ಸೋಮೇಶ್ವರ ಸಮುದ್ರದಲ್ಲಿ ನಾಪತ್ತೆಯಾದಾತನ ಶವ ಪತ್ತೆ

KannadaprabhaNewsNetwork |  
Published : Dec 12, 2024, 12:30 AM IST
11 | Kannada Prabha

ಸಾರಾಂಶ

ಸಂಜೆ ವೇಳೆ ಕಡಲ ಕಿನಾರೆಯ ಆಲಿಮಕಲ್ಲು ಎಂಬಲ್ಲಿ ಉದಯ ಅವರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ನಗರದ ವೆನ್ಲಾಕ್‌ ಆಸ್ಪತ್ರೆಗೆ ಒಯ್ಯಲಾಗಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಉಳ್ಳಾಲದ ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್‌, ಚಪ್ಪಲಿ, ಕೂಲಿಂಗ್‌ ಗ್ಲಾಸ್‌ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಸಮುದ್ರದಲ್ಲಿ ಪತ್ತೆಯಾಗಿದೆ. ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ ಕುಮಾರ್‌(46) ಮೃತಪಟ್ಟ ದುರ್ದೈವಿ.

ಬುಧವಾರ ಸೋಮೇಶ್ವರ ದೇವಸ್ಥಾನದ ಮುಂಭಾಗ ಉದಯ ಕುಮಾರ್‌ ಅವರು ಸ್ಕೂಟರ್‌ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದರು. ರುದ್ರಪಾದೆಯಲ್ಲಿ ಅವರ ಪರ್ಸ್‌, ಚಪ್ಪಲ್‌, ಕೂಲಿಂಗ್‌ ಗ್ಲಾಸ್‌ನ್ನು ಬಿಟ್ಟು ಅವರು ನಾಪತ್ತೆಯಾಗಿದ್ದರು. ಬೀಚ್‌ನಲ್ಲಿ ಸುತ್ತಾಡುತ್ತಿದ್ದ ಬಾಲಕನೊಬ್ಬ ಈ ವಸ್ತುಗಳನ್ನು ಸ್ಥಳೀಯ ಗೂಡಂಗಡಿ ಮಾಲೀಕನಿಗೆ ನೀಡಿದ್ದಾನೆ. ಅವರು ಪೊಲೀಸರಿಗೆ ವಿಷಯ ತಿಳಿಸಿದ್ದು, ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರ ತಂಡ ಸಮುದ್ರದಲ್ಲಿ ರಬ್ಬರ್‌ ಟ್ಯೂಬ್‌ ಮೂಲಕ ಶೋಧ ಕಾರ್ಯ ಕೈಗೊಂಡಿದೆ.

ಸಂಜೆ ವೇಳೆ ಕಡಲ ಕಿನಾರೆಯ ಆಲಿಮಕಲ್ಲು ಎಂಬಲ್ಲಿ ಉದಯ ಅವರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ನಗರದ ವೆನ್ಲಾಕ್‌ ಆಸ್ಪತ್ರೆಗೆ ಒಯ್ಯಲಾಗಿದೆ.

ಮೃತ ಉದಯ ಅವರು ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾೂ ಪುತ್ರನನ್ನು ಅಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ