, ನಿರ್ದೇಶಕರಾದ ಬಿ.ನಂಜಯ್ಯ, ಎಚ್.ಬಿ.ರವಿಶಂಕರ್, ಕೆ.ಮಂಚೇಗೌಡ, ಎಚ್.ಎಂ.ಗುರುಸ್ವಾಮಿ, ಭಕ್ತವತ್ಸಲ, ಎನ್.ನಾಗೇಶ್, ವಿ.ಎಸ್.ಉಮೇಶ್, ಸಿ.ಪ್ರವೀಣ, ಜಿ.ಕೆ.ನಾಗೇಶ್, ಎಚ್.ಎಸ್.ಕೃಷ್ಣ, ಜಿ.ಎಸ್.ಮನೋಹರ, ಎ.ಟಿ.ಶ್ರೀನಿವಾಸ್, ಎಚ್.ಎಸ್.ಗುಣೇಶ, ಎಚ್.ಎಂ.ಉಮೇಶ, ಎಚ್.ಎಸ್.ಶ್ರೀನಿವಾಸ ಆಚಾರಿ, ಡಾ.ಜಿ.ಎಂ. ಸಿದ್ದರಾಜು, ಡಾ.ಶಂಷುದ್ದೀನ್ ಸೇರಿದಂತೆ ಇತರರು ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?