ದರ್ಶನ್‌ ತಮ್ಮ ಜೀವನವನ್ನೇ ಜನಸೇವೆಗೆ ಮುಡಿಪಾಗಿಟ್ಟಿದ್ದಾರೆ: ಕಾಂಗ್ರೆಸ್ ಯುವ ಮುಖಂಡ ರಾಜೇಶ್

KannadaprabhaNewsNetwork |  
Published : Mar 30, 2024, 12:48 AM IST
55 | Kannada Prabha

ಸಾರಾಂಶ

ತಮ್ಮನ್ನು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ರಾಜಕಾರಣಕ್ಕೆ ಬರಬೇಕೆಂದು ನಿಶ್ಚಯಿಸಿಕೊಂಡಿರಲಿಲ್ಲ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಮ್ಮ ನೆಚ್ಚಿನ ನಾಯಕರಾಗಿದ್ದ ದಿ.ಆರ್. ಧ್ರುವನಾರಾಯಣ್ ಅವರ ಅಕಾಲಿಕ ಮರಣದಿಂದಾಗಿ ಮತ್ತು ಕ್ಷೇತ್ರದ ಮತದಾರರ ಒತ್ತಾಯದ ಮೇರೆಗೆ ರಾಜಕಾರಣಕ್ಕೆ ಬಂದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ತಂದೆಯಂತೆಯೇ ಬಡವರ ಸೇವೆಯಲ್ಲಿ ದಿನದ 24 ಗಂಟೆಗಳಲ್ಲಿಯೂ ತೊಡಗಿಸಿಕೊಂಡು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಸರಳ ಸಜ್ಜನಿಕೆಗೆ ಹೆಸರಾದ ಶಾಸಕ ದರ್ಶನ್‌ ಧ್ರುವನಾರಾಯಣ್ ಅವರು ತಮ್ಮ ತಂದೆಯ ಮಾರ್ಗದಲ್ಲೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಾ ಜನಸೇವೆಯಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನೇ ಜನಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರಾಜೇಶ್ ಹೇಳಿದರು.

ಶಾಸಕ ದರ್ಶನ್‌ ಧ್ರುವನಾರಾಯಣ್ ಅವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ ಸಿಂಧುವಳ್ಳಿ ಬಳಿಯಿರುವ ಕರುಣಾಲಯ ಮಾನಸಿಕ ಆಸ್ಪತ್ರೆಯ ರೋಗಿಗಳಿಗೆ ಉಪಹಾರವನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ನಡೆಸಿದ ವೇಳೆ ಮಾತನಾಡಿದರು.

ಶಾಸಕ ದರ್ಶನ್‌ ಧ್ರವನಾರಾಯಣ್ ರವರು ತಮ್ಮನ್ನು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ರಾಜಕಾರಣಕ್ಕೆ ಬರಬೇಕೆಂದು ನಿಶ್ಚಯಿಸಿಕೊಂಡಿರಲಿಲ್ಲ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಮ್ಮ ನೆಚ್ಚಿನ ನಾಯಕರಾಗಿದ್ದ ದಿ.ಆರ್. ಧ್ರುವನಾರಾಯಣ್ ಅವರ ಅಕಾಲಿಕ ಮರಣದಿಂದಾಗಿ ಮತ್ತು ಕ್ಷೇತ್ರದ ಮತದಾರರ ಒತ್ತಾಯದ ಮೇರೆಗೆ ರಾಜಕಾರಣಕ್ಕೆ ಬಂದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ತಂದೆಯಂತೆಯೇ ಬಡವರ ಸೇವೆಯಲ್ಲಿ ದಿನದ 24 ಗಂಟೆಗಳಲ್ಲಿಯೂ ತೊಡಗಿಸಿಕೊಂಡು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ನಿಂದ ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ತಾಲೂಕಿನ ವೆಂಕಟಗಿರಿ ಕಾಲೋನಿಯಲ್ಲಿ ಹೊದಿಕೆಗಳನ್ನು ವಿತರಿಸಲಾಯಿತು.

ಕರುಣಾಲಯ ಚಾರಿಟಬಲ್ ಟ್ರಸ್ಟ್‌ ಸಿಸ್ಟರ್ ಶೋಶೆ, ಮುಖಂಡರಾದ ಶಿವಣ್ಣ, ಸೋಮು, ಜಗದೀಶ್, ಮಹದೇವು, ರಘು, ಮಹೇಂದ್ರ, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ