ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಧರ್ಮ, ಒಂದು ಜಾತಿಯ ಗುರುವಲ್ಲ

KannadaprabhaNewsNetwork | Published : Aug 21, 2024 12:34 AM

ಸಾರಾಂಶ

ನಾರಾಯಣ ಗುರುಗಳು ಒಂದು ಧರ್ಮದ, ಒಂದು ಜಾತಿಯ ಗುರುವಲ್ಲ. ಅವರು ಬಡತನದ ಒಳಗಿರುವ ಗುರುವಾಗಿ ಗುರುತಿಸಿಕೊಂಡು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಯುವ ಮೂಲಕ ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಾರಾಯಣ ಗುರುಗಳು ಜಾತಿ ನಿರ್ಮೂಲನೆಗೆ ಸಾಕಷ್ಟು ಹೋರಾಟ ಮಾಡಿದರು. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ತಹಸೀಲ್ದಾರ್ ಕೆ.ಎನ್.ಲೋಕೇಶ್ ಕರೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಾರಾಯಣ ಗುರುಗಳ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾರಾಯಣ ಗುರುಗಳು ಒಂದು ಧರ್ಮದ, ಒಂದು ಜಾತಿಯ ಗುರುವಲ್ಲ. ಅವರು ಬಡತನದ ಒಳಗಿರುವ ಗುರುವಾಗಿ ಗುರುತಿಸಿಕೊಂಡು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎ.ಸಂಜಯ್ ಮಾತನಾಡಿ, ಮಹಾನೀರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತ ಕೊಳ್ಳಬಾರದು. ಅವರ ಆದರ್ಶ ಜೀವನ ಇಂದಿನ ಯೋಜನೆಗೆ ದಾರಿದೀಪವಾಗಬೇಕೆಂದು ಸಲಹೆ ನೀಡಿದರು.

ಸಮಾಜ ಸುಧಾರಣೆಗಾಗಿ ಹಲವು ಮಹಾ ನಾಯಕರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮುಂದುವರಿದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಹೇಳಿದರು.

ಈ ವೇಳೆ ಮಹನೀಯರ ಜಯಂತಿಗಳ ಆಚರಣೆಯಂತೆ ನಾರಾಯಣ ಗುರುಗಳು ಜಯಂತಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್ ಇತರರು ಇದ್ದರು.ನಾಳೆ ವಿದ್ಯುತ್ ವ್ಯತ್ಯಯಮಳವಳ್ಳಿ: ತಾಲೂಕಿನ ವಡಕೆಪುರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವಿರುವುದರಿಂದ ಆ.22ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಗುರುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕೇಂದ್ರ ವ್ಯಾಪ್ತಿಯ ಅವ್ವೇರಹಳ್ಳಿ, ಸುಜ್ಜಲೂರು, ಎನ್.ಜಿ.ದೊಡ್ಡಿ, ವಡಕೆಪುರ, ಚನ್ನಪಿಳ್ಳೆಕೊಪ್ಪಲು, ಹಣಕೊಳ, ಉಪ್ಪಲಗೇರಿ ಕೊಪ್ಪಲು, ಗಣಗನೂರು, ರಾವಣಿ, ರಾಗಿಬೊಮ್ಮನಹಳ್ಳಿ, ಹಂಗ್ರಾಪುರ, ಕ್ಯಾತನಹಳ್ಳಿ, ಕುಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.

Share this article