ಬ್ರಹ್ಮಾವರ: ಜಯಂಟ್ಸ್ ಬಹು ಘಟಕಗಳ ಸಮ್ಮೇಳನ

KannadaprabhaNewsNetwork |  
Published : Sep 20, 2024, 01:41 AM IST
ಸಮ್ಮೇಳನ18 | Kannada Prabha

ಸಾರಾಂಶ

ಬ್ರಹ್ಮಾವರದ ಜಯಂಟ್ಸ್ ಗ್ರೂಪ್ ಆತಿಥ್ಯದಲ್ಲಿ ಸಿಟಿ ಸೆಂಟರ್‌ನಲ್ಲಿ ಬಹು ಘಟಕಗಳ ಸಮ್ಮೇಳನ ನಡೆಯಿತು. ಜಯoಟ್ಸ್ ವೆಲ್ಫೇರ್ ಫೌಂಡೇಶನ್ ಸಂಸ್ಥೆಯ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಎಂ.ಲಕ್ಷ್ಮಣನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಜಯಂಟ್ಸ್ ಸಂಸ್ಥೆ, ಭಾರತೀಯ ಮೂಲದ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಭಾರತೀಯ ಸಂಸ್ಕೃತಿಯ ಮತ್ತು ನೈತಿಕ ಮೌಲ್ಯಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಯoಟ್ಸ್ ವೆಲ್ಫೇರ್ ಫೌಂಡೇಶನ್ ಸಂಸ್ಥೆಯ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಎಂ.ಲಕ್ಷ್ಮಣನ್ ತಿಳಿಸಿದರು.ಅವರು ಇತ್ತೀಚೆಗೆ ಬ್ರಹ್ಮಾವರದ ಜಯಂಟ್ಸ್ ಗ್ರೂಪ್ ಆತಿಥ್ಯದಲ್ಲಿ ಸಿಟಿ ಸೆಂಟರ್‌ನಲ್ಲಿ ನಡೆದ ಬಹು ಘಟಕಗಳ ಸಮ್ಮೇಳನದಲ್ಲಿ ಮಾತನಾಡಿದರು.ಕಾರ್ಯಕ್ರಮವನ್ನು ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಮಂದಿರದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿ ಉದ್ಘಾಟಿಸಿ, ಸಂಘ ಸಂಸ್ಥೆಗಳಲ್ಲಿ ಮಾನವೀಯತೆ ಮತ್ತು ಸೇವೆ ಪ್ರಮುಖವಾದದ್ದು. ಸಮಾಜದ ಸೇವೆಯಲ್ಲಿ ಸಿಗುವ ಸಂತೋಷ ಅನನ್ಯವಾಗಿರುತ್ತದೆ ಎಂದು ತಿಳಿಸಿದರು.ಮುಖ್ಯ ಭಾಷಣ ಮಾಡಿದ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ರಾಜೇಂದ್ರ ಭಟ್, ಯಾವುದು ಕೂಡ ಅಸಾಧ್ಯವಾದುದಿಲ್ಲ ಎಂದು ಅನೇಕ ಉದಾಹರಣೆಗಳು ನಮ್ಮ ಸಮಾಜದ ಮುಂದೆ ಇವೆ. ದೃಢ ಸಂಕಲ್ಪ ಮತ್ತು ಕಠಿಣ ದುಡಿಮೆ ನಮ್ಮ ಜೀವನದ ಯಶಸ್ಸಿಗೆ ಮೆಟ್ಟಿಲಾಗುತ್ತದೆ ಹಾಗೂ ಮಾದರಿ ವ್ಯಕ್ತಿತ್ವ ಬೆಳೆಸುವಲ್ಲಿ ಸಹಾಯಕವಾಗುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಅಧ್ಯಕ್ಷ ಸುಂದರ್ ಪೂಜಾರಿ ಮುಡು ಕುಕ್ಕುಡೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯ ದಿನಕರ್ ಕೆ. ಅಮೀನ್, ವಿಶೇಷ ಸಮಿತಿ ಸದಸ್ಯರಾದ ಮೋಹನ್ ಕಾರೆಕರ್ ಗಜಾನನ ನೀಲಕೇರಿ, ಫೆಡರೇಶನ್ ಅಧ್ಯಕ್ಷ ಲಗಾಮಣ್ಣ ದೊಡ್ಡಮನಿ, ಪೂರ್ವ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಘಟನ ನಿರ್ದೇಶಕ ಮಧುಸೂದನ ಹೇರೂರು, ಯುನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮಿಲ್ಟನ್ ಒಲಿವೇರಾ ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಅನೇಕ ಅಧಿವೇಶನಗಳು ಜರುಗಿದವು. ಪೂರ್ವ ಫೆಡರೇಶನ್ ಅಧ್ಯಕ್ಷರಗಳನ್ನು ಮತ್ತು ಸಾಧಕರನ್ನು ಗೌರವಿಸಲಾಯಿತು. ಲಗಾಮಣ್ಣ ದೊಡ್ಡಮನೆ ಸ್ವಾಗತಿಸಿದರು. ರಾಘವೇಂದ್ರ ಕಾರ್ವಾಲು ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಹಿಂಪಡೆವ ಅವಧಿ ವಿಸ್ತರಣೆ
ಒಡೆದ ಮನಸ್ಸುಗಳ ಒಗ್ಗೂಡಿಸುವ ಶಕ್ತಿ ಆಧ್ಯಾತ್ಮದಲ್ಲಿದೆ: ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ