)
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೆಂಗಳೂರು ನಿವಾಸಿಯಾದ ಆನಂದ್ ರಾಜ್ ಎಂಬುವರ ಮಗ ಯಶವಂತ್ (11) ಮೃತ ಬಾಲಕ. ಬೇಸಿಗೆ ರಜೆ ಹಿನ್ನೆಲೆ ಅಣಗಳ್ಳಿ ಗ್ರಾಮದ ಶಿವಲಿಂಗಯ್ಯ ಎಂಬುವರ ಮನೆಗೆ ಬಂದಿದ್ದ. ಸೈಕಲೊಂದನ್ನು ಕೂಡ ಕುಟುಂಬಸ್ಥರು ಯಶವಂತ್‌ಗೆ ಕೊಡಿಸಿದ್ದರು.
ಮಂಗಳವಾರ ಬೆಳಗ್ಗೆ ಈತ ಸೈಕಲ್ ಸವಾರಿ ಮಾಡುವಾಗ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ಕೊಟ್ಟು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಪ ವಿಭಾಗ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.ಸೈಕಲ್ ಮತ್ತು ಗೂಡ್ಸ್ ವಾಹನ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.