ವ್ಯಕ್ತಿಯ ಜೀವ ಉಳಿಸಲು ರಕ್ತ ಅತ್ಯಂತ ಅವಶ್ಯಕ: ಪಿ.ಮಾದೇಶ್

KannadaprabhaNewsNetwork |  
Published : Nov 03, 2025, 01:30 AM IST
2ಸಿಎಚ್‌ಎನ್‌52ಚಾಮರಾಜನಗರ ತಾಲೂಕಿನ ಸುಳ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರಕ್ತದ ಗುಂಪಿನ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಲಯನ್ ಕ್ಲಬ್  ಕೊಳ್ಳೇಗಾಲದ  ಅಧ್ಯಕ್ಷ ಪಿ.ಮಾದೇಶ್‌ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ನಮ್ಮ ಶಾಲಾ ಮಕ್ಕಳು ಎಲ್ಲರೂ ಸಹ ಒಟ್ಟಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ನಾವು ಇದುವರೆಗೂ ಕೂಡ ನಮ್ಮ ಮಕ್ಕಳಿಗೆ ರಕ್ತದ ಗುಂಪಿನ ಪತ್ತೆ ಹಚ್ಚುವುದಕ್ಕೆ ಕಾರ್ಯ ಮಾಡಿಲ್ಲ, ಇದೀಗ ಲಯನ್ಸ್ ಸಂಸ್ಥೆ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಬಹಳ ಸಂತೋಷದ ಸಂಗತಿಯಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ವ್ಯಕ್ತಿಯ ಜೀವ ಉಳಿಸಲು ರಕ್ತ ಅತ್ಯಂತ ಅವಶ್ಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಕ್ತದ ಗುಂಪಿನ ಪತ್ತೆ ಹಚ್ಚುವಿಕೆ ತುಂಬಾ ಮುಖ್ಯ. ಆ ನಿಟ್ಟಿನಲ್ಲಿ ಮಕ್ಕಳಿಗೂ ಸಹ ರಕ್ತದ ಗುಂಪಿನ ಪತ್ತೆ ಹಚ್ಚುವಿಕೆ ಕಾರ್ಯ ಮಾಡಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಕೊಳ್ಳೇಗಾಲದ ಅಧ್ಯಕ್ಷ ಪಿ.ಮಾದೇಶ್ ಹೇಳಿದರು.

ತಾಲೂಕಿನ ಸುಳ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರಕ್ತದ ಗುಂಪಿನ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.

ನಮಗೆ ನಮ್ಮ ರಕ್ತದ ಗುಂಪಿನ ಪತ್ತೆ ಹಚ್ಚುವಿಕೆ ತುಂಬಾ ಮುಖ್ಯ. ರಕ್ತದಾನ ಮಾಡುವಾಗ ಪತ್ತೆ ಹಚ್ಚುವಿಕೆ ಮಾಡುತ್ತಾರೆ. ಅಂತಹ ಸಂದರ್ಭಕ್ಕಿಂತ ಮುಂಚಿತವಾಗಿ ಶಾಲಾ ಮಕ್ಕಳಿಗೆ ರಕ್ತ ಪರೀಕ್ಷಾ ಜೊತೆಗೆ ಗುಂಪು ಪತ್ತೆ ಹಚ್ಚುವಿಕೆ ಕಾರ್ಯವನ್ನು ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ರಕ್ತ ಪರೀಕ್ಷೆ ಹಾಗೂ ರಕ್ತದ ಗುಂಪಿನ ಪತ್ತೆಹಚ್ಚುವಿಕೆ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಮ್ಮ ಶಾಲಾ ಮಕ್ಕಳು ಎಲ್ಲರೂ ಸಹ ಒಟ್ಟಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ನಾವು ಇದುವರೆಗೂ ಕೂಡ ನಮ್ಮ ಮಕ್ಕಳಿಗೆ ರಕ್ತದ ಗುಂಪಿನ ಪತ್ತೆ ಹಚ್ಚುವುದಕ್ಕೆ ಕಾರ್ಯ ಮಾಡಿಲ್ಲ, ಇದೀಗ ಲಯನ್ಸ್ ಸಂಸ್ಥೆ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಬಹಳ ಸಂತೋಷದ ಸಂಗತಿಯಾಗಿದೆ ಎಂದರು.

ಮಕ್ಕಳಿಗೆ ರಕ್ತದ ಗುಂಪಿನ ಜೊತೆಗೆ ರಕ್ತ ಪರೀಕ್ಷೆಯೂ ಸಹ ಆಗುತ್ತದೆ. ನಾನು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ನಾವು ಮಾಡಬೇಕಾದಂತಹ ಒಂದಷ್ಟು ಸೇವೆಯನ್ನು ಲಯನ್ಸ್ ಸಂಸ್ಥೆ ಮಾಡುತ್ತಿದೆ, ಹಾಗಾಗಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಕೂಡ ನಾನು ಗ್ರಾಮಸ್ಥರ, ಶಾಲೆಯ ಪರ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಮಾದಪ್ಪನ್, ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಚಿಕ್ಕಬಸವಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚಿನ್ನಾಪಿ, ಸಾಲ ಭೂ ಧಾನಿ ಮರಿಯಾ, ಶಾಲಾ ಶಿಕ್ಷಕರು, ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ