ಮಂಗಳೂರು: ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ ‘ಅಮ್ಮ ಸಾಹಿತ್ಯ ಪ್ರಶಸ್ತಿ’ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ ಪ್ರದಾನ ಭಾನುವಾರ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ನಡೆಯಿತು. ಲೇಖಕಿ ಮತ್ತು ಪ್ರಕಾಶಕಿ ಇಂದಿರಾ ಹಾಲಂಬಿ ಅವರಿಗೆ ಅಮ್ಮ ಸಾಹಿತ್ಯ ಪ್ರಶಸ್ತಿ , ಕೊರಗಾಭಿವೃದ್ಧಿ ಸಂಘಗಳ ಅಧ್ಯಕ್ಷೆ ಸುಶೀಲಾ ನಾಡಗೆ ಅನನ್ಯ ಸಾಧಕೀಯ ಪ್ರಶಸ್ತಿ ಹಾಗೂ ಬಾಗಲಕೋಟೆ ಇಳಕಲ್ ತಾಲೂಕಿನ ಕವಯತ್ರಿ ಮರ್ತುಜಾ ಬೇಗಮ್‌ಗೆ 2025 -26 ನೇ ಸಾಲಿನ ಚಂದ್ರಭಾಗಿ ರೈ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.‘ಟೀಚರ್’ ಶೈಕ್ಷಣಿಕ ಪತ್ರಿಕೆ ಸಂಪಾದಕ ಉದಯ ಗಾಂವ್ಕರ್ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿ, ಒಂದು ತಲೆಮಾರಿನ ನಾಗರಿಕತೆಯ ಸಂಸ್ಕೃತಿಯನ್ನು ಕೃತಿಯ ರೂಪದಲ್ಲಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು. ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವ ಮುಖೇನ ಇದನ್ನು ಸಾಧಿಸಬಹುದು ಎಂದು ಹೇಳಿದರು.
ಡಾ.ಮಮತಾ ತಿಲಕ್ ರಾವ್ ಮುಂಬಯಿ ಪ್ರಾಸ್ತಾವಿಕ ಮಾತನಾಡಿದರು. ರತ್ನಾವತಿ ಜೆ.ಬೈಕಾಡಿ ಆಶಯ ಗೀತೆ ಹೇಳಿದರು. ಸಾವಿತ್ರಿ ಪೂರ್ಣಚಂದ್ರ ನಿರೂಪಿಸಿದರು.ಲೇಖಕಿ, ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಸಮನ್ವತೆಯಲ್ಲಿ ‘ಗಿರಿವಾಸಿನಿಯ ಮರುದನಿ’ ಸಂವಾದ ಏರ್ಪಟ್ಟಿತು.