‘ಗುತ್ತೊಂಜಿ ಕಥೆ ಆಂಡ್‌’ ತುಳುವಿಗೆ ಒಳ್ಳೆ ಕೊಡುಗೆ: ಡಾ. ಚಿನ್ನಪ್ಪ ಗೌಡ

KannadaprabhaNewsNetwork |  
Published : Oct 14, 2026, 02:30 AM IST
 ‘ಗುತ್ತೊಂಜಿ ಕಥೆ ಆಂಡ್‌’ ತುಳು ನಾಟಕ ಕೃತಿ ಲೋಕಾರ್ಪಣೆ ಕ್ಷಣ | Kannada Prabha

ಸಾರಾಂಶ

ಪತ್ರಕರ್ತ ರಾಜೇಶ್‌ ಶೆಟ್ಟಿ ದೋಟ ಅವರ ‘ಗುತ್ತೊಂಜಿ ಕಥೆ ಆಂಡ್‌’ ತುಳು ನಾಟಕ ಕೃತಿಯನ್ನು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಲೋಕಾರ್ಪಣೆ

ಮಂಗಳೂರು: ತುಳು ಭಾಷೆ ಬಿಗಿಯಾಗಿ ಕಟ್ಟಿಕೊಟ್ಟಿರುವ ‘ಗುತ್ತೊಂಜಿ ಕಥೆ ಆಂಡ್‌’ ತುಳು ನಾಟಕ ಕೃತಿ ನಮ್ಮ ನೆಲದ ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಿಸುವ ಸಂದೇಶವನ್ನು ನೀಡಿದೆ. ರಂಗದಲ್ಲಿ ಯಶಸ್ಸು ಆಗಬಹುದಾದ ಈ ನಾಟಕ ತುಳುವಿಗೆ ಒಳ್ಳೆಯ ಕೊಡುಗೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ಪತ್ರಕರ್ತ ರಾಜೇಶ್‌ ಶೆಟ್ಟಿ ದೋಟ ಅವರ ‘ಗುತ್ತೊಂಜಿ ಕಥೆ ಆಂಡ್‌’ ತುಳು ನಾಟಕ ಕೃತಿಯನ್ನು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗುತ್ತಿನ ಮನೆ, ಚಾವಡಿ ಉಳಿಯುವ ಆಶಾಕಿರಣವನ್ನು ಈ ನಾಟಕದಲ್ಲಿ ಕಾಣಬಹುದು ಎಂದರು. ಕೃತಿ ಪರಿಚಯ ಮಾಡಿದ ರಂಗಕರ್ಮಿ, ವಕೀಲ ಶಶಿರಾಜ್‌ ಕಾವೂರು, ನಾಟಕದಲ್ಲಿ ಬಿಗಿತನವಿದ್ದು, ಈ ಮಣ್ಣಿನ ಸೊಗಡಿದೆ. ರಂಗ ಪ್ರಯೋಗಕ್ಕೆ ಪೂರಕವಾಗಿದೆ. ಪಾತ್ರೋಚಿತ ಸಂಭಾಷಣೆಯಿದೆ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್‌. ಶುಭ ಹಾರೈಸಿದರು. ಮಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಸ್ವಾಗತಿಸಿ, ನಿರೂಪಿಸಿದರು. ಕೃತಿಕಾರ ರಾಜೇಶ್‌ ಶೆಟ್ಟಿ ದೋಟ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿ ಸರ್ಕಾರದ ಕೊಡುಗೆಯಲ್ಲ, ಸಾಂವಿಧಾನಿಕ ಸಾಧನ
ಗೌರವ, ವಿನಯ, ಕೃತಜ್ಞತೆ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ: ಡಾ. ನೀಲ್ ರತನ್ ಶೆಂಡೆ