ಬಪ್ಪನಾಡು ದೇವಳ ಅಭಿವೃದ್ಧಿಗೆ 30 ಕೋಟಿ ವೆಚ್ಚದ ನೀಲ ನಕಾಶೆ

KannadaprabhaNewsNetwork |  
Published : Sep 24, 2026, 02:45 AM IST
ಬಪ್ಪನಾಡು ಕ್ಷೇತ್ರ ಅಭಿವೃದ್ದಿ ಕಾರ್ಯ,ಸಮಾಲೋಚನಾ ಸಭೆ  | Kannada Prabha

ಸಾರಾಂಶ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ನೂತನ ಬ್ರಹ್ಮ ರಥ, ಕ್ಷೇತ್ರ ಪಾಲ ಗುಡಿ ನಿರ್ಮಾಣ, ರಥ ಬೀದಿ ನಿರ್ಮಾಣ, ನೂತನ ಅನ್ನಛತ್ರ ಸೇರಿದಂತೆ ಸುಮಾರು 30 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿಯ ನೀಲನಕಾಶೆ ಸಿದ್ಧವಾಗಿದ್ದು ದಾನಿಗಳು ಹಾಗೂ ಭಕ್ತರ ಸಹಕಾರದಿಂದ ಸಂಪೂರ್ಣಗೊಳ್ಳಲಿದೆಯೆಂದು ಬಪ್ಪನಾಡು ದೇವಳದ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷ ಯದು ನಾರಾಯಣಶೆಟ್ಟಿ ಹೇಳಿದರು.

ಮೂಲ್ಕಿ : ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ನೂತನ ಬ್ರಹ್ಮ ರಥ, ಕ್ಷೇತ್ರ ಪಾಲ ಗುಡಿ ನಿರ್ಮಾಣ, ರಥ ಬೀದಿ ನಿರ್ಮಾಣ, ನೂತನ ಅನ್ನಛತ್ರ ಸೇರಿದಂತೆ ಸುಮಾರು 30 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿಯ ನೀಲನಕಾಶೆ ಸಿದ್ಧವಾಗಿದ್ದು ದಾನಿಗಳು ಹಾಗೂ ಭಕ್ತರ ಸಹಕಾರದಿಂದ ಸಂಪೂರ್ಣಗೊಳ್ಳಲಿದೆಯೆಂದು ಬಪ್ಪನಾಡು ದೇವಳದ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷ ಯದು ನಾರಾಯಣಶೆಟ್ಟಿ ಹೇಳಿದರು.

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದದ ಜ್ಞಾನ ಮಂದಿರದಲ್ಲಿ ಜರಗಿದ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅನುವಂಶಿಕ ಮೊಕೇಸರ ದುಗ್ಗಣ್ಣ ಸಾವಂತ ಅರಸರು ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾ ನಡೆಸಲು 17ಮಂದಿ ಸದಸ್ಯರ ಅಭಿವೃದ್ಧಿ ಸಮಿತಿಗೆ ಧಾರ್ಮಿಕ ದತ್ತಿ ಇಲಾಖೆಯು ಅನುಮೋದನೆ ನೀಡಿದೆ. ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಯದು ನಾರಾಯಣ ಶೆಟ್ಟಿ, ಸಮಿತಿಯಲ್ಲಿ ದೇವಸ್ಥಾನದ ವತಿಯಿಂದ ಅನುವಂಶಿಕ ಮೊಕೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಆಳ್ವ, ಕಾರ್ಯಾಧ್ಯಕ್ಷರಾಗಿ ಅತುಲ್ ಕುಡ್ವ, ಸದಸ್ಯರಾಗಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಸಂತೋಷ್ ಕುಮಾರ್ ಹೆಗ್ಡೆ, ಚಂದ್ರಶೇಖರ ಜಿ ಕಾಸಪ್ಪಯ್ಯನವರ ಮನೆ, ರಾಮಚಂದ್ರ ನಾಯ್ಕ ಕೋಲ್ನಾಡು ಗುತ್ತು, ಸುಜಿತ್ ಸಾಲ್ಯಾನ್, ಚಂದ್ರಶೇಖರ ಸುವರ್ಣ, ಉದಯಕುಮಾ‌ರ್ ಶೆಟ್ಟಿ , ಪುರಂದರ ಶೆಟ್ಟಿಗಾರ್, ಸೂರ್ಯ ಕುಮಾರ್ ಹಳೆಯಂಗಡಿ, ಕರುಣಾಕರ ಶೆಟ್ಟಿ ಕಿಲ್ಪಾಡಿ, ಭಾಸ್ಕರ್ ಸಾಲ್ಯಾನ್ ಹಳೆಯಂಗಡಿ, ಸಂಜೀವ ದೇವಾಡಿಗ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಶಿಬರೂರು ಗೋಪಾಲಕೃಷ್ಣ ತಂತ್ರಿ, ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್‌ ಮತ್ತಿತರರಿದ್ದರು.ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಪ್ರಾಸ್ತಾವಿಕ ಮಾತನಾಡಿ, ನೂತನ ಕ್ಷೇತ್ರ ಪಾಲ ಗುಡಿ ಮುಂದಿನ ಜನವರಿ 15ರ ಬಳಿಕ ಪ್ರತಿಷ್ಠೆ ನಡೆಯಲಿದ್ದು , ನೂತನ ಬ್ರಹ್ಮ ರಥದ ಬಗ್ಗೆ ಈಗಾಗಲೇ ನೀಲ ನಕಾಶೆ ಸಿದ್ಧವಾಗಿದೆ ಎಂದರು. ಸುನಿಲ್ ಆಳ್ವ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವೇಶತೀರ್ಥರ ಸೇವಾ ಪ್ರಕಲ್ಪ ಪುನಶ್ಚೇತನ: ಶ್ರೀವಿಶ್ವಪ್ರಸನ್ನತೀರ್ಥರು
ಸ್ವಾವಲಂಬಿ ಬದುಕಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಅಶೋಕ್ ರೈ