ಕಲಘಟಗಿ ತಾಲೂಕಿನ 27 ಗ್ರಾಮಗಳಿಗೆ ಬೋರ್‌ವೆಲ್‌ ನೀರು

KannadaprabhaNewsNetwork | Published : Mar 22, 2024 1:01 AM
4 | Kannada Prabha

ಕಲಘಟಗಿ ತಾಲೂಕಿನ 27 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಧಾರವಾಡ:

ಕಲಘಟಗಿ ತಾಲೂಕಿನ 27 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕಲಘಟಗಿ ತಹಸೀಲ್ದಾರ್‌ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಲಘಟಗಿ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ, ಈ ಹಿಂದೆಯೇ ವಿಪತ್ತು ಅಂದಾಜಿಸಿ ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿತ್ತು. ಗುರುತಿಸಿರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪರಿಹರಿಸಲು ಪರ್ಯಾಯ ಯೋಜನೆ ರೂಪಿಸಲಾಗಿತ್ತು. ಅದರಂತೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳಿಗೆ ಖಾಸಗಿ ಮಾಲೀಕರಿಂದ ಬೋರ್‌ವೆಲ್ ಬಾಡಿಗೆ ಪಡೆದು, ಅಗತ್ಯ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ತಾಲೂಕಿನ ಬಮ್ಮಿಗಟ್ಟಿ ಗ್ರಾಪಂನ ಬಮ್ಮಿಗಟ್ಟಿಗೆ (2) ನೆಲ್ಲಿಹರವಿಗೆ (1), ತಂಬೂರ ಗ್ರಾಪಂನ ತಂಬೂರಗೆ (1) ಜುಂಜುಣಬೈಲಗೆ (2), ಬೆಲವಂತರ ಗ್ರಾಪಂನ ಬೆಲವಂತರ (4) ಸೋಮನಕೊಪ್ಪ (2), ಮುತ್ತಗಿ ಗ್ರಾಪಂನ ಮುತ್ತಗಿ (3), ಬಿ. ಶಿಗಿಗಟ್ಟಿ (1), ಸಂಗಮೇಶ್ವರ ಗ್ರಾಪಂನ ಸಂಗಮೇಶ್ವರ (1), ಜಿನ್ನೂರು ಗ್ರಾಪಂನ ದ್ಯಾವನಕೊಂಡ (2), ಮುಕ್ಕಲ ಗ್ರಾಪಂನ ಮುಕ್ಕಲ (7), ತಾವರಗೇರಿ ಗ್ರಾಪಂನ ತಾವರಗೇರಿ (1), ಬು. ಹೂಲಿಕಟ್ಟಿ ಗ್ರಾಪಂನ ಬು. ಹುಲಿಕಟ್ಟಿ (1) ಸೇರಿದಂತೆ ಒಟ್ಟು ಒಂಭತ್ತು ಗ್ರಾಪಂ 13 ಗ್ರಾಮಗಳಿಗೆ 27 ಖಾಸಗಿ ಕೊಳವೆಬಾವಿಗಳ ಮೂಲಕ ಪ್ರತಿದಿನ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಲಘಟಗಿ ತಾಲೂಕಿನ ಸಾರ್ವಜನಿಕರು ತಮ್ಮ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದ್ದಲ್ಲಿ ತಮ್ಮ ಗ್ರಾಮದ ಗ್ರಾಪಂ ಅಥವಾ ಗ್ರಾಮ ಆಡಳಿತ ಅಧಿಕಾರಿ ಅಥವಾ ತಹಸೀಲ್ದಾರ್‌ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ- 08370-284535ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ತಹಸೀಲ್ದಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.