ದಲಿತ ಸಮುದಾಯದ ಸೂರ್ಯ ಬಿ.ಆರ್.ಅಂಬೇಡ್ಕರ್ : ಕೆ.ಗಂಗಮ್ಮ

KannadaprabhaNewsNetwork |  
Published : Apr 27, 2026, 01:30 AM IST
26 ಬೀರೂರು 2ಬೀರೂರಿನ ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಜಗಜೀವನರಾಂ ಜಯಂತಿಯ ಅಂಗವಾಗಿ ಬೋಧಿವರ್ಧಕ ಪ್ರಶಸ್ತಿ ಪುರಸ್ಕೃತೆ ಕೆ.ಗಂಗಮ್ಮ ಮತ್ತು ಪಿಎಸೈ ನಯನರನ್ನು ದೇಗುಲ ಸಮಿತಿ ಗೌರವಿಸಲಾಯಿತು. | Kannada Prabha

ಸಾರಾಂಶ

ಬೀರೂರುಬದುಕಿನಲ್ಲಿ ಅಪಮಾನ , ನೋವುಗಳನ್ನು ಅನುಭವಿಸಿದರೂ ಸಮಾಜಕ್ಕೆ ನೈತಿಕತೆ ಶಿಕ್ಷಣಕೊಟ್ಟು ಅಜರಾಮರೆನಿಸಿದವರು ಬಿ.ಆರ್.ಅಂಬೇಡ್ಕರ್ ಎಂದು ತುಮಕೂರಿನ ಬೋಧಿ ವರ್ಧಕ ಪ್ರಶಸ್ತಿ ಪುರಸ್ಕೃತೆ ಕೆ.ಗಂಗಮ್ಮ ಹೇಳಿದರು.

- ಮೈಲಾರಲಿಂಗಸ್ವಾಮಿ ಯುವಕ ಸಂಘ, ಅಂಬೇಡ್ಕರ್ ಯುವಕ ಸಂಘದದಿಂದ ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ, ಬೀರೂರು

ಬದುಕಿನಲ್ಲಿ ಅಪಮಾನ , ನೋವುಗಳನ್ನು ಅನುಭವಿಸಿದರೂ ಸಮಾಜಕ್ಕೆ ನೈತಿಕತೆ ಶಿಕ್ಷಣಕೊಟ್ಟು ಅಜರಾಮರೆನಿಸಿದವರು ಬಿ.ಆರ್.ಅಂಬೇಡ್ಕರ್ ಎಂದು ತುಮಕೂರಿನ ಬೋಧಿ ವರ್ಧಕ ಪ್ರಶಸ್ತಿ ಪುರಸ್ಕೃತೆ ಕೆ.ಗಂಗಮ್ಮ ಹೇಳಿದರು.ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ಯುವಕ ಸಂಘ ಮತ್ತು ಅಂಬೇಡ್ಕರ್ ಯುವಕ ಸಂಘದ ದಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿ ಉದ್ದೇಶಿಸಿ ಮಾತನಾಡಿದರು.ಅಸ್ಪೃಶ್ಯತೆಯ ಕರಾಳ ಮುಖಗಳಿಗೆ ನಲುಗಿದರೂ ತನ್ನ ವಿದ್ಯಾರ್ಜನೆ ಮೂಲಕ ಉನ್ನತ ಮಟ್ಟಕೇರಿ ದಲಿತ ಸಮುದಾಯದ ಸೂರ್ಯನಾಗಿ ಕಂಗೊಳಿಸಿದವರು ಅಂಬೇಡ್ಕರ್ , ದಿನದಲಿತರ ದನಿಯಾಗಿ, ದಲಿತರ ಬಾಳಿನ ಬೆಳಕಾಗಿ ಅವತರಿಸಿದ್ದರೂ ಎಂದರೆ ತಪ್ಪಲ್ಲ. ಆದರೂ ಅವರ ಆಶಯಗಳಿಗೆ ವಿರುದ್ಧವಾಗಿ ದಲಿತರ ಶೋಷಣೆ ಇನ್ನೂ ತಪ್ಪಿಲ್ಲಾ ಎಂದು ವಿಷಾದಿಸಿದರು. ದಲಿತ ಸಮುದಾಯಗಳು ಕೂಡ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ತಮ್ಮ ಬದುಕನ್ನು ಗಟ್ಟಿಗೊಳಿಸಿಕೊಳ್ಳುವಂತೆ ಕರೇ ನೀಡಿದರು.ಕೆ.ಆರ್ .ಪೇಟೆ ಪಿಎಸೈ ನಯನಾ ಮಾತನಾಡಿ, ದೇಶದ ಮಹಾನ್ ಚೇತನ ಮತ್ತು ಚಿಂತನಾ ಶೀಲ ವ್ಯಕ್ತಿಯಾಗಿದ್ದ ಅಂಬೇಡ್ಕರ್ ಅವರಿಂದಾಗಿಯೇ ಭಾರತದಲ್ಲಿ ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು. ಭಾರತದಲ್ಲಿ ಶೋಷಿತ ಸಮುದಾಯಗಳು ಮೇಲೆದ್ದು ಬರಲು ಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಸಮಾನತೆ ಯಿಂದಲೇ ಪ್ರಸಕ್ತ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಕನಸು ಕಂಡಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಜಗಜೀವನರಾಂ ಅವರು ಸಾಮಾನ್ಯ ಜನರಲ್ಲಿ ಸಮಾನತೆ, ಸೋದರತೆ, ಭ್ರಾತೃತ್ವ ಮೂಡಿಸುವ ಜತೆಗೆ ಮೌಡ್ಯ ತೊಡಗಿಸಲು ಪ್ರಯತ್ನಿಸಿದ್ದರು ಎಂದರು.ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್ ಮಾತನಾಡಿ, ಭಾರತ ದೇಶಕ್ಕೆ ಬಲಿಷ್ಠ ಲಿಖಿತ ಸಂವಿಧಾನ ರೂಪಿಸಿದ ಡಾ.ಅಂಬೇಡ್ಕರ್ ಒಂದು ಧೀಮಂತ ಚೇತನವಾಗಿದ್ದು ಅವರ ಕನಸುಗಳನ್ನು ನನಸಾಗಿಸಲು ಸಮಾಜ ಇನ್ನು ಶ್ರಮಿಸಬೇಕಿದೆ. ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವ ರಾಂ ಸಮಾಜದಲ್ಲಿ ಎದುರಾದ ಸವಾಲು ಅಡೆತಡೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಎತ್ತರಕ್ಕೇರಿದ ಮಹಾನ್ ನಾಯಕ. ಇತಿಹಾಸದಲ್ಲಿ ಬರುವ ಅನೇಕ ವ್ಯಕ್ತಿಗಳು ಮತ್ತು ನಾಯಕರು ಬರೀ ಕೆಲವು ದೃಷ್ಠಿಯಿಂದ ನೆನಪಾದರೆ ಕೆಲವರು ತಮ್ಮ ಬದುಕು ಮತ್ತು ನಡತೆಯಿಂದ ನಮ್ಮ ಆಲೋಚನಾ ಕ್ರಮವನ್ನೇ ಬದಲಿಸಿ ಅದರಾಚೆಗೂ ಕಾಡುತ್ತಾರೆ. ಅಂಥವರಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಅವರು ಅಸ್ಪೃಷ್ಯತೆ ಮತ್ತು ಅಸಮಾನತೆ ತೊಡೆದು ಹಾಕಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.ನಂತರ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ ಭಾವ ಚಿತ್ರಗಳೊಂದಿಗೆ ಊರಿನ ರಾಜ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಗೌಡರಾದ ಸೋಮಣ್ಣ, ಧಕ್ಷಿಣಮೂರ್ತಿ, ಹಾಲಪ್ಪ, ಸಿದ್ದಪ್ಪ, ಅಶ್ರಯ ಕಮಿಟಿ ಸದಸ್ಯ ಬಿ.ಜಿ.ಮೈಲಾರಪ್ಪ, ನಾಗರಾಜ್, ಮೈಲಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಶಂಕರ್, ಸುನಿಲ್, ಧನಂಜಯ, ವರುಣ್, ಬಳ್ಳಾರಿ ನಾಗರಾಜ್, ದರ್ಶನ್, ಮೈಲಾರಿ, ಭರತ್, ಚೇತನ್, ಪವನ್ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.26 ಬೀರೂರು 2ಬೀರೂರಿನ ಸರಸ್ವತಿಪುರಂ ಬಡಾವಣೆ ಶ್ರೀ ಮೈಲಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ ಅಂಬೇಡ್ಕರ್ ಮತ್ತು ಜಗಜೀವನರಾಂ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೋಧಿವರ್ಧಕ ಪ್ರಶಸ್ತಿ ಪುರಸ್ಕೃತೆ ಕೆ.ಗಂಗಮ್ಮ ಮತ್ತು ಪಿಎಸೈ ನಯನಾರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಮನೆಗಳಲ್ಲಿ ಶ್ರೀ ಶಂಕರ ಜಯಂತಿ ಆಚರಣೆ
ಹಣಕ್ಕಿಂತ ಆರೋಗ್ಯವೇ ಅಮೂಲ್ಯ ಎಂದ ಶಾಸಕ ಸ್ವರೂಪ್‌