ಕಲಬುರಗಿ: ಬ್ರಾಹ್ಮಣರು ಸಂಘಟಿತರಾಗಿ: ಪಂ.ವಿದ್ಯಾಧೀಶಾಚಾರ್ಯ

KannadaprabhaNewsNetwork |  
Published : Jan 14, 2024, 01:30 AM IST
ಬ್ರಾಹ್ಮಣರು ಸಂಘಟಿತರಾಗಬೇಕು ಪಂ.ವಿದ್ಯಾಧೀಶಾಚಾರ್ಯ ಗುತ್ತಲ ಅಭಿಮತ | Kannada Prabha

ಸಾರಾಂಶ

''ವ್ಯಾಸ ಸಾಹಿತ್ಯ ವಿಚಾರ ವಾಹಿನಿ'' ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಲ್ಲಿ ಶಕ್ತಿ ಇದೆ. ಹೀಗಾಗಿ ವಿಪ್ರರು ಸಂಘಟಿತರಾಗಿ ಧರ್ಮರಕ್ಷಣೆ ಕಾರ್ಯ ಮಾಡಬೇಕು. ಧರ್ಮ ಉಳಿಸಿದಾಗ ಮಾತ್ರ ಸನಾತನ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅವರು ಪ್ರತಿಪಾದನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಮ್ಮನ್ನು ವಿರೋಧಿಸುವ ಶಕ್ತಿಗಳು ಬಲಿಷ್ಠವಾಗುತ್ತಿವೇ ಆ ಶಕ್ತಿ ಎದುರಿಸಲು ವಿಪ್ರರರು ಸಂಘಟಿತರಾಗುವುದು ಅಗತ್ಯ ಮತ್ತು ಅನಿವಾರ್ಯ ಎಂದು ವಿಶ್ವ ಮಧ್ವ ಮಹಾ ಪರಿಷತ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಂ.ವಿದ್ಯಾಧೀಶಾಚಾರ್ಯ ಗುತ್ತಲ ಅಭಿಮತ ವ್ಯಕ್ತಪಡಿಸಿದರು.

ಬ್ರಹ್ಮಪುರ ಉತ್ತರಾದಿಮಠ ರುಕ್ಮೀಣಿ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ''''ವ್ಯಾಸ ಸಾಹಿತ್ಯ ವಿಚಾರ ವಾಹಿನಿ'''' ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಲ್ಲಿ ಶಕ್ತಿ ಇದೆ. ಹೀಗಾಗಿ ವಿಪ್ರರು ಸಂಘಟಿತರಾಗಿ ಧರ್ಮರಕ್ಷಣೆ ಕಾರ್ಯ ಮಾಡಬೇಕು. ಧರ್ಮ ಉಳಿಸಿದಾಗ ಮಾತ್ರ ಸನಾತನ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಕಲಬುರಗಿಯಲ್ಲಿ ದಾಸ ಸಾಹಿತ್ಯ ಪ್ರಚಾರ ವಾಹಿನಿ ಮೂಲಕ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಮನೆ ಮನಗಳಿಗೆ ದಾಸರ ಚಿಂತನೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ. ಅದೇ ಮಾದರಿಯಲ್ಲಿ ಪಾರಾಯಣ ಸಂಘಗಳ ಸದಸ್ಯರಿಗಾಗಿ ವ್ಯಾಸ ಸಾಹಿತ್ಯ ವಿಚಾರ ವಾಹಿನಿ ಸ್ಥಾಪನೆಯಾಗಿದ್ದು ಶ್ಲಾಘನೀಯ. ಒಂದು ಕಡೆ ದಾಸಸಾಹಿತ್ಯ ಪ್ರಚಾರ ಕಾರ್ಯ ನಡೆಯುತ್ತಿದ್ದರೆ ಇನ್ನೊಂದು ಕಡೆ ವ್ಯಾಸ ಸಾಹಿತ್ಯ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಧಾರ್ಮಿಕ ವಾತವರಣ ಸೃಷ್ಠಿಗೆ ಮೈಲುಗಲ್ಲು ಎಂದು ಪ್ರಶಂಶಿಸಿದರು.

ಶಾಸ್ತ್ರ ವಿಜ್ಞಾನಗಳ ಸಮನ್ವಯವಾಗಬೇಕು. ಅಂದಾಗ ಮಾತ್ರ ಹೊಸ ವಿಚಾರ ತಿಳಿದುಕೊಳ್ಳು ಸಾಧ್ಯ. ವ್ಯಾಸ ಸಾಹಿತ್ಯ ಪ್ರಚಾರ ವಾಹಿನಿ ಆ ಕಾರ್ಯ ಮಾಡಲಿ ಎಂದ ಶುಭ ಕೋರಿದರು.

ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ವ್ಯಾಸ ಸಾಹಿತ್ಯ ವಿಚಾರ ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ, ಪಂ. ವಿಷ್ಣುದಾಸಾಚಾರ್ಯ ಖಜೂರಿ, ಪಂ.ಡಾ.ಗುರುಮಧ್ವಾಚಾರ್ಯ ನವಲಿ,ಪಂ ಹಣಮಂತಾಚಾರ್ಯ ಸರಡಗಿ, ಪಂ.ಭೀಮಸೇನಾಚಾರ್ಯ ಜೋಶಿ, ಪಂ.ಶ್ರೀನಿವಾಚಾರ್ಯ ಪದಕಿ, ಪಂ.ಅಭಯಾಚಾರ್ಯ, ವಿಶ್ವ ಮಧ್ವ ಮಹಾ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಕೆ. ಕುಲಕರ್ಣಿ, ಮಾಜಿ ಅಧ್ಯಕ್ಷ ರಾಮಾಚಾರ್ಯ ಮೋಗರೆ,ಬಾಲಕೃಷ್ಣ ಲಾತೂರಕರ,ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ಡಾ.ಭುರ್ಲಿ ಪ್ರಹ್ಲಾದ, ರಾಘವೇಂದ್ರರಾವ ದೇಶಮುಖ, ವಿ.ಎಂ ಜೋಶಿ,ಗುಂಡಾಚಾರ್ಯ ನರಬೋಳ,ವಿನೂತ ಜೋಶಿ, ಸುರೇಶ್ ಕುಲಕರ್ಣಿ ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ