ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕನ್ನಡದ ಕೃತಿಗೆ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಕನ್ನಡಿಗರು, ಕನ್ನಡ ಭಾಷೆ ಹಾಗೂ ನಾಡಿಗೆ ಸಂದ ಗೌರವವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಖ್ಯಾತ ಸಾಹಿತಿ, ವಕೀಲೆ, ಪತ್ರಕರ್ತೆ ಹಾಗೂ ಜನಪರ ಹೋರಾಟಗಾರ್ತಿ ಬಾನು ಮುಸ್ತಾಕ್ ಅವರ ಹಸೀನಾ ಮತ್ತು ಇತರೆ ಕಥೆಗಳು ಕೃತಿಯನ್ನು ದೀಪಾ ಭಾಸ್ತಿ ಎಂಬುವರು ಹಾರ್ಟ್ ಲ್ಯಾಂಪ್ ಅಂದರೆ, ಎದೆಯ ಹಣತೆ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದು, ಈ ಕೃತಿಗೆ ಬೂಕರ್ ಪ್ರಶಸ್ತಿ ಸಂದಿದ್ದು, ಕನ್ನಡ ಭಾಷೆಗೆ ಸಿಕ್ಕ ಮೊದಲ ಪ್ರಶಸ್ತಿ. 2ನೇಯ ಕನ್ನಡಿಗರು. ಈ ಹಿಂದೆ ಅರವಿಂದ ಅವರ ವೈಟ್ ಟೈಗರ್ ಕೃತಿಗೆ ಬೂಕರ್ ಪ್ರಶಸ್ತಿ ಸಂದಿತ್ತು ಎಂದು ವಿವರಿಸಿದರು.
ಬಾನು ಮುಸ್ತಾಕ್ ಅವರಿಗೆ ನಮ್ಮ ತಾಯಿ ಶ್ರೀಮತಿ ಪದ್ಮ ಜಿ.ಮಾದೇಗೌಡರ ಹೆಸರಿನಲ್ಲಿ 2016ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು, ನಮಗೆ ಹೆಮ್ಮೆ ತಂದಿದೆ. ಕನ್ನಡ ಭಾಷಗೆ ಮಹತ್ವವಿದೆ ಎಂಬುದನ್ನು ಕನ್ನಡಿಗರು ಅರ್ಥೈಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು, ಸಾಹಿತಿ ಬಾನು ಮುಸ್ತಾಕ್ ಕನ್ನಡತನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪಿಸಿರುವುದು ಕನ್ನಡಿಗರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.ವಸತಿ ಶಾಲೆಗೆ ಶೇ.91 ರಷ್ಟು ಫಲಿತಾಂಶಪಾಂಡವಪುರ: ತಾಲೂಕಿ ಮಹದೇಶ್ವರಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಎಸ್ಸೆಸ್ಸೆಲ್ಸಿ ಶೇ.91ರಷ್ಟು ಫಲಿತಾಂಶ ಬಂದಿದೆ. ಶಾಲೆಯ 44 ವಿದ್ಯಾರ್ಥಿಗಳು ಪರೀಕ್ಷೆ ಬರೆದು 40 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.91ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಮರುಮೌಲ್ಯ ಮಾಪನದಲ್ಲಿ ಇಬ್ಬರು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಹೆಚ್ಚು ಫಲಿತಾಂಶ ಪಡದೆ ಶಾಲೆಗಳ ಪೈಕಿ ದ್ವಿತೀಯ ಸ್ಥಾನದಲ್ಲಿದೆ. ಸರಕಾರಿ ಶಾಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ಪ್ರಾಂಶುಪಾಲ ದಿಲೀಪ್‌ಕುಮಾರ್ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.