ನೌಕರರ ತುಟ್ಟಿಭತ್ಯೆ ಬಾಕಿ ಪಾವತಿಗೆ ಬಿಎಂಟಿಸಿ ಸಿದ್ಧತೆ

KannadaprabhaNewsNetwork |  
Published : Mar 23, 2024, 01:00 AM IST
ಬಿಎಂಟಿಸಿ | Kannada Prabha

ಸಾರಾಂಶ

ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರ ತುಟ್ಟಿಭತ್ಯೆ ಬಾಕಿ ಪಾವತಿಗೆ ಮುಂದಾಗಿರುವ ನಿಗಮ, ಅದಕ್ಕಾಗಿ ನೌಕರರಿಗೆ ಬಾಕಿ ಇರುವ ತುಟ್ಟಿಭತ್ಯೆ ಮೊತ್ತ ಲೆಕ್ಕ ಹಾಕಿ ವಿವರ ನೀಡುವಂತೆ ಎಲ್ಲ ಘಟಕ ವ್ಯವಸ್ಥಾಪಕರಿಗೂ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರ ತುಟ್ಟಿಭತ್ಯೆ ಬಾಕಿ ಪಾವತಿಗೆ ಮುಂದಾಗಿರುವ ನಿಗಮ, ಅದಕ್ಕಾಗಿ ನೌಕರರಿಗೆ ಬಾಕಿ ಇರುವ ತುಟ್ಟಿಭತ್ಯೆ ಮೊತ್ತ ಲೆಕ್ಕ ಹಾಕಿ ವಿವರ ನೀಡುವಂತೆ ಎಲ್ಲ ಘಟಕ ವ್ಯವಸ್ಥಾಪಕರಿಗೂ ಸೂಚಿಸಲಾಗಿದೆ.

ಮಾ. 31ರ ಅಂತ್ಯಕ್ಕೆ ನೌಕರರಿಗೆ ಪಾವತಿಸಬೇಕಿರುವ ತುಟ್ಟಿ ಭತ್ಯೆ ಬಾಕಿ ಸೇರಿದಂತೆ ಇನ್ನಿತರ ಬಾಕಿಗಳ ಮಾಹಿತಿ ನೀಡಬೇಕು. ಪ್ರಮುಖವಾಗಿ 2022ರ ಜು.1ರಿಂದ ಬಾಕಿ ಇರುವ ತುಟ್ಟಿ ಭತ್ಯೆ ಹಿಂಬಾಕಿಯ ಮೊತ್ತ, ನೌಕರರ ವಿವರ ಸೇರಿದಂತೆ ಇನ್ನಿತರ ವಿವರಗಳನ್ನು ಸಲ್ಲಿಸುವಂತೆ ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿ ಸೂಚಿಸಿದೆ.

ನೌಕರರಿಗೆ 2022ರ ಜು.1ರಿಂದ ಅನ್ವಯವಾಗುವ ಶೇ.3.75ರಷ್ಟು ತುಟ್ಟಿಭತ್ಯೆಯ 5 ತಿಂಗಳ ಹಿಂಬಾಕಿ, 2023ರ ಜ.1ರಿಂದ ಅನ್ವಯವಾಗುವ ಶೇ.4ರಷ್ಟು 7 ತಿಂಗಳ ತುಟ್ಟಿಭತ್ಯೆ, 2023ರ ಜು.1ರಿಂದ ಶೇ.3.75ರಷ್ಟು 4 ತಿಂಗಳ ತುಟ್ಟಿಭತ್ಯೆ ಹಾಗೂ 2024ರ ಜ.1ರಿಂದ ಅನ್ವಯವಾಗುವ ಶೇ.3.75ರಷ್ಟು 1 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯ ವಿವರ ನೀಡುವಂತೆ ಹೇಳಲಾಗಿದೆ.

ಜತೆಗೆ ನೌಕರರು ಹಬ್ಬದ ಮುಂಗಡವಾಗಿ ನಿಗಮದಿಂದ ಪಡೆದಿರುವ ಮೊತ್ತ ಹಾಗೂ ವೇತನದಲ್ಲಿ ಕಡಿತಗೊಳ್ಳಬೇಕಿರುವ ಮೊತ್ತದ ಕುರಿತು ಮಾಹಿತಿ ನೀಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ