ನಂದಗಾಂವ ಜನರಿಗೆ ಬೋಟ್‌ ವ್ಯವಸ್ಥೆ

KannadaprabhaNewsNetwork |  
Published : Jul 27, 2024, 01:00 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ: ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಮಹಾಲಿಂಗಪುರ ಬಳಿ ನಂದಗಾಂವ ಗ್ರಾಮಕ್ಕೆ ನೀರು ನುಗ್ಗುವ ಹಂತದಲ್ಲಿದೆ. ಹೀಗಾಗಿ, ಶಾಸಕ ಸಿದ್ದು ಸವದಿ ಇಲ್ಲಿ ಸಂಚಾರಕ್ಕೆ ಬೋಟ್‌ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಗುರುವಾರ ಒಳ ಹರಿವಿನ ಪ್ರಮಾಣ 57,000 ಕ್ಯುಸೆಕ್‌ ಇದ್ದು ಶುಕ್ರವಾರ ಸಂಜೆ ವೇಳೆಗೆ 47,000 ಕ್ಯುಸೆಕ್‌ಗೆ ಇಳಿದಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ: ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಮಹಾಲಿಂಗಪುರ ಬಳಿ ನಂದಗಾಂವ ಗ್ರಾಮಕ್ಕೆ ನೀರು ನುಗ್ಗುವ ಹಂತದಲ್ಲಿದೆ. ಹೀಗಾಗಿ, ಶಾಸಕ ಸಿದ್ದು ಸವದಿ ಇಲ್ಲಿ ಸಂಚಾರಕ್ಕೆ ಬೋಟ್‌ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಗುರುವಾರ ಒಳ ಹರಿವಿನ ಪ್ರಮಾಣ 57,000 ಕ್ಯುಸೆಕ್‌ ಇದ್ದು ಶುಕ್ರವಾರ ಸಂಜೆ ವೇಳೆಗೆ 47,000 ಕ್ಯುಸೆಕ್‌ಗೆ ಇಳಿದಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.ಬೋಟ್ ವ್ಯವಸ್ಥೆ: ನಂದಗಾಂವ ಗ್ರಾಮಕ್ಕೆ ಖಾಯಂ ಆಗಿ ಒಂದು ಬೋಟ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಅಧಿಕಾರಿಗಳಿಗೆ ಇಂದೇ ತರಿಸಲು ಸೂಚಿಸಿದ ಅವರು, ಬೋಟ್‌ಗೆ ತಗಲುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು.ಹಕ್ಕುಪತ್ರ ವಿತರಣೆ: ಈಗಾಗಲೇ ನಂದಗಾಂವ ಗ್ರಾಮಕ್ಕೆ ಸ್ಥಳಾಂತರಗೊಂಡ ಹೊಸ ನಂದಗಾಂವ ಗ್ರಾಮದಲ್ಲಿ ಹಕ್ಕು ಪತ್ರ ವಿತರಣೆ ಸರಿಯಾದ ಕ್ರಮದಲ್ಲಿ ಆಗಿಲ್ಲ. ಒಂದು ಕುಟುಂಬಕ್ಕೆ ಒಂದೇ ಹಕ್ಕು ಪತ್ರ ಕೊಡುವುದು ನಿಯಮ. ಅದರ ಪ್ರಕಾರ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ವೆಂಕಟೇಶ ಮಲಗಾನ, ನೋಡಲ್ ಅಧಿಕಾರಿ ವೆಂಕಟೇಶ ಬೆಳಗಲ, ರಬಕವಿ- ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಠಾಣಾಧಿಕಾರಿ ಪ್ರವೀಣ ಬೀಳಗಿ, ಮುಖಾಂಡರಾದ ಮಹಾಂತೇಶ್ ಹಿಟ್ಟಿನಮಠ, ಸಂಜಯ ಬರಕೋಲ, ಎಂ.ಎಂ.ಗುರವ ಮಹಾದೇವ ಮಣ್ಣನವರ, ವಿನೋದ ಪಾಟೀಲ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ