ಜನ್ಮದಿನದ ನೆಪದಲ್ಲಿ ರಕ್ತದಾನ ಶಿಬಿರ ಶ್ಲಾಘನೀಯ-ಲಿಂಗರಾಜಗೌಡ ಪಾಟೀಲ

KannadaprabhaNewsNetwork |  
Published : Jul 02, 2025, 12:24 AM IST
1ಎಂಡಿಜಿ1, ಮುಂಡರಗಿಯಲ್ಲಿ ಸಾಮಾಜಿಕ ಕಾರ್ಯಕರ್ತ ದೇವು ಹಡಪದ ಅವರ 44ನೇ ಜನ್ಮದಿನದ ಅಂಗವಾಗಿ ಜರುಗಿದ ರಕ್ತದಾನ ಶಿಬಿರವನ್ನು ಧಾರವಾಡ ಕೆ.ಎಂ.ಎಫ್. ನಿರ್ದೇಶಕ ಲಿಂಗರಾಜಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಕಾರ್ಯಕರ್ತ ದೇವು ಹಡಪದ ತಮ್ಮ ಜನ್ಮದಿನದ ನೆಪದಲ್ಲಿ ರಕ್ತದಾನ ಶಿಬಿರವೂ ಸೇರಿ ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಹೇಳಿದರು.

ಮುಂಡರಗಿ: ಸಾಮಾಜಿಕ ಕಾರ್ಯಕರ್ತ ದೇವು ಹಡಪದ ತಮ್ಮ ಜನ್ಮದಿನದ ನೆಪದಲ್ಲಿ ರಕ್ತದಾನ ಶಿಬಿರವೂ ಸೇರಿ ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಸಾಮಾಜಿಕ ಕಾರ್ಯಕರ್ತ ದೇವು ಹಡಪದ ಅವರ 44ನೇ ಜನ್ಮದಿನ ಹಾಗೂ ಶಿವು ಲಕ್ಕಿ ಮೆನ್ಸ್ ಪಾರ್ಲರ್ ನ 15ನೇ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾನಿಧ್ಯವಹಿಸಿದ್ದ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಇದೊಂದು ಆದರ್ಶ ಮತ್ತು ಅನುಕರಣೀಯವಾದಂತಹ ಕಾರ್ಯಕ್ರಮವಾಗಿದೆ.ಎಂದರು.

ಕಾರ್ಯಕ್ರಮದಲ್ಲಿ ವೀರಪಾಪೂರ-ಕಲಕೇರಿಯ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಹಡಪದ ಪೀಠದ ಅನ್ನದಾನ ಅಪ್ಪಣ್ಣ ಭಾರತೀ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಭೀಮವ್ವ ಶಿಳ್ಳೀಕ್ಯಾತರ, ವೈದ್ಯರು, ಪತ್ರಕರ್ತರು, ರೈತರು ಸೇರಿದಂತೆ ವಿವಿಧ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸುರೇಶ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಾಗೇಶ ಹುಬ್ಬಳ್ಳಿ, ಪಾರ್ವತೆಮ್ಮ ಹಡಪದ, ರಾಜಾಭಕ್ಷಿ ಬೆಟಗೇರಿ, ಮಂಜುನಾಥ ಇಟಗಿ, ಅಡಿವೆಪ್ಪ ಛಲವಾದಿ, ಮಂಜುನಾಥ ಕಟ್ಟೀಮನಿ, ಹನಮಂತಪ್ಪ ಹಡಪದ, ವೀರಣ್ಣ ಹಡಪದ, ಶಿವಾನಂದ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇವು ಹಡಪದ ಅಭಿಮಾನಿ ಬಳಗದ ವತಿಯಿಂದ ದೇವು ಹಡಪದ ದಂಪತಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹಡಪದ ಪೀಠದ ಅನ್ನದಾನ ಭಾರತೀ ಅಪ್ಪಣ್ಣ ಮಹಾಸ್ವಾಮೀಜಿಯವರಿಂದ ವನ ಮಹೋತ್ಸವ ಆಚರಿಸಲಾಯಿತು.

ಸಿ.ಕೆ.ಎಸ್. ಕಡಣಿಶಾಸ್ತ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಹಡಪದ ಸ್ವಾಗತಿಸಿ, ಶಿವು ವಾಲಿಕಾರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ