ಅಣ್ಣ-ತಂಗಿಯ ಹಬ್ಬಕ್ಕೆ ಬಾಂಧವ್ಯದ ಬೆಸುಗೆ

KannadaprabhaNewsNetwork |  
Published : Nov 12, 2026, 02:00 AM IST
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ಅಣ್ಣ-ತಂಗಿ ಕಾರ್ಯಕ್ರಮದಲ್ಲಿ ರಾಜಮನೆತನದ ಪ್ರತಿನಿಧಿಗಳಿಗೆ ರಕ್ಷೆ ಕಟ್ಟಿದ ಕ್ಷಣ | Kannada Prabha

ಸಾರಾಂಶ

ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಮಧ್ಯದ ಸಹೋರತ್ವವನ್ನು ಗಟ್ಟಿಗೊಳಿಸುವಲ್ಲಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಬುಧವಾರ ನಡೆದ ಅಣ್ಣ-ತಂಗಿಯ ಹಬ್ಬ ಅರ್ಥಪೂರ್ಣವಾಗಿ ನಡೆಯಿತು.

ಧಾರವಾಡ:

ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಮಧ್ಯದ ಸಹೋರತ್ವವನ್ನು ಗಟ್ಟಿಗೊಳಿಸುವಲ್ಲಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಬುಧವಾರ ನಡೆದ ಅಣ್ಣ-ತಂಗಿಯ ಹಬ್ಬ ಅರ್ಥಪೂರ್ಣವಾಗಿ ನಡೆಯಿತು.

ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ, ವೀರಮಾತೆ ಬೆಳವಡಿ ಮಲ್ಲಮ್ಮ, ಕಿತ್ತೂರು ರಾಣಿಚೆನ್ನಮ್ಮ, ವೀರಮಾತೆ ಕೆಳದಿ ಚೆನ್ನಮ್ಮ ವಂಶಸ್ಥರ ಸಮಾಗಮಕ್ಕೆ ಗ್ರಾಮದ ಸಹಸ್ರರು ಜನರು ಸಾಕ್ಷಿಯಾದರು.

ಶಿವಾಜಿ ಮಹಾರಾಜರ ಸೈನ್ಯ ಹಾಗೂ ಬೆಳವಡಿ ಮಲ್ಲಮ್ಮ ನಡುವೆ 348 ವರ್ಷಗಳ ಹಿಂದೆ ಸೈನಿಕರ ಅಚಾತುರ್ಯದಿಂದ ಯುದ್ಧ ನಡೆದಿತ್ತು. ಆಗ ವೀರಮಾತೆ ಮಲ್ಲಮ್ಮಳ ಹೋರಾಟ ಶಿವಾಜಿಯನ್ನೇ ನಿಬ್ಬೆರಗುಗೊಳಿಸಿತ್ತು. ಮಲ್ಲಮ್ಮಳನ್ನು ಸಹೋದರಿ ಎಂದು ಶಿವಾಜಿ ಒಪ್ಪಿಕೊಂಡಿದ್ದರು. ಈ ಸ್ಮರಣಾರ್ಥ ಶಿವಾಜಿಯ ಸೊಸೆ ತಾರಾಬಾಯಿ ಯಾದವಾಡ ಗ್ರಾಮದಲ್ಲಿ ಶಿಲಾಶಾಸನ ಮತ್ತು ವೀರಗಲ್ಲನ್ನು ಕೆತ್ತಿಸಿದ್ದರು. ಇದರ ನೆನಪಿಗಾಗಿ ನಡೆದ ಈ ಕಾರ್ಯಕ್ರಮ ರಾಜಮನೆತನದವರ ನಡುವೆ ಬಾಂಧವ್ಯ ಬೆಸೆಯಿತು.

ಮಹಾರಾಷ್ಟ್ರ, ಬೆಳವಡಿ, ಕಿತ್ತೂರರು ಹಾಗೂ ಕೆಳದಿಯಿಂದ ಬಂದ ರಾಜ ಮನೆತನಗಳ ಪ್ರತಿನಿಧಿಗಳನ್ನು ಗ್ರಾಮಸ್ಥರು ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಗ್ರಾಮದಲ್ಲಿ ಶಿವಾಜಿ ಮಹಾರಾಜ ಹಾಗೂ ಬೆಳವಡಿ ಮಲ್ಲಮ್ಮಳ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಈ ವೇಳೆ ಮಹನೀಯರ ವೇಷಭೂಷಣ ಧರಿಸಿದ ಚಿಣ್ಣರು ಗಮನ ಸೆಳೆದರು. ಆರತಿ, ಕುಂಭದೊಂದಿಗೆ ಬಂದ ಮಹಿಳೆಯರ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಸರ್ಕಾರಿ ಶಾಲಾ ಆವರಣದಲ್ಲಿನ ವೇದಿಕೆ ಮೇಲಿನ ಕಂಬಳಿ ಹಾಸಿನ ಮೇಲೆ ರಾಜಮನೆತನದ ವಂಶಸ್ಥರನ್ನು ಕುಳ್ಳಿರಿಸಿದ ಗ್ರಾಮದ ಸಹೋದರಿಯರು ಕಂಕಣ ಧಾರಣೆಯೊಂದಿಗೆ ಅಣ್ಣ-ತಂಗಿ ಹಬ್ಬಕ್ಕೆ ಬಾಂಧವ್ಯದ ಬೆಸುಗೆ ಹಾಕಿದರು. ಆರತಿ ಬೆಳಗಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಧೋತಿ, ರೇಷ್ಮೆ ಪೇಟಾ ಧರಸಿ ಕಂಕಣ ಕಟ್ಟಿಸಿಕೊಂಡರು. ಮಲ್ಲಮ್ಮ ಮತ್ತು ಶಿವಾಜಿ ವಂಶಸ್ಥರೂ ಪರಸ್ಪರ ಕಂಕಣ ಕಟ್ಟಿ ವಂಶಸ್ಥರ ನಡೆಯನ್ನು ಅನುಕರಿಸಿದರು.

ಮಹಾರಾಷ್ಟ್ರದಲ್ಲಿರುವ ಶ್ರೀಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾಗಿರುವ ಸಂಕೇತರಾವ್ ಸರಕಾರ, ಆದೇಶರಾವ್ ವಿಚಾರಿ, ಸುಧೀರಜೀ ಮೋಹಿತೆ, ಸವರಾಜ ಘೋರ್ಪಡೆ, ಸತೀಶ ಕಾಲವಕರ ವೀರಮಾತೆ ಬೆಳವಡಿ ಮಲ್ಲಮ್ಮನ ವಂಶಸ್ಥರಾದ ನಾಗರಾಜ ದೇಸಾಯಿ ಚಚಡಿ, ಡಾ. ವೈ.ಐ. ಪಾಟೀಲ, ಮಡಿವಾಳಪ್ಪ ನೀಲಪ್ಪ ದೇಸಾಯಿ, ಕಿತ್ತೂರಕರ ದೇಸಾಯಿ, ಕೆಳದಿ ಚೆನ್ನಮ್ಮ ವಂಶಸ್ಥರಾದ ಚಂದ್ರಕಾಂತ ಸಂಘನಾಯಕ, ಗಜೇಂದ್ರಗಡ ಘೋರ್ಪಡೆ, ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರಾದ ಸೋಮಶೇಖರ ದೇಸಾಯಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಯಾದವಾಡ-ಮುಳಮುತ್ತಲ ಸಿದ್ಧಾರೂಢಮಠದ ಡಾ. ಆನಂದ ಸ್ವಾಮೀಜಿ, ಮಧ್ಯಪ್ರದೇಶ ದೇವಾಶ್ರಮದ ಸ್ವಾಮಿ ಶ್ರೀಪಾದ ಅವಧೂತಜಿ, ಶಾಸಕ ವಿನಯ ಕುಲಕರ್ಣಿ, ಲಿಂಗರಾಜ ಪಾಟೀಲ, ಡಾ. ಎಸ್.ಆರ್. ರಾಮನಗೌಡರ, ಮಾಜಿ ಶಾಸಕ ಅಮೃತ ದೇಸಾಯಿ, ಮಂಜುನಾಥ ಮಕ್ಕಳಗೇರಿ, ಬಂಗಾರೇಶ ಹಿರೇಮಠ, ಈಶ್ವರ ಶಿವಳ್ಳಿ, ಸಂತೋಷ ಸವಣೂರ, ಕೇದಾರನಾಥ ಚವ್ಹಾನ್, ಮಂಜು ಶಿಗ್ಗಾವಿ. ವಿನಾಯಕ ಜೋಶಿ, ಸಿ.ಎಸ್. ಪಾಟೀಲ್, ಬಾಳಮ್ಮ ಮಾನಪ್ಪನವರ, ಎನ್.ಎಂ. ಪಾಟೀಲ ಇತರರು ಇದ್ದರು. ಡಾ. ಬಾಳಪ್ಪ ಚಿನಗುಡಿ, ಎಸ್.ಸಿ. ಗುಗ್ಗರಿ ಉಪನ್ಯಾಸ ನೀಡಿದರು.

ಮಡಿವಾಳಪ್ಪ ದಿಂಡಲಕೊಪ್ಪ ಸ್ವಾಗತಿಸಿದರು. ಮಹಾದೇವಪ್ಪ ನಾಗಣ್ಣವರ ಮತ್ತು ಮಂಜುಳಾ ಯಲಿಗಾರ ನಿರೂಪಿಸಿದರು. ಬಸವರಾಜ ಪಟ್ಟಣದವರ ವಂದಿಸಿದರು.ಸ್ವತಂತ್ರ್ಯ ಭಾರತದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ, ಭಾಷಾ ವಿವಾದಗಳಿವೆ. ಆದರೆ, ನಾವೆಲ್ಲರೂ ಭಾರತ ಮಾತೆ ಪುತ್ರರು ಎಂದು ಶಿವಾಜಿ- ಮಲ್ಲಮ್ಮ ಆಗಲೇ ಬಾಂಧವ್ಯ ಬೆಸೆದವರು. ಇದುವೇ ಭಾರತೀಯ ಸಂಸ್ಕೃತಿ. ಶಿವಾಜಿ ಹುಟ್ಟಿದ್ದು ಮಹಾರಾಷ್ಟ್ರವಾದರೂ ಅವರ ರಾಷ್ಟ್ರಸೇವೆಯ ಕರ್ಮಭೂಮಿ ಕುಂದಾಪುರ ಹಾಗೂ ಬೆಳವಡಿ ಸಂಸ್ಥಾನ ಆಗಿತ್ತು. ನಾವೆಲ್ಲರೂ ರಾಷ್ಟ್ರನಿರ್ಮಾಣಕ್ಕೆ ಅಣೆಯಾಗಲು ಯಾದವಾಡ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮ ಪ್ರೇರಣೆ ಆಗಿದೆ.

ಸಂದೀಪಜೀ ಮಹಾರಾಜರು, ಶಿವಾಜಿ ವಂಶಸ್ಥರು

ಮಹಾರಾಷ್ಟ್ರ-ಕರ್ನಾಟಕದ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮ ವೇದಿಕೆ ಆಗಲಿ. ಇಲ್ಲಿನ‌ ಶಿಲಾಶಾಸನಕ್ಕೆ ದೊಡ್ಡ ಇತಿಹಾಸ ಇದೆ. ಇದನ್ನು ಬೆಳೆಸಲು ಜಾಗೆ ಅಗತ್ಯತೆ ಇದ್ದು, ಇದಕ್ಕೆ ಸರ್ಕಾರದಿಂದ ₹ 50 ಲಕ್ಷ ಅನುದಾನ ಕೊಡಿಸುತ್ತೇನೆ. ಶಿವಾಜಿ-ಮಲ್ಲಮ್ಮ ಳ ಇತಿಹಾಸದ ಬಗ್ಗೆ ಒಂದು ಉತ್ತಮ ಪುಸ್ತಕ ಹೊರಬರಬೇಕಿದೆ. ಅದಕ್ಕೆ ತಗಲುವ ಹಣವನ್ನು ಸ್ವಂತ ಖರ್ಚಿನಲ್ಲಿ ಭರಿಸುತ್ತೇನೆ. ಎಲ್ಲರೂ ಸೇರಿ ಒಮ್ಮೆ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿನ ಸರಕಾರದೊಂದಿಗೆ ಚರ್ಚಿಸೋಣವಿನಯ ಕುಲಕರ್ಣಿ, ಶಾಸಕ, ಮಾಜಿ ಸಚಿವ

350ನೇ ವರ್ಷದ ಕಾರ್ಯಕ್ರಮಕ್ಕೆ ₹ 2 ಲಕ್ಷ ಆರ್ಥಿಕ ನೆರವು ನೀಡುತ್ತೇನೆ.ಚಂದ್ರಕಾಂತ ಸಂಘನಾಯಕ, ಕೆಳದಿ ಚೆನ್ನಮ್ಮ‌ವಂಶಸ್ಥರು

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌