- ಗುಂಡ್ಲುಪೇಟೆಯ ಗುಮ್ಮಕಲ್ಲು ಗುಡ್ಡದಲ್ಲಿ ದುರ್ಘಟನೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕ್ವಾರಿಯಲ್ಲಿನ ನಿಂತ ನೀರಿನಲ್ಲಿ ಈಜಾಡಲು ಹೋಗಿ ಯುವಕನೋರ್ವ ಮೃತಪಟ್ಟಿರುವ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗುಮ್ಮಕಲ್ಲು ಗುಡ್ಡದಲ್ಲಿ ಬುಧವಾರ ಸಂಜೆ ನಡೆದಿದೆ.ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಶಶಾಂಕ್ (20) ಮೃತ ಯುವಕ. ಪಟ್ಟಣದ ಕುರುಬಗೇರಿಯಲ್ಲಿನ ಅಜ್ಜಿಯ ಮನೆಯಲ್ಲಿ ವಾಸವಿದ್ದ. ಶಶಾಂಕ್ ಸ್ನೇಹಿತರೊಡಗೂಡಿ ಗುಮ್ಮಕಲ್ಲುಗುಡ್ಡಕ್ಕೆ ಈಜಲು ಹೋಗಿದ್ದಾನೆ. ಕ್ವಾರಿ ಸ್ಥಗಿತಗೊಂಡ ಕಾರಣ ಸ್ನೇಹಿತರೆಲ್ಲರೂ ಈಜಾಡಿದ್ದಾರೆ.
ಸಂಜೆವರೆಗೂ ನಡೆಸಿದ ಹುಡುಕಾಟದಲ್ಲಿ ಶಶಾಂಕ್ ದೇಹ ಸಿಕ್ಕಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಗಿತಗೊಂಡಿರುವ ಕ್ವಾರಿಯನ್ನು ಲೀಸ್ ದಾರ ಬಳಸಿ ಮುಚ್ಚಿಸುವ ಬದಲಿಗೆ ತೆರೆದಿಟ್ಟಿರುವ ಕಾರಣ ಯುವಕನ ಪ್ರಾಣ ಹೋಗಿದೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಇಲಾಖೆಯು ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್. ಸುರೇಶ್ ಆಗ್ರಹಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕೇರಳ ರಸ್ತೆ ಬಳಿಯ ಗುಮ್ಮಕಲ್ಲು ಗುಡ್ಡದಲ್ಲಿ ಯುವಕ ಸಾವನ್ನಪ್ಪಿದ ವಿಷಯ ತಿಳಿದು ಸಾರ್ವಜನಿಕರು ಜಮಾಯಿಸಿದ್ದರು.
---ಸಾವಿಗೆ ಯಾರು ಹೊಣೆ- ಶೈಲಕುಮಾರ್: