ಗಡಿ ಜಿಲ್ಲೇಲಿ ಕನ್ನಡ ಸಂಸ್ಕೃತಿ, ಪರಂಪರೆಗೆ ಉನ್ನತ ಸ್ಥಾನ: ಸುರೇಶ್‌ ಋಗ್ವೇದಿ

KannadaprabhaNewsNetwork |  
Published : Nov 02, 2026, 02:30 AM IST
ಗಡಿ ಜಿಲ್ಲೆಯಲ್ಲಿ ಕನ್ನಡದ ಬಳಕೆ, ಸ್ಥಾನ ಮಾನ, ಸಂಸ್ಕೃತಿ, ಪರಂಪರೆ,ಜನಪದ, ಸಾಹಿತ್ಯ, ಉನ್ನತ ಸ್ಥಾನದಲ್ಲಿದೆ | Kannada Prabha

ಸಾರಾಂಶ

ಗಡಿ ಭಾಗವಾದ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ಬಳಕೆ, ಸ್ಥಾನ ಮಾನ ಮತ್ತು ಸಂಸ್ಕೃತಿ, ಪರಂಪರೆ,ಜನಪದ, ಸಾಹಿತ್ಯ, ಉನ್ನತ ಸ್ಥಾನದಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗಡಿ ಭಾಗವಾದ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ಬಳಕೆ, ಸ್ಥಾನ ಮಾನ ಮತ್ತು ಸಂಸ್ಕೃತಿ, ಪರಂಪರೆ,ಜನಪದ, ಸಾಹಿತ್ಯ, ಉನ್ನತ ಸ್ಥಾನದಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಗಡಿ ಪ್ರದೇಶವಾಗಿದ್ದು ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸರಹದ್ದಿನಲ್ಲಿದೆ. ಕನ್ನಡ,ತಮಿಳು, ಮಲಯಾಳಂ ಭಾಷೆಗಳ ವೈವಿಧ್ಯತೆಯ ಸಮ್ಮಿಲನದೊಂದಿಗೆ ಕನ್ನಡ ಭಾಷೆ ಅತ್ಯುತ್ತಮ ಸ್ಥಾನದಲ್ಲಿ ಬಳಸಲಾಗುತ್ತಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಅಚ್ಚ ಕನ್ನಡದ ಭಾಷಾ ಬಳಕೆ ನಡೆಯುತ್ತಿದೆ. ಅಪ್ಪಟ ಕನ್ನಡಿಗರಿರುವ ಪ್ರದೇಶವಾಗಿ ಸದಾಕಾಲ ಕನ್ನಡದ ಸಂಘಟನೆಗಳು ಜಾಗೃತಿಯ ಹಾಗೂ ಸಮಗ್ರವಾದ ಕನ್ನಡದ ಸಂಸ್ಕೃತಿ ಪರಂಪರೆ,ನಾಡು,ನುಡಿ,ಜಲ ಭಾಷೆ, ಜನಪದ, ನೃತ್ಯ, ಗಮಕ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕನ್ನಡ ಸಂಘಟನೆಗಳಿಗೆ ಕನ್ನಡ ಪ್ರೇಮಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭದಿನದಂದು ಅಭಿನಂದನೆಗಳನ್ನು ಸಲ್ಲಿಸಬೇಕು. ಭಾಷಾಭಿಮಾನವನ್ನು ಬೆಳೆಸಿಕೊಂಡು ಭಾಷೆಯನ್ನು ಮುನ್ನಡೆಸಬೇಕು. ರಾಷ್ಟಾಭಿಮಾನ, ಭಾಷಾಭಿಮಾನ, ಆತ್ಮಾಭಿಮಾನ, ಕಲಾಭಿಮಾನವನ್ನು ಸರ್ವರು ಬೆಳೆಸಿಕೊಳ್ಳೋಣ ಎಂದರು.

ಹಿರಿಯ ಕನ್ನಡ ಚಳುವಳಿಗಾರ ಶಾ ಮುರಳಿ ಮಾತನಾಡಿ ಕನ್ನಡ ಉಳಿಯಲು ಕನ್ನಡ ಚಳುವಳಿಗಾರರ ಕೊಡುಗೆ ಅಪಾರವಾಗಿದೆ. ಕನ್ನಡದ ಕವಿಗಳು, ಸಾಹಿತಿಗಳು ಕಲಾವಿದರು, ಸಂಗೀತಗಾರರು ಹಾಗೂ ಜನಸಾಮಾನ್ಯರು ಕನ್ನಡವನ್ನು ಹೆಚ್ಚು ಬಳಸಬೇಕು. ಕನ್ನಡತನ ಶಾಶ್ವತವಾಗಿ ಭವಿಷ್ಯಕ್ಕೆ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು. ಕನ್ನಡ ಚಳವಳಿ ಸಮಗ್ರವಾಗಿ ಕನ್ನಡದ ಉಳಿವಿಗೆ ಶ್ರಮಿಸುತ್ತಿದೆ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ಅಧ್ಯಕ್ಷರಾದ ಶ್ರೀನಿವಾಸ ಗೌಡ ಮಾತನಾಡಿ ನವಂಬರ್ 1 ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಜ್ಯೋತಿಯನ್ನು ಬೆಳಗಿಸೋಣ.ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸೋಣ. ಅನ್ಯ ಭಾಷೆಗಳಿಗೂ ಕನ್ನಡ ಬಳಸಲು ಸ್ಪೂರ್ತಿ ತುಂಬಬೇಕು. ಪ್ರತಿ ಮನೆಯಲ್ಲೂ ಕನ್ನಡವನ್ನು ಪ್ರೀತಿಸಿ ಬೆಳಸಿ ಎಂದು ತಿಳಿಸಿದರು.

ಶ್ರೀ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷ ಜಿ.ಬಂಗಾರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಿಳಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿದೆ. ಕನ್ನಡ ಸಂಘ ಸಂಸ್ಥೆಗಳು ಪ್ರತಿ ಗ್ರಾಮಗಳಲ್ಲೂ ಜಾಗೃತವಾಗಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಿದೆ ಎಂದರು.

ಹಿರಿಯ ಹೋರಾಟ ಗಾರ ರಾಜಗೋಪಾಲ, ಕಂಡಕ್ಟರ್ ಸೋಮನಾಯಕ , ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ ಶಿವಲಿಂಗ ಮೂರ್ತಿ, ಬಂಗಾರು ಜಿ, ಗುರುಲಿಂಗಮ್ಮ ವರದನಾಯಕ, ಬೊಮ್ಮನಹಳ್ಳಿ ಬಸವಣ್ಣ , ಕನ್ನಡ ಚಳವಳಿಗಾರ ವರದನಾಯಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕ್ರಮ: ಸಹಕಾರ ಸಚಿವ ಲಕ್ಷ್ಮಣ ಸವದಿ
ನದಿ ಜೋಡಣೆ ವಿರೋಧಿಸಿ ಬೃಹತ್‌ ಹೋರಾಟಕ್ಕೆ ಅಣಿ