ರಕ್ತದಾನದಿಂದ ದೇಹಾರೋಗ್ಯಕ್ಕೆ ಸಮಸ್ಯೆಯಾಗದು

KannadaprabhaNewsNetwork |  
Published : Aug 17, 2024, 12:50 AM IST
ರಕ್ತದಾನ ಶಿಬಿರ | Kannada Prabha

ಸಾರಾಂಶ

ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ದೇಹದಲ್ಲಿನ 5-6 ಲೀಟರ್ ರಕ್ತದ ಪೈಕಿ ಕೇವಲ 350 ಮಿಲಿ ಲೀಟರ್‌ನಷ್ಟು ಮಾತ್ರವೇ ರಕ್ತ ಪಡೆಯುವುದರಿಂದ ದೇಹಾರೋಗ್ಯಕ್ಕೆ ಯಾವುದೇ ಸಮಸ್ಯೆ ಕಾಡದು.

ಹುಬ್ಬಳ್ಳಿ:

ರಕ್ತ ಕೃತಕವಾಗಿ ಸಿಗುವ ವಸ್ತುವಲ್ಲ. ಅದು ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ನೈಜ ಸಂಪನ್ಮೂಲವಾಗಿದ್ದು, ಅದನ್ನು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಮರುಜನ್ಮ ನೀಡಿದ ಆತ್ಮತೃಪ್ತಿ ಸಿಗಲಿದೆ ಎಂದು ಹೊಸಳ್ಳಿಯ ಜಗದ್ಗುರು ಶ್ರೀಬೂದೀಶ್ವರ ಸ್ವಾಮೀಜಿ ತಿಳಿಸಿದರು.

78ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ಮತ್ತು ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ ಟೌನ್, ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಶ್ರೀಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಬಾಲಾಜಿ ಆಸ್ಪತ್ರೆ ಚೇರಮನ್‌ ಡಾ. ಕ್ರಾಂತಿಕಿರಣ, ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ದೇಹದಲ್ಲಿನ 5-6 ಲೀಟರ್ ರಕ್ತದ ಪೈಕಿ ಕೇವಲ 350 ಮಿಲಿ ಲೀಟರ್‌ನಷ್ಟು ಮಾತ್ರವೇ ರಕ್ತ ಪಡೆಯುವುದರಿಂದ ದೇಹಾರೋಗ್ಯಕ್ಕೆ ಯಾವುದೇ ಸಮಸ್ಯೆ ಕಾಡದು ಎಂದರು.

ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಮಾತನಾಡಿದರು. ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್‍ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಬನ್ಸಾಲಿ, ಐಸಿಐಸಿಐ ಬ್ಯಾಂಕ್‍ನ ಪ್ರಾದೇಶಿಕ ಮುಖ್ಯಸ್ಥ ಘನಶ್ಯಾಮ್ ಮುಂದಾಡ, ವ್ಯವಸ್ಥಾಪಕ ರಾಘವೇಂದ್ರ, ಪ್ರಾಚಾರ್ಯ ಸಂದೀಪ ಬೂದಿಹಾಳ, ಕ್ರೆಡೈ ಅಧ್ಯಕ್ಷ ಪ್ರದೀಪ್ ರಾಯ್ಕರ್, ಬಿಜೆಪಿ ಮುಖಂಡರಾದ ರಂಗಾಬದ್ದಿ, ರಾಜು ಜರತಾರಘರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!