ನಾಳೆಯಿಂದ ಬಾಕ್ಸ್‌ ಕ್ರಿಕೆಟ್‌ 30(ರ್ಯಾಡ್‌) ಪಂದ್ಯಾವಳಿ

KannadaprabhaNewsNetwork |  
Published : Nov 13, 2024, 12:00 AM IST
ಪೊಟೊ: 12ಎಸ್‌ಎಂಜಿಕೆಪಿ04ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ಮಾತನಾಡಿದರು.  | Kannada Prabha

ಸಾರಾಂಶ

ಸ್ಮಾರ್ಟ್ ಶಿವಮೊಗ್ಗ ಡೆವಲಪರ್ಸ್‌ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ನ.14, 15, 16 ಮತ್ತು 17ರಂದು ಗೋಪಾಳ ಮೈದಾನದಲ್ಲಿ 14ನೇ ಬಾಕ್ಸ್ ಕ್ರಿಕೆಟ್ 30 (ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ಮಾರ್ಟ್ ಶಿವಮೊಗ್ಗ ಡೆವಲಪರ್ಸ್‌ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ನ.14, 15, 16 ಮತ್ತು 17ರಂದು ಗೋಪಾಳ ಮೈದಾನದಲ್ಲಿ 14ನೇ ಬಾಕ್ಸ್ ಕ್ರಿಕೆಟ್ 30 (ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಯು ಸ್ಮಾರ್ಟ್ ಶಿವಮೊಗ್ಗ ಡೆವಲಪರ್ಸ್‌ ಅಂಡ್ ಬಿಲ್ಡರ್ಸ್‌ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ರಾಜ್ಯದ 18 ತಂಡ, ಹೊರ ರಾಜ್ಯದ 6 ತಂಡ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ 20 ತಂಡ ಸೇರಿದಂತೆ ಒಟ್ಟು 44 ತಂಡಗಳು ಭಾಗವಹಿಸುತ್ತಿವೆ ಎಂದರು.ಈ ಪ್ರದ್ಯಾವಳಿಗೆ ಪ್ರವೇಶ ಶುಲ್ಕ ಉಚಿವವಾಗಿದ್ದು, ಪ್ರಥಮ ಬಹುಮಾನ ₹1,77,777, ದ್ವಿತೀಯ ₹77,777 ಹಾಗೂ ತೃತೀಯ ₹37,777 ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುವುದು. ಮ್ಯಾನ್ ಆಫ್ ದಿ ಸೀರಿಸ್‌ಗೆ ಯಮಹಾ ಆರ್‌ಡಿಎಕ್ಸ್ ಬೈಕ್‌ನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನ.14ರಂದು ಸಂಜೆ 5ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಕ್ಕಿನ ಕಲ್ಮಠದ ಡಾ. ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮೌಲಾನ ಅಬ್ದುಲ್ ರೆಹಮಾನ್, ಸ್ಟಿಫನ್ ಅಲ್ಬೂಕರ್‌, ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ ಇರುವರು.

ಭೀಮಣ್ಣ ಟಿ. ನಾಯ್ಕ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಪಂದ್ಯಾವಳಿ ನಡೆಯುವ ದಿನಾಂಕದಲ್ಲೇ ನ.17ರಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಅವರ ಜನ್ಮದಿನವಿದ್ದು, ಅವರ ಜನ್ಮದಿನವನ್ನೂ ಪಂದ್ಯಾವಳಿ ವೇಳೆ ಆಚರಿಸುವ ಮೂಲಕ ಶುಭಾಶಯ ಸಲ್ಲಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತರುಣ್‌ಶೆಟ್ಟಿ, ಯೋಗೇಶ್ ಗೌಡ, ಚಿರಂಜೀವಿ ಬಾಬು, ಗೀತೇಂದ್ರ ಗೌಡ, ಸೈಪು, ಪ್ರದೀಪ್ ಕಾವಡ್, ಮೊಹಮ್ಮದ ಶರೀಫ್ ಆಸಿಫ್, ಲೋಹಿತ್, ಪ್ರದೀಪ್, ಅನಿಲ್ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ