ಕನ್ನಡಪ್ರಭವಾರ್ತೆ ಪುತ್ತೂರುಶ್ರೀಮದ್ ಜಗದ್ಗುರು ಶ್ರೀ ಮಧ್ವಾಚಾರ್ಯರು ಚಾತುರ್ಮಾಸ ಆಚರಿಸಿದ ಪುಣ್ಯ ಕ್ಷೇತ್ರವಾಗಿರುವ ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೂತನ ಧ್ವಜಸ್ತಂಭ, ಬ್ರಹ್ಮರಥ ಸಮರ್ಪಣೆ ಮತ್ತು ಬ್ರಹ್ಮರಥೋತ್ಸವವು ಮಾ. 20 ರಿಂದ ಏ. 2ರ ತನಕ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಮತ್ತು ಮಾರ್ಗದರ್ಶಕ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, 8 ದಿನಗಳ ಬ್ರಹ್ಮಕಲಶೋತ್ಸವ ಮತ್ತು 5 ದಿನ ಜಾತ್ರೆ ನಡೆಯಲಿದೆ.20ಕ್ಕೆ ಕ್ಷೇತ್ರ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಬಳಿಕ ವಾಸ್ತು ಪೂಜಾ ಬಲಿ ಸಹಿತ ವಿವಿಧ ಹೋಮಾದಿಗಳು ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಮಹಾಗಣಪತಿ ಹೋಮ ನಡೆಯಲಿದೆ. 21ಕ್ಕೆ ಹೋಮ ಕಲಶಾಭಿಷೇಕ, ಸಂಜೆ ದುರ್ಗಾಪೂಜೆ ಸುದರ್ಶನ ಹೋಮ ನಡೆಯಲಿದೆ. 22ಕ್ಕೆ ಸಂಜೆ ಶ್ರೀಚಕ್ರಪೂಜೆ ಸಹಿತ ವಿವಿಧ ಹೋಮಾದಿಗಳು ನಡೆಯಲಿದೆ. 23 ಮತ್ತು 24ರಂದು ವಿವಿಧ ಹೋಮಾದಿಗಳು ನಡೆಯಲಿದೆ. 25ಕ್ಕೆ ಶ್ರೀ ಜನಾರ್ದನ ದೇವರ ಪುನಃಪ್ರತಿಷ್ಠೆ, ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ ಅಷ್ಟಬಂಧಕ್ರಿಯೆ ಕಲಶಾಭಿಷೇಕ, ಶಿಖರ ಪ್ರತಿಷ್ಠೆ ನಡೆಯಲಿದೆ. 26ಕ್ಕೆ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ ಸಂಜೆ ಸೋಮಾನಪೂಜೆ ನಡೆಯಲಿದೆ. 27ಕ್ಕೆ ವಿವಿಧ ಹೋಮಾದಿಗಳು ನಡೆಯಲಿದೆ. 28ಕ್ಕೆ ಧ್ವಜ ಸ್ಥಂಭ ಮತ್ತು ವಾಹನ ಪ್ರತಿಷ್ಠೆ, ಶ್ರೀ ಜನಾರ್ದನ ದೇವರಿಗೆ ಬ್ರಹ್ಮಕಲಶಾಭಿಷೇಕ, ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. 29 ರಿಂದ ಜಾತ್ರೋತ್ಸವ ಆರಂಭಗೊಂಡು ಶ್ರೀ ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ನೃತ್ಯ ಬಲಿ ನಡೆಯಲಿದೆ. 30ಕ್ಕೆ ಬೆಳಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಶ್ರೀ ದೆವರ ಬಲಿ ಉತ್ಸವ ಬ್ರಹ್ಮರಥೋತ್ಸವ ನಡೆಯಲಿದೆ.
ಏ. 1ಕ್ಕೆ ಸಂಜೆ ಶ್ರೀ ದೇವರ ಬಲಿ ಹೊರಟು ಆರಾಟ ಮಹೋತ್ಸವ, ಬಟ್ರುಪ್ಪಾಡಿ ಕೆರೆಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದು 2ರಂದು ಪಿಲಿಚಾಮುಂಡಿ ದೆ ನೇಮ ನಡೆಯಲಿದೆ. ಸಂಜೆ ಶ್ರೀ ರಕೇಶ್ವರಿ ದೈವಕ್ಕೆ ತಂಬಿಲ, ಕೆರೆಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದು 2ರಂದು ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ. ಸಂಜೆ ಶ್ರೀ ರಕೇಶ್ವರಿ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಮನೋಹರ ನಾಯಕ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಗೌಡ ಹಿರ್ಕುಡೇಲು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣರಾಜ ಎರ್ಕಾಡಿತ್ತಾಯ, ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಆನಾಜೆ, ಪ್ರಚಾರ ಸಮಿತಿ ಸಹಸಂಚಾಲಕ ಮನ್ಮಥ ಶೆಟ್ಟಿ ಶ್ಯಾನ ಉಪಸ್ಥಿತರಿದ್ದರು.