ಸಿಜೆಐ ಮೇಲೆ ಶೂ ಎಸೆತ ಯತ್ನ ಖಂಡಿಸಿ ಕಲಾಪ ಬಹಿಷ್ಕಾರ

KannadaprabhaNewsNetwork |  
Published : Oct 09, 2025, 02:00 AM IST
08 | Kannada Prabha

ಸಾರಾಂಶ

ದೇವನಹಳ್ಳಿಯ ನ್ಯಾಯಾಲಯದ ಮುಂದೆ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ಒಂದು ದಿನದ ಮಟ್ಟಿಗೆ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಭಾರತದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಬಿ.ಆರ್. ಗವಾಯಿ ಅವರ ನ್ಯಾಯಾಲಯದಲ್ಲಿಯೇ ಅವರನ್ನು ಗುರಿಯಾಗಿಸಿಕೊಂಡು ಪಾದರಕ್ಷೆ ಕಳಚಿ ಅವರತ್ತ ಎಸೆದ ಕೃತ್ಯ ಅತ್ಯಂತ ದುರಾದೃಷ್ಠಕರ ಹಾಗೂ ಖಂಡನೀಯ. ಅವರಿಗೆ ತೋರಿಸಿರುವ ಅಗೌರವ ಇಡೀ ನ್ಯಾಯಾಂಗ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು ಹೇಳಿದರು.ದೇವನಹಳ್ಳಿಯ ನ್ಯಾಯಾಲಯದ ಮುಂದೆ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ಒಂದು ದಿನದ ಮಟ್ಟಿಗೆ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿ ಅವರು ಮಾತನಾಡಿದರು. ವಕೀಲರ ಮೇಲೆ ಆಗಿಂದ್ದಾಗ್ಗೆ ಹಲ್ಲೆ ದೌರ್ಜನ್ಯ ನಡೆಯುತ್ತಲೇ ಇರುತ್ತವೆ. ಆದರೆ ಅ. 6ರಂದು ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ ವಕೀಲರೇ ನ್ಯಾಯಾಧೀಶರ ಮೇಲೆ ದೌರ್ಜನ್ಯವೆಸಗಿರುವುದು ಖಂಡನೀಯ. ನ್ಯಾಯಾಧೀಶರ ಮೇಲೆ ಶೂ ಎಸೆಯುವ ಅಥವಾ ಇನ್ಯಾವುದೇ ರೀತಿಯ ಅಹಿತಕರ ಕೃತ್ಯಗಳನ್ನು ನಡೆಸಿ ನ್ಯಾಯದಾನ ಪ್ರಕ್ರಿಯೆ ಹತ್ತಿಕ್ಕಲು ಯಾರೂ ಪ್ರಯತ್ನಿಸಬಾರದು ಎಂದರು.ಮಾಜಿ ಅಧ್ಯಕ್ಷ ಹಿರಿಯ ವಕೀಲ ಬಿ.ಎಂ. ಬೈರೇಗೌಡ ಮಾತನಾಡಿ, ನಾಯಾಧೀಶರ ಪೀಠ ನ್ಯಾಯಾಧೀಶರು ಎಂಬುಬು ಬಹುಗೌರವಾನ್ವಿತ ಸಾಂವಿಧಾನ ಪೀಠ ಸಾಂವಿಧಾನಕ ಹುದ್ದೆ ಆಗಿರುತ್ತದೆ. ನಮ್ಮ ನ್ಯಾಯವಾದಿಗಳೇ ಇಂತಹ ಕೃತ್ಯಕ್ಕೆ ಮುಂದಾದರೆ ಅದು ಸಂವಿಧಾನಕ್ಕೆ ಭಾರತದ ನ್ಯಾಯಾಂಗ ವ್ಯವಸ್ಥೆಗೆ ತೋರುವ ಅಗೌರವವಾಗಿದೆ. ಏನೇ ಭಿನ್ನಾಭಿಪ್ರಾಯ ಅಸಮಾಧಾನವಿದ್ದರೂ ಅದನ್ನೂ ಕಾನೂನು ಮೂಲಕವೇ ಪ್ರಶ್ನಿಸಬೇಕು. ಸಂವಿಧಾನದ ಚೌಕಟ್ಟು ಮೀರಬಾರದು. ಮುಖ್ಯವಾಗಿ ನ್ಯಾಯದೇಗುಲದಲ್ಲಿ ಯಾರೂ ಅನುಚಿತವಾಗಿ ಇನ್ನೂ ಮುಂದೆಯೂ ವರ್ತಿಸಬಾರದು.

ನ್ಯಾಯಾಧೀಶರೂ ನ್ಯಾಯವಾದಿಗಳು ಒಂದು ಬಂಡಿಯ ಎರಡು ಚಕ್ರಗಳಿದ್ದಂತೆ. ಈ ಘಟನೆಯನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ. ಹಾಗಾಗಿ ನಮ್ಮ ಅಧ್ಯಕ್ಷರೂ ಮತ್ತು ಪದಾಧಿಕಾರಿಗಳ ಒಮ್ಮತದ ತೀರ್ಮಾನದಂತೆ ಒಂದು ದಿನದ ಮಟ್ಟಿಗೆ ಕಲಾಪದಿಂದ ಹೊರಗುಳಿದು ಘಟನೆಯ ವಿರುದ್ಧ ಪ್ರತಿಭಟಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಎಲ್. ಕೃಷ್ಣೋಜಿರಾವ್, ಜಂಟಿ ಕಾರ್ಯದರ್ಶಿ ವಿ.ಮುನೇಗೌಡ, ಖಜಾಂಚಿ ಕೆ.ಮಾರೇಗೌಡ, ಪದಾದಿಕಾರಿಗಳಾದ ಡಿ.ಎಂ.ರಾಜಣ್ಣ, ಮುನಿಯಪ್ಪ, ಶಿವರಾಜ ಕುಮಾರ್, ಕೆ.ಲೋಕೇಶ್, ಎ.ನಂದೀಶ್, ಕೆ.ಸುನಿಲ್, ಜಿ.ಎಂ.ಮಂಜುನಾಥ, ಎಂ.ನಾಗರಾಜ, ಕೆ.ರಾಜಣ್ಣ, ದಿನೇಶಕುಮಾರ್ ಆರ್., ನಾಗೇಶ ಎಚ್.ಡಿ., ಎಸ್. ಭಾಗ್ಯಮ್ಮ, ಮಾಜಿ ಅಧ್ಯಕ್ಷ ಬಿ.ಎಂ ಬೈರೇಗೌಡ, ಶ್ರೀನಿವಾಸಮೂರ್ತಿ ಮುಂತಾದವರು ಭಾಗವಹಿಸಿದ್ದರು.

೦೮ ದೇವನಹಳ್ಳಿ ಚಿತ್ರಸುದ್ದಿ ೦೩ ಸುಪ್ರೀಂ ಕೋರ್ಟ ಮುಖ್ಯನ್ಯಾಯಾಧೀಶರ ಮೇಲೆ ಪಾದರಕ್ಷೆ ಎಸೆತ ಖಂಡಿಸಿ ದೇವನಹಳ್ಳಿ ವಕೀಲರು ಕಲಾಪದಿಂದ ಹೊರಗುಳಿದು ನ್ಯಾಯಾಲಯದ ಮುಂದೆ ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ