ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ನಲ್ಲಿ ಗ್ರಾಮಸ್ಥರಿಗೆ ಯಾವುದೇ ರೀತಿಯ ಕೆಲಸ ಕಾರ್ಯವಾಗುತ್ತಿಲ್ಲ ಎಂದು ಸುತ್ತಮುತ್ತುದ ಗ್ರಾಮಸ್ಥರು ಪಂಚಾಯತಿ ಎದುರು ಸೋಮವಾರ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.ಗ್ರಾಮ ಪಂಚಾಯಿತಿಗೆ ಕಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಿಲ್ಲ ಇದರಿಂದ ಗ್ರಾಮಸ್ಥರ ಹಲವು ಅರ್ಜಿಗಳು ವಿಲೆವಾರಿಯಾಗದೆ ಹಾಗೆ ಉಳಿದಿವೆ. ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಸೂಕ್ತ ಸಮಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು.
ಪಂಚಾಯಿತಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಡವರ ಮತ್ತು ಮಧ್ಯಮಾ ವರ್ಗದವರಿಗೆ 9 &11 ಎ,ಬಿ ಅರ್ಜಿಯನ್ನು ಸಲ್ಲಿಸಿದ್ದು ಇದಕ್ಕೆ ಯಾವುದೇ ಉತ್ತರ ದೊರೆತಿಲ್ಲ, ಸಾರ್ವಜನಿಕರು ನಿರಾಪಕ್ಷಣೆ ಪತ್ರವನ್ನು ಕೇಳಿದಲ್ಲಿ ಪಂಚಾಯಿತಿಯಿಂದ ದೊರೆಯುತ್ತಿಲ್ಲ ಹಲವು ಉದ್ಯಮ ವ್ಯಾಪಾರ ಮಾಡಲು ವ್ಯಾಪಾರ ಪರವಾನಿಗೆ ಪತ್ರವನ್ನು ಗ್ರಾಮ ಪಂಚಾಯಿತಿ ವಿತರಿಸಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೇವಲ ನೆಪಕ್ಕೆ ಮಾತ್ರ ಆಡಳಿತ ಮಂಡಳಿಯ ಸಭೆಯನ್ನು ನಡೆಸುತ್ತಿದ್ದು ಇದರಿಂದ ಯಾವುದೇ ಪ್ರಯೋಜನವಾಗದೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಹಲವು ಗ್ರಾಮಸ್ಥರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇತ್ತೀಚಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಗುತ್ತಿಗೆದಾರರೊಂದಿಗೆ ಹಣ ಪಡೆಯುತ್ತಿರುವ ವೇಳೆ ಲೋಕಾಯುಕ್ತ ದಾಳಿಯಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರು.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿಯ ಹಲವು ಗ್ರಾಮದ ಮುಖಂಡರಾದ ಶಿವಕುಮಾರ್, ದಿಲೀಪ್, ಸಂದೀಪ್ ಹೆಚ್ ಎನ್, ಕೆ ಪಿ ನಿರಂಜನ್, ಹುಲಸೆ ಭರತ್, ಪುನೀತ್ ತಾಳೂರು ಪ್ರಮುಖ ಪಾತ್ರವಹಿಸಿದ್ದಾರೆ.
---------------------------------------------------------------------------------------ತಾಲೂಕು ಮಟ್ಟದ ‘ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ’ ನಾಳೆ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಕನ್ನಡಪ್ರಭ ದಿನ ಪತ್ರಿಕೆ, ಕರ್ನಾಟಕ ಚಿತ್ರಕಲಾ ಪರಿಷತ್, ಅರಣ್ಯ ಇಲಾಖೆ ಹಾಗೂ ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲಮಾಧ್ಯಮದ ಆಶ್ರಯದಲ್ಲಿ ನ.11ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಶನಿವಾರಸಂತೆಯ ಸುಪ್ರಜ ಗುರುಕುಲ ಶಾಲೆಯಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.4 ಮತ್ತು 5ನೇ ತರಗತಿ, 6 ಮತ್ತು 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.ಚಿತ್ರ ಬಿಡಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗುತ್ತಿದೆ. ಡ್ರಾಯಿಂಗ್ ಶೀಟ್ ಸ್ಥಳದಲ್ಲಿ ನೀಡಲಾಗುತ್ತದೆ. ಬಣ್ಣ ಮತ್ತಿತರ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 2 ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತಿದೆ. ಸ್ಥಳದಲ್ಲೇ ತೀರ್ಪುಗಾರಿಕೆ ಮತ್ತು ಬಹುಮಾನ ವಿತರಿಸಲಾಗುತ್ತದೆ. ವಿಜೇತರನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.ಸ್ಪರ್ಧಿಸಲು ಆಸಕ್ತಿ ಇರುವ ಶಾಲಾ ವಿದ್ಯಾರ್ಥಿಗಳು: ಮುರುಳೀಧರ್ 9738910817 ಅನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಘಾಟನಾ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪೂಜಶ್ರೀ, ಸುಪ್ರಜ ಗುರುಕುಲ ಶಾಲಾ ಮುಖ್ಯಸ್ಥೆ ಸುಜಲಾದೇವಿ, ಶನಿವಾರಸಂತೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಸ್.ಎನ್. ರಘು, ಕನ್ನಡಪ್ರಭ ರೈತ ರತ್ನ ಪುರಸ್ಕೃತ ಎ.ಡಿ. ಮೋಹನ್, ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಬಿ. ಅಬ್ಬಾಸ್, ಶನಿವಾರಸಂತೆ ಗ್ರಾಪಂ ಉಪಾಧ್ಯಕ್ಷ ಸರ್ದಾರ್ ಅಹಮದ್, ಸಿ.ಸಿ. ಬೇಕರಿಯ ಮಾಲೀಕ ಸೋಮಶೇಖರ್ ಪಾಲ್ಗೊಳ್ಳಲಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))