ಆ.14ರಿಂದ ಬುಕ್‌ ಬ್ರಹ್ಮ ಸಾಹಿತ್ಯೋತ್ಸವ-2026

KannadaprabhaNewsNetwork |  
Published : Jul 20, 2026, 12:45 AM IST
ದುಬಾರೆಯಲ್ಲಿ  ಕಾವೇರಿ ನೀರಿನ ಹರಿವಿನ ಕೊರತೆಯಿಂದ ದಡ ಸೇರಿರುವ ರಾಪ್ಟರ್ ಗಳ ದೃಶ್ಯ | Kannada Prabha

ಸಾರಾಂಶ

‘ಬುಕ್‌ ಬ್ರಹ್ಮ’ ಸಂಸ್ಥೆಯಿಂದ ಆ.14ರಿಂದ 23ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ಮೂರನೇ ಆವೃತ್ತಿಯ ಸಾಂಸ್ಕೃತಿಕ ಹಬ್ಬ ‘ಬುಕ್‌ ಬ್ರಹ್ಮ ಸಾಹಿತ್ಯೋತ್ಸವ 2026’ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ಬುಕ್‌ ಬ್ರಹ್ಮ’ ಸಂಸ್ಥೆಯಿಂದ ಆ.14ರಿಂದ 23ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ಮೂರನೇ ಆವೃತ್ತಿಯ ಸಾಂಸ್ಕೃತಿಕ ಹಬ್ಬ ‘ಬುಕ್‌ ಬ್ರಹ್ಮ ಸಾಹಿತ್ಯೋತ್ಸವ 2026’ ನಡೆಯಲಿದೆ.

ಆ.14ರಿಂದ 20ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬಿಬಿಎಲ್‌ಎಫ್‌- ಪುಸ್ತಕಲೋಕ ಮತ್ತು ಜಾನಪದ ಮಾರುಕಟ್ಟೆ ಸಾರ್ವಜನಿಕರಿಗಾಗಿ ತೆರೆದುಕೊಳ್ಳಲಿದೆ. ​ಆ.14ರಿಂದ 16ರವರೆಗೆ ಪ್ರತಿ ದಿನ ಸಂಗೀತ ಕಾರ್ಯಕ್ರಮ ಜರುಗಲಿವೆ. ಆ.21ರಿಂದ 23ರವರೆಗೆ ಸಾಹಿತ್ಯೋತ್ಸವದ ಪ್ರಮುಖ ಸಾಹಿತ್ಯಿಕಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಲಿವೆ.

​ಉತ್ಸವದಲ್ಲಿ ಸಾಹಿತ್ಯಿಕ ಚರ್ಚೆಗಳು ಒಟ್ಟು 9 ಸಮಾನಾಂತರ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ನಡೆಯಲಿವೆ. ಒಟ್ಟು 207 ಗೋಷ್ಠಿಗಳು ಹಾಗೂ ಚರ್ಚೆಗಳು ಆಯೋಜನೆಗೊಂಡಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ ಲೋಕದ 400ಕ್ಕೂ ಹೆಚ್ಚು ಲೇಖಕರು, ಚಿಂತಕರು, ತಜ್ಞರು, ಕಲಾವಿದರು ಹಾಗೂ ಪ್ರಕಾಶಕರು ಈ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ವಿಚಾರ ಹಂಚಿಕೊಳ್ಳಲಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳು, ಗೋಷ್ಠಿಗಳು ಹಾಗೂ ಸಂಗೀತ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ವೆಬ್‌ಸೈಟ್: www.bookbrahmalitfest.com ಗೆ ಭೇಟಿ ನೀಡಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ