ಬಸವಾಪಟ್ಟಣ ಗ್ರಾಮದ ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದಲ್ಲಿ 2025-26ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿ, ಬಸವಾಪಟ್ಟಣದ ಪ್ರೌಢಶಾಲೆಯಲ್ಲಿ ಕಲಿತ ಅನೇಕರ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಕಂರಿಸಿ ನೆಲೆಸಿದ್ದಾರೆ. ಇದೇ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನಲ್ಲಿ ಪ್ರೌಢಶಾಲೆ ವಿಭಾಗ 100 % ಫಲಿತಾಂಶ ಗಳಿಸಿದ್ದು ಶ್ಲಾಘನಿಯ ಸಾಧನೆಯಾಗಿದೆ. ಇದಕ್ಕಾಗಿ ಶಿಕ್ಷಕರು ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿಬೀಮಣ್ಣನವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಉತ್ತಮವಾದ ಶಿಕ್ಷಣವನ್ನು ಗಳಿಸಿದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಜ್ಞಾನಬಿವೃದ್ದಿಗೆ ಹೆಚ್ಚಿನ ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಪಡೆಯುವುದರಿಂದ ಆರ್ಥಿಕವಾಗಿ ಸಮಾಜಿಕವಾಗಿ, ಶೈಕ್ಷಣಿಕವಾಗಿ, ನಿಮ್ಮ ಭವಿಷ್ಯದಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ. ನಿಮ್ಮ ಭವಿಷ್ಯದಲ್ಲಿ ನಿಜವಾದ ಸಂಪ್ತತ್ತು ಎಂದರೆ ಅದು ವಿದ್ಯೆ ಶಿಕ್ಷಣ ಮಾತ್ರ. ಅದನ್ನು ಕದಿಯಲು ಸಾದ್ಯವಿಲ್ಲ. ಬಾಲ್ಯದಿಂದ ಮುಪ್ಪಿನವರೆಗೆ ನಿಮ್ಮ ನೆರವಿಗೆ ಬರುವುದು ಶಿಕ್ಷಣ ಮಾತ್ರ ಎಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಮಂಜು ಹೇಳಿದರು.ಬಸವಾಪಟ್ಟಣ ಗ್ರಾಮದ ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದಲ್ಲಿ 2025-26ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿ, ಬಸವಾಪಟ್ಟಣದ ಪ್ರೌಢಶಾಲೆಯಲ್ಲಿ ಕಲಿತ ಅನೇಕರ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಕಂರಿಸಿ ನೆಲೆಸಿದ್ದಾರೆ. ಇದೇ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನಲ್ಲಿ ಪ್ರೌಢಶಾಲೆ ವಿಭಾಗ 100 % ಫಲಿತಾಂಶ ಗಳಿಸಿದ್ದು ಶ್ಲಾಘನಿಯ ಸಾಧನೆಯಾಗಿದೆ. ಇದಕ್ಕಾಗಿ ಶಿಕ್ಷಕರು ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿಬೀಮಣ್ಣನವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳಾದ ಮೋನಿಕ, ಮೋಹಿತ್, ಹರೀಪ್ರಿಯಾ, ಅಂಜಲಿ, ವೇದ, ಪವನ್, ಸಂಜನಾ, ಇತರರಿಗೆ ಪ್ರತಿಭಾ ಪುಸ್ಕಾರವನ್ನು ಶಾಸಕರಾದ ಎ ಮಂಜು ನೆರವೇರಿಸಿದರು. ಮುಖ್ಯ ಶಿಕ್ಷಕರು ಮಾತನಾಡಿ, ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೂಷಕರಿಗೆ ಗ್ರಾಮಸ್ಥರಿಗೆ ಸಹಕಾರದಿಂದ ಉತ್ತಮ ಫಲಿತಾಂಶ ಎಂದು ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ಎಸ್.ಡಿ.ಎಮ್ ಸಿ ಸದಸ್ಯರಾದ ಹರಿಶ್, ಗ್ರಾಮಸ್ಥರು, ಟಿ.ವಿ ಕುಮಾರ್, ಮಹೇಂದ್ರ ಕುಮಾರ್, ಗ್ರಾಮಸ್ಥರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.