- ಹೊನ್ನಾಳಿ ಸರ್ಕಾರಿ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ರೆಡ್ ರಿಬ್ಬನ್, ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ಯುವ ರೆಡ್ ಕ್ರಾಸ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತದಾನ ಬಗ್ಗೆ ಸಮಾಜ, ಯುವಜನಾಂಗದಲ್ಲಿ ತಪ್ಪು ಕಲ್ಪನೆಗಳಿಂದಾಗಿ ರತ್ತದಾನ ಮಾಡಲು ಯುವಕರು ಮುಂದೆ ಬರುವುದು ಕಡಿಮೆಯಾಗಿದೆ ಸಮಾನ್ಯವಾಗಿ 1 ವರ್ಷಕ್ಕೆ 5 ಕೋಟಿ ಯೂನಿಟ್ ರಕ್ತ ಆಗತ್ಯವಿದೆ. ಆದರೆ, ರಕ್ತದಾನ ಬಗ್ಗೆ ತಪ್ಪು ಕಲ್ಪನೆಯಿಂದಾಗಿ ಕೇವಲ 2.5 ಕೋಟಿ ಯೂನಿಟ್ ರಕ್ತ ಮಾತ್ರ ದಾನಿಗಳಿಂದ ಸಂಗ್ರಹವಾಗುತ್ತಿದೆ ಎಂದು ಹೇಳಿದರು.ರಕ್ತದಾನಕ್ಕೆ ಜಾತಿ, ಮತ, ಧರ್ಮಗಳ ತಾರತಮ್ಯವಿಲ್ಲ. ರಕ್ತ ತುರ್ತು ಪರಿಸ್ಥಿತಿಗಳಲ್ಲಿ ಮಾನವನ ಪ್ರಾಣ ಉಳಿಸಲು ಅಗತ್ಯವಾಗಿ ಬೇಕೇಬೇಕಾಗುತ್ತದೆ. ಯುವಕರು ದಾನ ಮಾಡುವ ರಕ್ತರಿಂದಾಗಿ ಅದೆಷ್ಟೋ ಜನರ ಪ್ರಾಣ ಉಳಿಯುತ್ತದೆ. ರಕ್ತದಾನ ಮಾಡುವುದರಿಂದ ನೆನಪಿನ ಶಕ್ತಿ, ಆರೋಗ್ಯವೂ ಉತ್ತಮವಾಗುತ್ತದೆ. ಆದ್ದರಿಂದ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ವಿಶೇಷವಾಗಿ ಹೆಣ್ಣುಮಕ್ಕಳು ಬಹುಪಾಲು ರತ್ತಹೀನತೆಯಿಂದ ಬಳಲುತ್ತಿರುತ್ತಾರೆ. ಅವರು ಆದಷ್ಟು ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು. ನಿರಂತರ ವ್ಯಾಯಾಮ ಮಾಡಬೇಕು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ಎಸ್. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಸಹಾಯಕ ಪ್ರಾಧ್ಯಾಪಕ ಧನಂಜಯ ಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಾಧಿಕಾರಿ ನಾಗರಾಜ ನಾಯ್ಕ ವಂದಿಸಿದರು.
ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಮಾತನಾಡಿದರು. ಡಾ.ಮೀನಾಕುಮಾರಿ ಇತರರು ಇದ್ದರು.