ಪುಟ...2ಕ್ಕೆಬ್ರಿಲಿಯಂಟ್ ವಿದ್ಯಾರ್ಥಿನಿಯರು ತಾಲೂಕಿಗೆ ಪ್ರಥಮ

KannadaprabhaNewsNetwork | Published : May 10, 2024 1:30 AM

ಸಾರಾಂಶ

ತಾಳಿಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಲೇಶ್ವರ ಕ್ರಾಸ್‌ನ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಅಂಜನಾರೆಡ್ಡಿ ವಂದಲಿ ಹಾಗೂ ಶ್ರೇಯಾ ತಳ್ಳೋಳ್ಳಿ ೬೨೫ ಕ್ಕೆ ೬೧೩ ಅಂಕಗಳನ್ನು ಪಡೆಯುವ ಮೂಲಕ ತಾಳಿಕೋಟೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗುರುರಾಜ ಸಜ್ಜನ ೬೧೨ ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಸಂಗಮೇಶ ಹೊಸಮನಿ ೬೦೯ ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು ೧೩೯ ವಿದ್ಯಾರ್ಥಿಗಳಲ್ಲಿ ೩೫ ವಿದ್ಯಾರ್ಥಿಗಳು ಶೇ.೯೦ ಕ್ಕಿಂತ ಹೆಚ್ಚು, ೫೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ೮೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ ವಿಷಯದಲ್ಲಿ ೧ ವಿದ್ಯಾರ್ಥಿ ೧೨೫ ಕ್ಕೆ ೧೨೫, ಇಂಗ್ಲೀಷ ವಿಷಯದಲ್ಲಿ ೧ ವಿದ್ಯಾರ್ಥಿ ೧೦೦ ಕ್ಕೆ ೧೦೦, ಹಿಂದಿ ವಿಷಯದಲ್ಲಿ ೭ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦, ಗಣಿತ ವಿಷಯದಲ್ಲಿ ೭ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಮತ್ತು ೧ ವಿದ್ಯಾರ್ಥಿ ಸಮಾಜ ವಿಜ್ಞಾನ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.ಬ್ರಿಲಿಯಂಟ್ ಕನ್ನಡ ಮಾಧ್ಯಮ:

ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿಕಾಸ ಚೋಕಾವಿ ೬೦೫ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ, ಶಶಾಂಕ ಪೋ.ಪಾಟೀಲ ಹಾಗೂ ಸಂಕೇತ ಕೊಟ್ರಗಸ್ತಿ ೫೯೫ ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮತ್ತು ವಿಶಾಲ ಹಿಂಗಮೊರೆ ೫೯೪ ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಒಟ್ಟು ೮೭ ವಿದ್ಯಾರ್ಥಿಗಳಲ್ಲಿ ೧೦ ವಿದ್ಯಾರ್ಥಿಗಳು ಶೇ.೯೦ ಕ್ಕಿಂತ ಹೆಚ್ಚು, ೨೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೫೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ ವಿಷಯದಲ್ಲಿ ೨ ವಿದ್ಯಾರ್ಥಿಗಳು ೧೨೫ ಕ್ಕೆ ೧೨೫, ಹಿಂದಿ ವಿಷಯದಲ್ಲಿ ೦೨ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಮತ್ತು ೧೨ ವಿದ್ಯಾರ್ಥಿಗಳು ಸಮಾಜ-ವಿಜ್ಞಾನ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Share this article