ವಡ್ಡರದೊಡ್ಡಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಬೋನಿಟ್ಟ ಅರಣ್ಯಾಧಿಕಾರಿಗಳು

KannadaprabhaNewsNetwork |  
Published : Sep 29, 2024, 01:39 AM IST
28ಕೆಎಂಎನ್ ಡಿ25 | Kannada Prabha

ಸಾರಾಂಶ

ವಡ್ಡರ ದೊಡ್ಡಿ ಸೇರಿದಂತೆ ಆಸುಪಾಸಿನ ಗ್ರಾಮಗಳಿಗೆ ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿಗೆ ಹೊಂದಿಕೊಂಡಂತಿರುವ ವಡ್ಡರದೊಡ್ಡಿ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಚಿರತೆಗಳು ಗ್ರಾಮಗಳಿಗೆ ಆಹಾರ ಅರಸಿ ಬಂದು ಸಾಕು ಪ್ರಾಣಿಗಳು ಹಾಗೂ ಜಮೀನುಗಳಲ್ಲಿ ಮೇಯಲು ಹೋಗುವ ಕುರಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಕುರಿ ಮಂದೆ ಮೇಲೆ ಚಿರತೆ ದಾಳಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನಿಟ್ಟು ಕಾರ್ಯಾಚರಣೆ ಕೈಗೊಂಡಿದೆ.

ರೈತರ ಆಕ್ರೋಶದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಬೋನ್ ಇಡುವ ಮೂಲಕ ಚಿರತೆ ಸೆರೆ ಹಿಡಿಯಲು ಕಾರ್ಯಾನ್ಮುಖರಾಗಿದ್ದಾರೆ.

ವಡ್ಡರ ದೊಡ್ಡಿ ಸೇರಿದಂತೆ ಆಸುಪಾಸಿನ ಗ್ರಾಮಗಳಿಗೆ ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿಗೆ ಹೊಂದಿಕೊಂಡಂತಿರುವ ವಡ್ಡರದೊಡ್ಡಿ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಚಿರತೆಗಳು ಗ್ರಾಮಗಳಿಗೆ ಆಹಾರ ಅರಸಿ ಬಂದು ಸಾಕು ಪ್ರಾಣಿಗಳು ಹಾಗೂ ಜಮೀನುಗಳಲ್ಲಿ ಮೇಯಲು ಹೋಗುವ ಕುರಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿವೆ. ಜೊತೆಗೆ ಕೆಲವು ಕುರಿಗಳನ್ನು ಎಳೆದೊಯ್ದಿರುವ ಕೃತ್ಯಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಅಧಿಕಾರಿ ಗವಿಯಪ್ಪ ತಿಳಿಸಿದರು.

ಈ ವೇಳೆ ಆರ್‌ಎಫ್ಒ ಮುರಳಿಧರ ನಾಯಕ್, ಎಆರ್‌ಎಫ್‌ಒ ಸುದರ್ಶನ್. ಚೆನ್ನಪ್ಪ ಸೇರಿದಂತೆ ಗಸ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.ಅಪ್ರಾಪ್ತ ಯುವತಿ ನಾಪತ್ತೆ

ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದ ಅಲೆಮನೆಯೊಂದರಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಅಪ್ರಾಪ್ತ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಸಾಮ್ಲಿ ಜಿಲ್ಲೆಯ ಡುಡಾರ್ ಮೂಲದ ನಿವಾಸಿ ರೇಖಾ (೧೭) ನಾಪತ್ತೆಯಾಗಿರುವ ಯುವತಿ. ತಾಲೂಕಿನ ಚಿಕ್ಕಬ್ಯಾಡರಹಳ್ಳಿಯ ಮನು ಎಂಬುವವರ ಅಲೆಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ತನ್ನ ಸಹೋದರನ ಮನೆಗೆ ಮೂರು ತಿಂಗಳ ಹಿಂದೆ ತಾಯಿ ವಿಮಲಾ ಅವರೊಂದಿಗೆ ರೇಖಾ ಬಂದಿದ್ದಳು. ಅಂದಿನಿಂದಲೂ ಅಣ್ಣನೊಂದಿಗೆ ವಾಸವಿದ್ದಳು. ಸೆ.೧೨ರಂದು ಸಂಜೆ ೫ ಗಂಟೆ ವೇಳೆಯಲ್ಲಿ ಅಲೆಮನೆಯಿಂದ ಕಾಣೆಯಾಗಿದ್ದಾಳೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಗೊತ್ತಿರುವ ಎಲ್ಲಾ ಕಡೆ ಹುಡುಕಿದರು ಆಕೆ ಎಲ್ಲಿಯೂ ಪತ್ತೆಯಾಗಿಲ್ಲ. ಅದೇ ದಿನ ಅಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಎಂಬ ಯುವಕ ಕೂಡ ನಾಪತ್ತೆಯಾಗಿದ್ದು, ಆತನ ಮೇಲೆ ನಮಗೆ ಅನುಮಾನವಿದೆ ಎಂದು ಅಪ್ರಾಪ್ತ ಯುವತಿಯ ಅಣ್ಣ ರವೀಂದ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಯುವತಿ ೫ ಅಡಿ ಎತ್ತರ, ಎಣ್ಣೆಗೆಂಪು, ಸಾಧಾರಣ ಮೈಕಟ್ಟು, ಹಿಂದಿ ಭಾಷೆ ಮಾತನಾಡುತ್ತಾಳೆ, ಕಾಣೆಯಾದ ದಿನ ನೆಶೆ ಬಣ್ಣದ ಚೂಡಿದಾರ ಧರಿಸಿದ್ದಳು. ಬಲಗಾಲಿನಲ್ಲಿ ಹಳೆ ಗಾಯದ ಗುರುತು ಇದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ