ರಕ್ತದಾನಿಗಳು ರೆಡ್‌ಕ್ರಾಸ್ ಸೇವೆಯ ಶಕ್ತಿ: ಸಿಎ ಶಾಂತಾರಾಮ ಶೆಟ್ಟಿ

KannadaprabhaNewsNetwork |  
Published : Oct 02, 2026, 02:45 AM IST
ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನಾಚರಣೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ರಕ್ತದಾನಿಗಳು ರೆಡ್‌ಕ್ರಾಸ್ ಸೇವೆಯ ನಿಜವಾದ ಶಕ್ತಿಯಾಗಿದ್ದಾರೆ. ಸ್ವಯಂ ಪ್ರೇರಿತ ರಕ್ತದಾನಿಗಳಿಂದಾಗಿ ರೆಡ್‌ಕ್ರಾಸ್ ಸಂಸ್ಥೆ ಸದಾ ಸೇವಾ ಸನ್ನದ್ಧವಾಗಿರಲು ಸಾಧ್ಯವಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಕ್ತದಾನಿಗಳು ರೆಡ್‌ಕ್ರಾಸ್ ಸೇವೆಯ ನಿಜವಾದ ಶಕ್ತಿಯಾಗಿದ್ದಾರೆ. ಸ್ವಯಂ ಪ್ರೇರಿತ ರಕ್ತದಾನಿಗಳಿಂದಾಗಿ ರೆಡ್‌ಕ್ರಾಸ್ ಸಂಸ್ಥೆ ಸದಾ ಸೇವಾ ಸನ್ನದ್ಧವಾಗಿರಲು ಸಾಧ್ಯವಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ವತಿಯಿಂದ ಯೂತ್ ರೆಡ್‌ಕ್ರಾಸ್ (ವೈಆರ್‌ಸಿ) ಮಂಗಳೂರು ವಿ.ವಿ. ಘಟಕ ಮತ್ತು ಲಯನ್ಸ್ ಕ್ಲಬ್ ಕಾವೂರು ಸಹಯೋಗದಲ್ಲಿ ಗುರುವಾರ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನಾಚರಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೋಟರಿ ಜಿಲ್ಲೆ 3180ರ ಮಾಜಿ ಗವರ್ನರ್ ಕೆ.ಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಕಾವೂರು ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ರೆಡ್‌ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಗುರುದತ್ ನಾಯಕ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ, ರಾಘವೇಂದ್ರ ರಾವ್ ಇದ್ದರು.

ಮಿಲಾಗ್ರಿಸ್ ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ಸುಶ್ಮಿತಾ ಶೈಲಾ ಮೊರಾಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ ಪಿ.ಸ್ವಾಗತಿಸಿದರು. ಬೆಸೆಂಟ್ ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ದೀಕ್ಷಿತಾ ವಂದಿಸಿದರು. ರಾಮಕೃಷ್ಣ ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ಸುಮನ ರೈ ನಿರೂಪಿಸಿದರು.

ನಗರದ ಮಿಲಾಗ್ರಿಸ್ ಕಾಲೇಜು, ರಾಮಕೃಷ್ಣ ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೈಂಟ್ ಆಗ್ನೆಸ್ ಕಾಲೇಜು, ಬೆಸೆಂಟ್ ಮಹಿಳಾ ಕಾಲೇಜು, ಕೆನರಾ ಕಾಲೇಜು, ಪಿ.ಎ.ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ಬೆಸೆಂಟ್ ಸಂಧ್ಯಾ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಘು ಭೂಕಂಪನದಿಂದ ಆತಂಕ ಬೇಡ: ಭೂ ವಿಜ್ಞಾನಿ ಕೆ.ಚಂದ್ರಶೇಖರ
ಸೋಮವಾರಪೇಟೆ: ಸಾರ್ವಜನಿಕರ ಕುಂದುಕೊರತೆ ಜನಸಂಪರ್ಕ ಸಭೆ